ಮಡಿಕೇರಿ, ಅ. ೨೪: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ತಾ. ೨೬ ರಂದು ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರ ಬಡ್ಡಡ್ಕ, ಆಲೆಟ್ಟಿ ಮತ್ತು ಕಲ್ಲಪ್ಪಳ್ಳಿ ವ್ಯಾಪ್ತಿಯಲ್ಲಿ ‘ಅರೆಭಾಷೆ ಗ್ರಾಮೋತ್ಸವ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಅರೆಭಾಷೆ ಮತ್ತು ಅರೆಭಾಷೆ ಸಂಸ್ಕೃತಿ ಆಚಾರ ವಿಚಾರಗಳು ಮರೆತು ಹೋಗದಂತೆ ಹಾಗೂ ಭಾಷೆಯ ಮೇಲೆ ಪ್ರೀತಿ ಅಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಮುಂದಿನ ಪೀಳಿಗೆಗೆ ಭಾಷೆಯನ್ನು ಕೊಂಡೊಯ್ಯಲು ಭಾಷೆಯನ್ನು ಉಳಿಸಿ ಬೆಳೆಸಿ ಹಬ್ಬಿಸುವ ಪ್ರಯತ್ನವಾಗಿ ಈ ಕಾರ್ಯಕ್ರಮವನ್ನು ಅಕಾಡೆಮಿಯು ರೂಪುಗೊಳಿಸಿದೆ.ಇಡೀ ದಿನ ನಡೆಯುವ ಕಾರ್ಯಕ್ರಮವನ್ನು ಪೂರ್ವಾಹ್ನ ಗಂಟೆ ೯:೩೦ಕ್ಕೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿಯವರ ಅಧ್ಯಕ್ಷತೆಯಲ್ಲಿ ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ಇದರ ನಿರ್ದೇಶಕ ಪುರುಷೋತ್ತಮ ಕೋಲ್ಚಾರ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಆಲೆಟ್ಟಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಭಾಗೀರಥಿ ಪತ್ತುಕುಂಜ, ಶಶಿಕಲಾ ದೋಣಿಮೂಲೆ, ಶಾಂತಪ್ಪ ಬಡ್ಡಡ್ಕ, ಕಲ್ಲಪ್ಪಳ್ಳಿ ಗ್ರಾಮಪಂಚಾಯತ್ ಸದಸ್ಯರಾದ ರಾಧಾಕೃಷ್ಣ ಆಲುಗುಂಜ ಇವರುಗಳು ಉಪಸ್ಥಿತರಿರುತ್ತಾರೆ.
ಗ್ರಾಮೋತ್ಸವದ ಅಂಗವಾಗಿ ವಿವಿಧ ಸಾಂಸÀ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು ಸಾಂಪ್ರದಾಯಿಕ ರೀತಿಯ ಬುಟ್ಟಿ ಹೆಣೆಯುವಿಕೆ, ಗೆರಸೆ ಹೆಣೆಯುವಿಕೆ, ತೆಂಗಿನಗರಿಯ ತಟ್ಟಿ ಹೆಣೆಯುವಿಕೆ, ಕಂಗಿನ ಹಾಳೆಯಲ್ಲಿ ಕುಳಿತು ಎಳೆಯುವುದು, ಕುಟ್ಟಿದೊಣ್ಣೆ ಆಟ, ಕುಂಟಾ ಬಿಲ್ಲೆ ಮೊದಲಾದ ಪ್ರಾತ್ಯಕ್ಷಿಕೆಗಳು ಹಾಗೂ ಸಾಂಪ್ರದಾಯಿಕ ವಸ್ತುಗಳ ಪ್ರದರ್ಶನವು ನಡೆಯಲಿದೆ.
ಉತ್ಸವದ ಅಂಗವಾಗಿ ಅರೆಭಾಷೆ ಚಲನಚಿತ್ರಗಳಾದ ಸುದೀಪ್ ಏನೆಕಲ್ ನಿರ್ದೇಶನದ ‘ಕೇಸ್ ಪುಸ್ಕ’ ಹಾಗೂ ಸಂತೋಷ್ ಮಾಡ ನಿರ್ದೇಶನದ ರಾಷ್ಟಿçÃಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ಮೂಗಜ್ಜನ ಕೋಳಿ ಚಿತ್ರಗಳ ಪ್ರದರ್ಶನ ನಡೆಯಲಿದೆ.
ಮಧ್ಯಾಹ್ನ ೨:೩೦ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಸಮಾರಂಭದಲ್ಲಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ಇದರ ಪೂರ್ವಾಧ್ಯಕ್ಷÀ ದಿನೇಶ್ ಮಡಪ್ಪಾಡಿ ಉದ್ಘಾಟಿಸಲಿದ್ದಾರೆ. ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಧ್ಯಾಪಕ ಸಂಜೀವ ಕುದ್ಪಾಜೆ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಅಲೆಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ ವಸಂತ್, ಆಲೆಟ್ಟಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಅರುಣ್ ರಂಗತ್ತಮಲೆ, ಮಾಜಿ ಜಿಲ್ಲಾ ಪರಿಷತ್ ಸದಸ್ಯ ಜಿ. ದೇವಪ್ಪ ನಾಯ್ಕ್, ಸಾಹಿತಿ ಹಾಗೂ ಸಂಶೋಧಕರಾದ ಡಾ. ವಿದ್ಯಾಧರ ಬಡ್ಡಡ್ಕ, ಶ್ರೀ ರಾಮಕೃಷ್ಣ ವಿದ್ಯಾಸಂಘ (ರಿ) ಬಡ್ಡಡ್ಕ ಇದರ ಅಧ್ಯಕ್ಷÀ ಡಾ. ಸಾಯಿಗೀತ ಜ್ಞಾನೇಶ್, ಅಲೆಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಸತ್ಯಕುಮಾರ್ ಆಡಿಂಜ ಇವರುಗಳು ಭಾಗವಹಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ತಿಳಿಸಿದ್ದಾರೆ.