ಮಡಿಕೇರಿ, ಅ. ೨೪: ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸುವ ಉದ್ದೇಶದಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನ. ೧ ರಂದು ನವದೆಹಲಿ ಚಲೋ ಕೊಡವ ಸತ್ಯಾಗ್ರಹ ನಡೆಯಲಿದೆ ಎಂದು ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಂವಿಧಾನದ ೬ ನೇ ಶೆಡ್ಯೂಲ್ ಅಡಿಯಲ್ಲಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಮೂಲಕ ಸ್ವ-ನಿರ್ಣಯ ಮತ್ತು ಸ್ವ-ಆಡಳಿತದ ಹಕ್ಕೊತ್ತಾಯಗಳ ಪರ ಹೋರಾಟ ನಡೆಸುತ್ತಿರುವ ಸಿ.ಎನ್.ಸಿ. ಸಂಘಟನೆ ನ. ೧ ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತ ಸತ್ಯಾಗ್ರಹವನ್ನು ನಡೆಸಲಿದೆ. ರಾಜ್ಯ ಮರುಸಂಘಟನಾ ದಿನವನ್ನು “ಕೊಡವ ನೆಲದ ದುರಾಕ್ರಮಣದ ದಿನ” ಎಂದು ಆಚರಿಸುವುದಾಗಿ ಮಾಹಿತಿ ನೀಡಿದ್ದಾರೆ.
೧೯೫೬ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರು ಪ್ರೀತಿಯ ತಾಯ್ನಾಡನ್ನು ಅಂದರೆ ಹಿಂದಿನ “ಸಿ” ಭಾಗವಾದ ಕೊಡವರ ರಾಜ್ಯವನ್ನು ಕಳೆದುಕೊಂಡ ದಿನ. ಇದು ೨೦ ನೇ ಶತಮಾನದ ಅತ್ಯಂತ ದೊಡ್ಡ ಭೌಗೋಳಿಕ-ರಾಜಕೀಯ ಉತ್ಪಾತವಾಗಿದೆ. ರಾಜ್ಯ ಮರುಸಂಘಟನಾ ಕಾಯ್ದೆಯಡಿ ನಮ್ಮ ರಾಜ್ಯವನ್ನು ವಿಲೀನಗೊಳಿಸಿದ ನಂತರ ಕೊಡವರು ತಮ್ಮ ಸ್ವಂತ ತಾಯ್ನಾಡಿನಲ್ಲಿ ಅಸ್ತಿತ್ವವಿಲ್ಲದವರಾದೆವು.
ನಮ್ಮ ವಿಶಿಷ್ಟ ಆನಿಮಿಸ್ಟಿಕ್ ಗುರುತು, ಜಾನಪದ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕಾನೂನು ವ್ಯವಸ್ಥೆಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿಹಾಕಲಾಯಿತು. ಬಹುಸಂಖ್ಯಾತ ಸಮುದಾಯಗಳ ಅನುಕೂಲಕ್ಕಾಗಿ ಮತ್ತು ಪ್ರಯೋಜನಕ್ಕಾಗಿ ಕೊಡವರನ್ನು ರಾಜ್ಯ ಬಲದಿಂದ ಏಕರೂಪಗೊಳಿಸಲಾಗಿದೆ. ವ್ಯವಸ್ಥಿತವಾಗಿ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ. ಸರಕಾರಿ ವ್ಯವಸ್ಥೆ ಆಕ್ರಮಣಕಾರಿ ಶಕ್ತಿಯಂತೆ ವರ್ತಿಸುತ್ತಿದೆ, ಕೊಡವರನ್ನು ಅಧೀನ ಪ್ರಜೆಗಳಾಗಿ ಮತ್ತು ಕೊಡವಲ್ಯಾಂಡ್ ಅನ್ನು ಸಂಪನ್ಮೂಲ ಉತ್ಪಾದಿಸುವ ಆಂತರಿಕ ವಸಾಹತು - ಆಕ್ರಮಿತ ಪ್ರದೇಶವಾಗಿ ಪರಿಗಣಿಸುತ್ತಿದೆ. ಪ್ರತಿಯೊಂದು ವಿಚಾರದಲ್ಲೂ ಕೊಡವರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ.ರಾಷ್ಟçದ ಎದುರು ನಮ್ಮ ನೋವು ಮತ್ತು ಸಂಕಷ್ಟವನ್ನು ಎತ್ತಿ ತೋರಿಸಲು ಹಾಗೂ ಜಾಗತಿಕ ಧರ್ಮ ಪ್ರಜ್ಞೆಯನ್ನು ಜಾಗೃತಿಗೊಳಿಸಲು ನ. ೧ ರಂದು ರಾಷ್ಟç ರಾಜಧಾನಿಯಲ್ಲಿ ಶಾಂತಿಯುತವಾಗಿ ಸತ್ಯಾಗ್ರಹ ನಡೆಸಿ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ ಸರಕಾರ ಮತ್ತು ಭಾರತ ಸರಕಾರ ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕು. ಸಿ.ಎನ್.ಸಿ. ಸಂಘಟನೆ ಕೊಡವರ ಪರ ಪ್ರತಿಪಾದಿಸಿರುವ ಬೇಡಿಕೆಗಳನ್ನು ಸಾಂವಿಧಾನಿಕ ಪರಿಹಾರವಾಗಿ ಮೂಲಭೂತ ಹಕ್ಕುಗಳ ಅಡಿಯಲ್ಲಿ ಪರಿಗಣಿಸಬೇಕು ಮತ್ತು ಕೊಡವಲ್ಯಾಂಡ್ ಅನ್ನು ಸಂವಿಧಾನದ ೬ ನೇ ಶೆಡ್ಯೂಲ್ ಅಡಿಯಲ್ಲಿ ತರಬೇಕು. ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರನ್ನು ಪರಿಶಿಷ್ಟ ಪಂಗಡಗಳ (S.ಖಿ) ವರ್ಗೀಕರಣದ ಅಡಿಯಲ್ಲಿ ಸೇರಿಸಬೇಕು ಮತ್ತು ಸಿಖ್ಖರ ಕಿರ್ಪಾಣ್ ಗೆ ಸಮಾನವಾಗಿ ಸಂವಿಧಾನದ ಆರ್ಟಿಕಲ್ ೨೫ ಮತ್ತು ೨೬ ರಡಿಯಲ್ಲಿ ಕೊಡವ ಧಾರ್ಮಿಕ ಸಂಸ್ಕಾರ ಗನ್ ತೋಕ್ ಹಕ್ಕನ್ನು ಚಿರಸ್ಥಾಯಿಯಾಗಿ ಉಳಿಸಿಕೊಳ್ಳಲು ಸಾಂವಿಧಾನಿಕ ಕಾರ್ಯವಿಧಾನಗಳನ್ನು ಪ್ರಾರಂಭಿಸಬೇಕು. ಕೊಡವರನ್ನು ಅಳಿವಿನಂಚಿನಲ್ಲಿರುವ ಮತ್ತು ಕ್ಷೀಣಿಸುತ್ತಿರುವ ಸಮುದಾಯವೆಂದು ಗುರುತಿಸಿ ಖಚಿತಪಡಿಸಬೇಕು. ೨೦೨೬-೨೭ ರಲ್ಲಿ ನಡೆಯುವ ೧೬ನೇ ರಾಷ್ಟಿçÃಯ ಜನಸಂಖ್ಯಾ ಗಣತಿ ಸಂದರ್ಭ ಕೊಡವರಿಗೆ ಪ್ರತ್ಯೇಕ ಕಾಲಂ ಅಳವಡಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ಸಾಂಪ್ರದಾಯಿಕ ಪ್ರದೇಶಗಳು ಮತ್ತು ಸಂಪನ್ಮೂಲಗಳನ್ನು ಮರಳಿ ಪಡೆಯುವ ಮತ್ತು ರಕ್ಷಿಸುವ ಹಕ್ಕನ್ನು ಒಳಗೊಂಡAತೆ ಆದಿಮಸಂಜಾತ ಕೊಡವರ ಹಕ್ಕುಗಳ ಕುರಿತು ವಿಶ್ವಸಂಸ್ಥೆಯ ಮಾರ್ಗಸೂಚಿಗಳನ್ನು ಜಾರಿಗೆ ತರುವಂತೆ ಸತ್ಯಾಗ್ರಹದ ಸಂದರ್ಭ ಒತ್ತಾಯಿಸಲಾಗುವುದು ಎಂದು ಎನ್.ಯು. ನಾಚಪ್ಪ ತಿಳಿಸಿದ್ದಾರೆ.