ಸಿದ್ದಾಪುರ, ಅ. ೨೫ : ಮಗಳ ಮದುವೆ ಹಿನ್ನೆಲೆ ಆಗಮಿಸಿದ್ದ ಕುಟುಂಬಸ್ಥರಿಗೆ ಬಂಧುಮಿತ್ರರಿಗೆ ಊಟಕ್ಕಾಗಿ ಸ್ಕೂಟಿಯಲ್ಲಿ ಮಾಂಸವನ್ನು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭ ಸ್ಕೂಟಿಗೆ ಜೀಪು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯ ಹಿಂಬದಿಯಲ್ಲಿ ಕುಳಿತಿದ್ದ ವಧುವಿನ ತಂದೆಗೆ ಗಂಭೀರ ಗಾಯವಾಗಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಇಂಜಿಲಗೆರೆ ಪುಲಿಯೇರಿ ಗ್ರಾಮದ ನಿವಾಸಿ ಬಾಬು ಎಂಬವರು ತನ್ನ ಸ್ನೇಹಿತನಾದ ರಾಜನ್ ಎಂಬವರ ಸ್ಕೂಟಿಯಲ್ಲಿ ಶನಿವಾರ ಬೆಳಿಗ್ಗೆ ೯,೪೫ರ ಸಮಯಕ್ಕೆ ಸಿದ್ದಾಪುರದಿಂದ ಇಂಜಿಲಗೆರೆಯ ತನ್ನ ಮನೆಗೆ ಹಿಂಬದಿಯಲ್ಲಿ ಕುಳಿತುಕೊಂಡು ತೆರಳುತ್ತಿದ್ದ ಸಂದರ್ಭ ಸಿದ್ದಾಪುರದ ವೀರಾಜಪೇಟೆ ರಸ್ತೆಯ ಅತ್ತಿತೋಪು ಕಾಫಿ ತೋಟದ ಬಳಿ ಏಕಾಏಕಿ ಕೈ ರಸ್ ಕಾಫಿ ತೋಟದ ಒಳಗಿನಿಂದ ಬಂದ ಜೀಪು ಸ್ಕೂಟಿಗೆ ಡಿಕ್ಕಿಯಾಗಿದೆ.

ಪರಿಣಾಮ ಹಿಂಬದಿ ಸವಾರ ಬಾಬು ಅವರÀ ಎಡ ಕಾಲಿಗೆ ಗಂಭೀರ ಗಾಯವಾಗಿದೆ. ಹಾಗೂ ಸ್ಕೂಟಿ ಚಾಲಕÀ ರಾಜನ್ ಅವರ ಎಡ ಕಾಲಿಗೂ ಗಾಯವಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಲಿಗೆ ಗಂಭೀರ ಗಾಯಗೊಂಡ ಬಾಬು ಅವರಿಗೆ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಜೀಪು ಸ್ಕೂಟಿಗೆ ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟಿ ಜಖಂಗೊAಡಿದೆ. ಘಟನೆ ಸಂಬAಧ ಜೀಪು ಚಾಲಕ ಪ್ರವೀಣ್ ವಿರುದ್ಧ ರಾಜನ್ ಅವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾ. ೨೬ರಂದು ನಡೆಯಬೇಕಿದ್ದ ಮಗಳ ಮದುವೆಗೆ ಇಂದು ಆಗಮಿಸಿದ್ದ ಕುಟುಂಬಸ್ಥರು ಹಾಗೂ ಬಂಧುಮಿತ್ರರಿಗೆ ಮಧ್ಯಾಹ್ನದ ಊಟಕ್ಕಾಗಿ ಮಾಂಸ ತರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. - ವಾಸು