ಮಡಿಕೇರಿ, ಅ. ೨೩: ಕೊಡಗು ಜಿಲ್ಲೆ ಪ್ರಸಕ್ತ ವರ್ಷ ಮೇ ತಿಂಗಳ ಅಂತ್ಯದಿAದಲೇ ಮಳೆಗಾಲವನ್ನು ಎದುರಿಸುತ್ತಿದ್ದು, ಇದೀಗ ಅಕ್ಟೋಬರ್ ತಿಂಗಳು ಪೂರ್ಣಗೊಳ್ಳುವ ಹಂತ ತಲುಪಿದರೂ ಮಳೆ ಮತ್ತೂ ಮುಂದುವರಿಯುತ್ತಿದೆ. ಸತತವಾಗಿ ಮಳೆಯನ್ನೇ ಹಲವು ತಿಂಗಳಿನಿAದ ಅನುಭವಿಸುತ್ತಿರುವ ಜಿಲ್ಲೆಯ ಜನರು ಒಂದು ರೀತಿಯಲ್ಲಿ ಜರ್ಜರಿತಗೊಂಡAತಿದ್ದಾರೆ.
ಈಗಾಗಲೇ ಜಿಲ್ಲೆಯ ಹಲವೆಡೆಗಳಲ್ಲಿ ೩೦೦ ಇಂಚುಗಳಿಗೂ ಅಧಿಕ ಹಾಗೂ ಇನ್ನು ಹಲವೆಡೆ ೨೦೦ ರಿಂದ ೨೫೦ ಇಂಚುಗಳಷ್ಟು ಭಾರೀ ಮಳೆ ಸುರಿದಿದ್ದು ಇಂತಹ ಪ್ರದೇಶಗಳಲ್ಲಿನ ಜನರು ಮಳೆಯ ಸನ್ನಿವೇಶ ಯಾವತ್ತು ಮುಗಿದು ಒಂದಷ್ಟು ಬಿಸಿಲು ಕಾಣುವುದೋ ಎಂಬAತೆ ಪರಿತಪಿಸುವಂತಾಗಿದೆ. ಸತತ ಮಳೆಯಿಂದಾಗಿ ಅದರಲ್ಲೂ ಜಿಲ್ಲೆಯ ಆರ್ಥಿಕತೆಯ ಬೆನ್ನುಲುಬಾಗಿರುವ ಕಾಫಿ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿದೆ. ಈಗಿನ ಅಕಾಲಿಕ ಮಳೆಯಿಂದಾಗಿ ಬೆಳೆಗಾರರ ಆತಂಕ ಹೆಚ್ಚುತ್ತಿದೆ. ಅರೇಬಿಕಾ ಕಾಫಿ ಈಗಾಗಲೇ ಹಣ್ಣಾಗುತ್ತಿದ್ದು, ಕಾಫಿ ಉದುರುವಿಕೆ ಹೆಚ್ಚಾಗುತ್ತಿದೆ. ರೋಬಸ್ಟಾ ಕಾಫಿಗೂ ಈಗಿನ ಮಳೆ ಸಮಸ್ಯೆಯಾಗಿದೆ. ತೋಟಗಳ ಕೆಲಸ ಕಾರ್ಯಕ್ಕೆ ಈ ವಾತಾವರಣದಿಂದ ಅಡಚಣೆಯಾಗುತ್ತಿದ್ದು, ಬೆಳೆಗಾರರು ಬಿಸಿಲಿನ ವಾತಾವರಣವನ್ನು ಎದುರು ನೋಡುತ್ತಿದ್ದಾರೆ.
ತಾ.೨೪ರಿಂದ (ಇಂದಿನಿAದ) ಸ್ವಾತಿ ಮಳೆ ನಕ್ಷತ್ರ ಆರಂಭಗೊಳ್ಳುತ್ತಿದೆ. ಈ ಬಾರಿ ಮಳೆಗಾಲ ಆರಂಭದಿAದ ಎಲ್ಲಾ ಮಳೆ ನಕ್ಷತ್ರಗಳಲ್ಲೂ ವಿಪರೀತ ಮಳೆಯಾಗಿದ್ದು, ೨೦೨೫ರ ವರ್ಷಾಂತ್ಯಕ್ಕೆ ಇನ್ನೇನು ಕೇವಲ ೨ ತಿಂಗಳಷ್ಟೆ ಬಾಕಿ ಉಳಿದಿದೆ. ಈ ಸಂದರ್ಭದಲ್ಲೂ ವಾತಾವರಣದ ಅಸಹಜತೆಯಿಂದಾಗಿ ದಿನನಿತ್ಯ ಮಳೆ ಸುರಿಯುತ್ತಿರುವುದು ಆತಂಕಕಾರಿಯಾಗಿದೆ. ಜಿಲ್ಲೆಯಲ್ಲಿ ಕಳೆದ ಕೆಲದಿನಗಳಿಂದ ಪ್ರತಿದಿನ ಮಳೆ ಸುರಿಯುತ್ತಿದೆ. ಈ ಅವಧಿಯಲ್ಲೂ ಗುಡುಗು-ಮಿಂಚು ಸಹಿತ ಮಳೆ ಸುರಿಯುತ್ತಿರುವುದು ೪ಆರನೇ ಪುಟ (ಮೊದಲ ಪುಟದಿಂದ) ಕಾಫಿ ಅವಲಂಬಿತ ಜಿಲ್ಲೆಗೆ ವ್ಯತರಿಕ್ತವಾದಂತಿದೆ.
ಸರಾಸರಿ ೨.೧೪ ಇಂಚು
ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸರಾಸರಿ ೨.೧೪ ಇಂಚು ಮಳೆ ಸುರಿದಿದೆ. ಮಡಿಕೇರಿ ತಾಲೂಕಿನಲ್ಲಿ ೧.೫೩ ಇಂಚು, ವೀರಾಜಪೇಟೆ ೧.೮೦ ಇಂಚು, ಪೊನ್ನಂಪೇಟೆ ೧.೩೩, ಸೋಮವಾರಪೇಟೆ ೨.೮೧ ಹಾಗೂ ಕುಶಾಲನಗರ ತಾಲೂಕಿನಲ್ಲಿ ೩.೨೫ ಇಂಚು ಮಳೆಯಾಗಿದೆ. ಸಾಮಾನ್ಯವಾಗಿ ಮಳೆ ಕಡಿಮೆ ಇರುವ ಕುಶಾಲನಗರ ತಾಲೂಕಿಗೆ ೨೪ ಗಂಟೆಗಳಲ್ಲಿ ೩.೨೫ ಇಂಚು ಮಳೆ ದಾಖಲಾಗಿರುವುದು ವಿಶೇಷವಾಗಿದೆ.
ಜಿಲ್ಲೆಯಲ್ಲಿ ಜನವರಿಯಿಂದ ಈತನಕ ಸರಾಸರಿ ೧೧೯.೯೪ ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ ೧೧೮.೧೫ ಇಂಚಿನಷ್ಟಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೧೭೭.೮೬ ಇಂಚು, ವೀರಾಜಪೇಟೆ ೧೦೫, ಸೋಮವಾರಪೇಟೆ ೧೩೯, ಕುಶಾಲನಗರ ತಾಲೂಕಿನಲ್ಲಿ ೫೬.೩೫ ಇಂಚುಗಳಷ್ಟು ಸರಾಸರಿ ಮಳೆ ದಾಖಲಾಗಿದೆ.