ಪೊನ್ನಂಪೇಟೆ, ಅ. ೨೫: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟುವಿನ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಪಿ.ಯು. ಕಾಲೇಜು ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಗುಡ್ಡಗಾಡು ಓಟ ಸ್ಪರ್ಧೆ ಪೊನ್ನಂಪೇಟೆಯಲ್ಲಿ ನಡೆಯಿತು.
ಸ್ಪರ್ಧೆಗೆ ಸಿ.ಐ.ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಡಾ. ರೋಹಿಣಿ ತಿಮ್ಮಯ್ಯ ಚಾಲನೆ ನೀಡಿದರು. ಸ್ಪರ್ಧೆಯಲ್ಲಿ ತಾಲೂಕಿನ ಹಲವಾರು ಕಾಲೇಜಿನ ಕ್ರೀಡಾಪಟುಗಳು ಭಾಗವಹಿಸಿದ್ದರು. ಬಾಲಕಿಯರ ವಿಭಾಗದಲ್ಲಿ ವೀರಾಜಪೇಟೆಯ ಎಸ್.ಎಂ.ಎಸ್. ಕಾಲೇಜಿನ ಹೇಮಾವತಿ ಕೆ.ಪಿ., ಶ್ರೀಮಂಗಲ ಪಿ.ಯು. ಕಾಲೇಜಿನ ರೂಪ ಪಿ.ಎಂ., ಭಾಗ್ಯ ಪಿ.ಕೆ. ಮತ್ತು ರಾಧಿಕ ಪಿ.ಸಿ., ಪೊನ್ನಂಪೇಟೆ ಸಂತ ಅಂತೋಣಿ ಪಿ.ಯು. ಕಾಲೇಜಿನ ರೀಷ್ಮಾ ಟಿ.ಆರ್., ಸಿ.ಐ.ಪಿ.ಯು. ಕಾಲೇಜಿನ ಪೊನ್ನಮ್ಮ ಬಿ.ಸಿ. ಭಾಗವಹಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು. ಬಾಲಕರ ವಿಭಾಗದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಲಯನ್ಸ್ ಕಾಲೇಜಿನ ವಿದ್ಯಾರ್ಥಿ ಪ್ರಶಾಂತ್ ಸಿ.ವೈ., ವೀರಾಜಪೇಟೆಯ ಸಂತ ಅನ್ನಮ್ಮ ಪಿ.ಯು. ಕಾಲೇಜಿನ ಅಭಿ ಎಂ.ಎ., ನಿಹಾಲ್ ಭಾಗವಹಿಸಿದ್ದರು.
ಪೊನ್ನಂಪೇಟೆಯ ಸಂತ ಅಂತೋಣಿ ಪಿ.ಯು. ಕಾಲೇಜಿನ ವಿದ್ಯಾರ್ಥಿ ಬಾಲಸುಬ್ರಮಣ್ಯನ್, ಶ್ರೀಮಂಗಲ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿಜು ಪಿ.ಎ., ಸಂತೋಷ್ ಪಿ.ಎಂ., ತಾಲೂಕು ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು. ಈ ತಾಲೂಕು ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯ ನೇತೃತ್ವವನ್ನು ಪೊನ್ನಂಪೇಟೆಯ ಸಿ.ಐ.ಪಿ.ಯು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹರೀಶ್ ಕುಮಾರ್ ವಹಿಸಿದ್ದರು. ಸಿ.ಐ.ಪಿ.ಯು. ಕಾಲೇಜಿನ ಉಪನ್ಯಾಸಕ ವೃಂದದವರು ಮತ್ತು ವಿವಿಧ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಜರಿದ್ದರು.