ಮಡಿಕೇರಿ, ಅ. ೨೯: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ವತಿಯಿಂದ ‘ಭವಿಷ್ಯ ನಿಧಿ ನಿಮ್ಮ ಹತ್ತಿರ’ ೨.೦ ಅಡಿಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ ಮಾಹಿತಿ ಕಾರ್ಯಕ್ರಮವನ್ನು ಸಂಘಟನೆಯ ಮೈಸೂರು ಪ್ರಾದೇಶಿಕ ಕಚೇರಿಯಿಂದ ಮೋದೂರಿನ ಟಿಂಬರ್ ಟೇಲ್ಸ್ ರೆಸಾರ್ಟ್ನಲ್ಲಿ ನಡೆಸಲಾಯಿತು. ಕಾರ್ಯಕ್ರಮಕ್ಕೆ ರೆಸಾರ್ಟ್ನ ಮಾನವ ಸಂಪನ್ಮೂಲ ಅಧಿಕಾರಿ ಶಿವಪ್ರಸಾದ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇ.ಪಿ.ಎಫ್.ಒ ಕಡೆಯಿಂದ ಮುರಳೀಧರನ್, ಬಿ.ಬಿ ವೇಣುಗೋಪಾಲ್, ಕೆ.ಪಿ ಪ್ರಕಾಶ್, ಸ್ವಸ್ತಿಕ್, ಎಸ್.ಎಸ್.ಎಸ್ ಹಾಗೂ ಇ.ಎಸ್.ಐ.ಸಿ ಕಡೆಯಿಂದ ತವನ್ ಹಾಗೂ ಉದ್ಯೋಗದಾತರು, ಉದ್ಯೋಗಿಗಳು ಹಾಜರಿದ್ದರು.

ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆ ಬಗ್ಗೆ ವಿಚಾರ ಸಂಕಿರಣ ನಡೆಸಲಾಯಿತು. ನಂತರ ಪಿಂಚಣಿದಾರರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಾಯಿತು. ಅನೇಕರಿಗೆ ಸ್ಥಳದಲ್ಲೇ ಡಿಜಿಟಲ್ ಜೀವನ ಪ್ರಮಾಣ ಪತ್ರ ನವೀಕರಣ ಮಾಡಲಾಯಿತು.