ವೀರಾಜಪೇಟೆ, ಅ. ೨೫: ವೀರಾಜಪೇಟೆ ಪುರಸಭೆಯ ವ್ಯಾಪ್ತಿಯಲ್ಲಿನ ಜನಸಾಮಾನ್ಯರÀ ವಾಣಿಯಾಗಿ ದುಡಿಯುವ ಉದ್ದೇಶದಿಂದ ನಾಗರಿಕ ಸಮಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ಸಮಿತಿಯ ಸಂಯುಕ್ತ ವೇದಿಕೆಯನ್ನು ರಚಿಸಲಾಗಿದೆ ಎಂದು ನಾಗರಿಕ ಸಮಿತಿಯ ಡಾ. ದುರ್ಗಾ ಪ್ರಸಾದ್ ತಿಳಿಸಿದರು. ವೀರಾಜಪೇಟೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸಾಮಾನ್ಯ ಜನರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಇಂದು ಅಧಿಕಾರದಲ್ಲಿರುವವರು ಸಂಪೂರ್ಣ ವಿಫಲರಾಗಿದ್ದಾರೆ.

ವಿರೋಧ ಪಕ್ಷ ತನ್ನ ಕರ್ತವ್ಯವನ್ನು ನೆರವೇರಿಸಲು ವಿಫಲವಾಗಿದೆ. ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಬೇಕಾದ ಸದಸ್ಯರುಗಳು ಸ್ವಾರ್ಥ ಸಾಧನೆಯಲ್ಲಿ ನಿರತರಾಗಿದ್ದಾರೆ, ಈ ಪರಿಸ್ಥಿತಿಯಲ್ಲಿ ಜನರು ಅನುಭವಿಸುತ್ತಿರುವ ಪ್ರತಿಯೊಂದು ಸಮಸ್ಯೆಯನ್ನೂ ವಸ್ತುನಿಷ್ಠವಾಗಿ ವಿಶ್ಲೇಷಿಸಿ ಅವುಗಳ ಪರಿಹಾರಕ್ಕಾಗಿ ನಿರಂತರವಾಗಿ ನೀಸ್ವಾರ್ಥತೆಯಿಂದ ಶ್ರಮಿಸುವುದು, ಅಗತ್ಯವಿದ್ದಲ್ಲಿ ಜನರ ಸಹಕಾರದೊಂದಿಗೆ ವಿವಿಧ ರೂಪದ ಹೋರಾಟಗಳನ್ನು ಸಂಘಟಿಸುವ ಉದ್ದೇಶದಿಂದ ವೇದಿಕೆಯೊಂದನ್ನು ರಚಿಸಲು ವೀರಾಜಪೇಟೆಯಲ್ಲಿ ವೀರಾಜಪೇಟೆಯ ನಾಗರಿಕ ಸಮಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ಸಂಘಟನೆಯ ಸದಸ್ಯರು ಸಂಯುಕ್ತ ಸಭೆ ನಡೆಸಿದರು. ನಂತರ ಸಂಯುಕ್ತ ವೇದಿಕೆಯನ್ನು ರಚಿಸಿದರು. ಈ ವೇದಿಕೆಗೆ ಎಂಟು ಸದಸ್ಯರ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಮಾಳೆÃಟಿರ ಕಾಳಯ್ಯ, ಹೆಚ್.ಬಿ. ಸತೀಶ್, ತಾತಂಡ ದೇವಯ್ಯ, ಕೆ.ವಿ. ಸುನಿಲ್, ಅನಿತಾ ಲೋಬೋ, ಪಿ.ಕೆ. ಅಬ್ದುಲ್ ರಹ್ಮಾನ್, ಎನ್.ಕೆ. ಅಬ್ದುಲ್ ಶರೀಫ್ ಮತ್ತು ದುರ್ಗಾಪ್ರಸಾದ್ ಈ ಸಮಿತಿಯ ಸದಸ್ಯರಾಗಿದ್ದಾರೆ.

ಸಂಚಾಲಕರಾಗಿ ದುರ್ಗಾಪ್ರಸಾದ್ ಮತ್ತು ಸಹ ಸಂಚಾಲಕರಾಗಿ ಎಂ.ಎಸ್. ಕಾಳಯ್ಯ ಅವರನ್ನು ಆಯ್ಕೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಸಮಾನ ಚಿಂತನೆಯವರನ್ನು ಗುರುತಿಸಿ ಅವರನ್ನು ವೇದಿಕೆಯಲ್ಲಿ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಡಾ. ಇ.ರ. ದುರ್ಗಾ ಪ್ರಸಾದ್ ತಿಳಿಸಿದ್ದಾರೆ.