ಕೂಡಿಗೆ, ಅ. ೨೩: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಭರ್ತಿಯಾಗಿದ್ದು, ಅಣೆಕಟ್ಟೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಅಕ್ಟೋಬರ್ ತಿಂಗಳಲ್ಲಿ ಸಂಪೂರ್ಣವಾಗಿ ತುಂಬಿ ದಾಖಲೆಯ ನೀರು ಸಂಗ್ರಹವಾಗಿದೆ. ಅಣೆಕಟ್ಟೆಯಿಂದ ಮುಖ್ಯ ಕ್ರೆಸ್ಟ್ ಗೇಟ್ ಮೂಲಕ ೫ ಸಾವಿರ ಕ್ಯೂಸೆಕ್ಸ್(ಕ್ಯೂಬಿಕ್ ಫೀಟ್ ಪರ್ ಸೆಕೆಂಡ್) ಇಂದಿನಿAದ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಕಳೆದ ಒಂದು ವಾರದಿಂದಲೂ ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಒಳ ಹರಿವಿನಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಭದ್ರತಾ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ ಬಂದ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.

ಈ ಸಾಲಿನಲ್ಲಿ ಇದುವರೆಗೆ ೪೪ ಟಿ.ಎಂ.ಸಿ ದಾಖಲೆಯ ನೀರು ಅಣೆಕಟ್ಟೆಗೆ ಹರಿದು ಬಂದಿದೆ. ಕಳೆದ ೨೫ ವರ್ಷಗಳ ಇತಿಹಾಸದಲ್ಲಿ ಸಾಲಿನ ಆರಂಭದಿAದ ಅಕ್ಟೋಬರ್‌ವರೆಗೆ ಇಷ್ಟು ನೀರು ಹರಿದು ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ೩೭ ಟಿ.ಎಂ.ಸಿ ನದಿಗೆ ಹಾಗೂ ೫ ಟಿ.ಎಂ.ಸಿ ನಾಲೆಗೆ ಹರಿಸಲಾಗಿದೆ. ಉಳಿದ ನೀರು ಆವಿಯಾಗಿದೆ.

ಕಳೆದ ೫ ತಿಂಗಳುಗಳಿAದ ಅಣೆಕಟ್ಟೆಗೆ ದಿನ ಕಳೆದಂತೆ ಒಳ ಹರಿವು ಏರಿಕೆಯಾಗುತ್ತಿದೆ. ಅಣೆಕಟ್ಟೆಯ ಭದ್ರತಾ ೪ಏಳ (ಮೊದಲ ಪುಟದಿಂದ)ಹಿತದೃಷ್ಟಿಯಿAದ ಮತ್ತು ಅಣೆಕಟ್ಟೆಯ ಸಮತೋಲನ ಆಧಾರದ ಮೇಲೆ ಹಾಗೂ ರಾಜ್ಯ ಕಾವೇರಿ ನೀರಾವರಿ ನಿಗಮದ ಸೂಚನೆ ಅನ್ವಯ ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿ ವರ್ಗದವರು ನೀರಿನ ಮಟ್ಟವನ್ನು ದಿನಂಪ್ರತಿ ಪರಿಶೀಲನೆ ನಡೆಸಿದ ನಂತರÀ ನದಿಗೆ ನೀರನ್ನು ಹರಿಸಲಾಗುತ್ತಿತ್ತು.

ತಾ.೨೩ಕ್ಕೆ ಕೊನೆಗೊಂಡAತೆ ನೀರಿನ ಗರಿಷ್ಠ ಮಟ್ಟ ೨,೮೫೭.೨೬ ಅಡಿಗಳಷ್ಟಿದ್ದು, ಅಣೆಕಟ್ಟೆಯಲ್ಲಿ ೭.೧೬ ಟಿ.ಎಂ.ಸಿ ನೀರು ಸಂಗ್ರಹ ಇದೆ.

-ಕೆ.ಕೆ. ನಾಗರಾಜಶೆಟ್ಟಿ