ಗೋಣಿಕೊಪ್ಪ ವರದಿ, ಅ. ೨೯: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಹಾಕಿ ಲೀಗ್ ಟೂರ್ನಿಯ ಪಂದ್ಯಗಳಲ್ಲಿ ನಾಪೋಕ್ಲು ಶಿವಾಜಿ, ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್, ಪನ್ನಂಗಾಲ ಪ್ಯಾಂಥರ್ಸ್ ಮತ್ತು ಬಿಬಿಸಿ ಗೋಣಿಕೊಪ್ಪ ಗೆದ್ದು ಮುನ್ನಡೆ ಕಾಯ್ದುಕೊಂಡವು.

ನಾಪೋಕ್ಲು ಶಿವಾಜಿ ತಂಡವು ಕಾಕೋಟ್ ಸ್ಟೆçöÊಕರ್ಸ್ ವಿರುದ್ದ ಗೆದ್ದು ಬೀಗಿತು. ನಾಪೋಕ್ಲು ೩, ಕಾಕೋಟ್ ೧ ಗೋಲು ದಾಖಲಿಸಿತು. ನಾಪೋಕ್ಲು ಆಟಗಾರ ಅವಿನಾಶ್, ಶುಭಂ, ಪುನಿತ್, ಕಾಕೋಟ್ ಆಟಗಾರ ದಿವಿನ್ ದೇವಯ್ಯ ಒಂದೊAದು ಗೋಲುಗಳ ಕಾಣಿಕೆ ನೀಡಿದರು.

ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡವು ಟಾಟಾ ಕಾಫಿ ತಂಡವನ್ನು ಮಣಿಸಿತು. ಕೂಡಿಗೆ ೪, ಟಾಟಾ ಕಾಫಿ ೧ ಗೋಲುಗಳನ್ನು ದಾಖಲಿಸಿತು. ಕೂಡಿಗೆ ಪರವಾಗಿ ಪ್ರತುಕ್ ೨, ನಾಚಪ್ಪ, ಸಾರ್ಥಕ್, ಟಾಟಾಕಾಫಿ ಪರ ಕಾರ್ಯಪ್ಪ ಗೋಲು ಹೊಡೆದರು.

ಪನ್ನಂಗಾಲ ಪ್ಯಾಂಥರ್ಸ್ ತಂಡವು ಎಎಸ್‌ಎಫ್ ಕ್ಯಾಲ್ಸ್ ತಂಡದ ವಿರುದ್ದ ಜಯಿಸಿತು. ಪನ್ನಂಗಾಲ ೫ ಗೋಲು ದಾಖಲಿಸಿತು. ಕ್ಯಾಲ್ಸ್ ಗೋಲು ದಾಖಲಿಸುವಲ್ಲಿ ಎಡವಿತು. ಪನ್ನಂಗಾಲ ಆಟಗಾರರಾದ ಸುದರ್ಶನ್ ೨, ಅಪ್ಪಚ್ಚು, ಸುಬ್ಬಯ್ಯ, ಸಂಕೇತ್ ತಲಾ ಒಂದೊAದು ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸಿದರು.

ಬಿಬಿಸಿ ಗೋಣಿಕೊಪ್ಪ ತಂಡಕ್ಕೆ ಭಗವತಿ ಸ್ಪೋರ್ಟ್ಸ್ ಕ್ಲಬ್ ವಿರುದ್ದ ಜಯ ಲಭಿಸಿತು. ಬಿಬಿಸಿ ೫ ಗೋಲು ಹೊಡೆದು ಮಿಂಚು ಹರಿಸಿತು. ಭಗವತಿ ಗೋಲಿನಿಂದ ವಂಚಿತವಾಯಿತು. ಬಿಬಿಸಿ ಪರವಾಗಿ ತನುಶ್ ನಾಚಪ್ಪ, ಲಿಕಿತ್ ತಿಮ್ಮಯ್ಯ, ಸಜನ್ ಗಣಪತಿ, ಆರ್ಯನ್ ಮುತ್ತಪ್ಪ ತಲಾ ಒಂದೊAದು ಗೋಲು ಬಾರಿಸಿದರು.