ಕಣಿವೆ, ಅ. ೨೩: ಮಳೆಗಾಲವನ್ನು ಮೀರಿಸುತ್ತಿರುವ ಮುಂಗಾರೋತ್ತರ ಮಳೆಯಿಂದಾಗಿ ಅನ್ನದಾತರು ಕೈಗೊಂಡಿರುವ ಭತ್ತದ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ದಿನನಿತ್ಯವೂ ಸುರಿಯುತ್ತಿರುವ ಮಳೆಯಿಂದಾಗಿ ಗರ್ಭಾವಸ್ಥೆಯಲ್ಲಿ ಇರುವ ಭತ್ತದ ಕೊಳವೆಯ ಒಳಗೆ ಮಳೆಯ ನೀರು ಸೇರುವ ಕಾರಣ ಭತ್ತ ಜೆಳ್ಳು ಬೀಳುವ ಅಪಾಯದ ಬಗ್ಗೆ ಹುಲುಸೆ ಗ್ರಾಮದ ಪ್ರಗತಿಪರ ರೈತ ಕಪನಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕುಶಾಲನಗರ ತಾಲೂಕಿನಾದ್ಯಂತ ಹಾರಂಗಿ ಅಚ್ಚುಕಟ್ಟಿನಲ್ಲಿ ಬೆಳೆದಿರುವ ಭತ್ತದ ವಿವಿಧ ತಳಿಗಳು ಗರ್ಭಾವಸ್ಥೆಗೆ ತಲುಪಿವೆ.ಹಾಗಾಗಿ ಈಗ ಒಂದಷ್ಟು ದಿನಗಳ ಕಾಲ ಮಳೆ ಸ್ಥಗಿತಗೊಂಡರೆ ಎಲ್ಲದಕ್ಕೂ ಉತ್ತಮ ಎನ್ನುತ್ತಿದ್ದಾರೆ ರೈತರು.