ಕೊಡ್ಲಿಪೇಟೆ,ಅ.೨೩: ಲಾರಿಯಿಂದ ಡಿಕ್ಕಿಪಡಿಸಿ ಉದ್ಯಮಿಯೋರ್ವರ ಕೊಲೆಗೆ ಯತ್ನಿಸಿರುವ ಘಟನೆ ಕೊಡ್ಲಿಪೇಟೆ ಸಮೀಪದ ಕೆರಗನಹಳ್ಳಿಯಲ್ಲಿ ನಡೆದಿದ್ದು, ಅಪಾಯದಿಂದ ಪಾರಾದ ಉದ್ಯಮಿ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೊಡ್ಲಿಪೇಟೆ ಭಾಗದ ಕಾಂಗ್ರೆಸ್ ಮುಖಂಡರು ಹಾಗೂ ಉದ್ಯಮಿಯಾಗಿರುವ ತೇಜಕುಮಾರ್ ಎಂಬವರ ಮೇಲೆ ಕೊಲೆಯತ್ನ ನಡೆದಿದ್ದು, ಘಟನೆಗೆ ಹಳೆಯ ದ್ವೇಷ ಕಾರಣ ಎನ್ನಲಾಗಿದೆ.

ಕೊಡ್ಲಿಪೇಟೆಯ ಹ್ಯಾಂಡ್‌ಪೋಸ್ಟ್ನಲ್ಲಿರುವ ಪೆಟ್ರೋಲ್ ಬಂಕ್ ವೊಂದರ ಮಾಲೀಕ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರೂ ಆಗಿರುವ ಜೆ.ಕೆ. ತೇಜಕುಮಾರ್ ಅವರು ತಾ.೨೧ರ ರಾತ್ರಿ ೯.೨೦ರ ಸುಮಾರಿಗೆ ದೊಡ್ಡಕೊಡ್ಲಿ ಗ್ರಾಮದಲ್ಲಿರುವ ಮನೆಗೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಕೆರಗನಹಳ್ಳಿ ಗ್ರಾಮದ ಕೆ.ಆರ್. ರಮೇಶ್ ಅವರ ಮಾಲೀಕತ್ವದ ಲಾರಿ ಡಿಕ್ಕಿ ಪಡಿಸಿದೆ.

ರಾತ್ರಿ ವೇಳೆ ಮನೆಗೆ ತೆರಳುತ್ತಿದ್ದ ಸಂದರ್ಭ ನೀರುಗುಂದ ಭಾಗದಿಂದ ಅತಿವೇಗವಾಗಿ ಆಗಮಿಸಿದ ಲಾರಿ ತನ್ನ ಕಾರಿಗೆ ಡಿಕ್ಕಿಪಡಿಸಿದೆ. ಘಟನೆಯಿಂದ ಕಾರು ತಿರುಗಿ ರಸ್ತೆ ಬದಿಯ ಹಳ್ಳಕ್ಕೆ ನುಗ್ಗಿದ್ದು, ಈ ವೇಳೆ ಕೆಳಗಿಳಿದು ಬಂದ ನನ್ನ ಮೇಲೆ ಮತ್ತೆ ಹಿಂಬದಿಯಿAದ ಗುದ್ದಲು ಯತ್ನಿಸಲಾಗಿದೆ. ಸುಮಾರು ೧೦೦ ಮೀಟರ್ ದೂರ ಲಾರಿಯಲ್ಲಿ ಅಟ್ಟಿಸಿಕೊಂಡು ಬಂದಿದ್ದು, ಇದೇ ಸಂದರ್ಭ ಸ್ಥಳೀಯ ಯುವಕರಾದ ಸಾಗರ್ ಮತ್ತು ಸ್ವಸ್ತಿಕ್ ಎಂಬವರುಗಳು ಬೈಕ್‌ನಲ್ಲಿ ಬಂದಿದ್ದು, ತಾನು ಜೋರಾಗಿ ಕಿರುಚಿಕೊಂಡ ಸಂದರ್ಭ ಯುವಕರು ರಸ್ತೆ ಮಧ್ಯೆ ಬೈಕ್ ಬಿಟ್ಟು ಓಡಿದ್ದಾರೆ.

ಈ ಬೈಕ್‌ಗೆ ಲಾರಿ ಡಿಕ್ಕಿಪಡಿಸಿದ ಹಿನ್ನೆಲೆ ಲಾರಿಯ ಕೆಳಭಾಗಕ್ಕೆ ಬೈಕ್ ಸಿಲುಕಿಕೊಂಡಿದ್ದರಿAದ ಮುಂದಕ್ಕೆ ಚಲಿಸಲಾಗದೇ ಹಾಗೆಯೇ ನಿಂತಿದ್ದು, ಲಾರಿಯಲ್ಲಿದ್ದ ಕೆರಗನಹಳ್ಳಿ ಗ್ರಾಮದ ರಮೇಶ್ ಹಾಗೂ ಮುನ್ಸಿಪಾಲಿಟಿಯ ದಿವಾಕರ್ ಅವರುಗಳು ಸ್ಥಳದಿಂದ ಓಡಿಹೋಗಿದ್ದಾರೆ ಎಂದು ತೇಜಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ವೈಯಕ್ತಿಕ ದ್ವೇಷದಿಂದ ಕೊಲೆಯತ್ನ ನಡೆದಿದೆ. ರಮೇಶ್ ಮತ್ತು ದಿವಾಕರ್ ಅವರುಗಳು ಕೃತ್ಯ ನಡೆಸಿದ್ದಾರೆ. ಕಳೆದ ೨ ತಿಂಗಳ ಹಿಂದೆ ಕೆರೆಗನಹಳ್ಳಿ ಗ್ರಾಮದ ಕ್ಯಾಂಟೀನ್‌ನಲ್ಲಿ ಕತ್ತಿಯಿಂದ ತನ್ನ ಮೇಲೆ ಹಲ್ಲೆ ಯತ್ನ ನಡೆದಿತ್ತು. ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಕಠಿಣ ಕ್ರಮ ಕೈಗೊಂಡಿರಲಿಲ್ಲ. ಇದರ ಮುಂದುವರೆದ ಭಾಗವಾಗಿ ಇದೀಗ ತಮ್ಮ ಮೇಲೆ ಲಾರಿ ಹತ್ತಿಸಿ ಹತ್ಯೆಗೆ ಯತ್ನಿಸಲಾಗಿದೆ ಎಂದು ತೇಜಕುಮಾರ್ ಅವರು ಆರೋಪಿಸಿದ್ದಾರೆ.

ಅಕ್ರಮ ಇಟ್ಟಿಗೆ ಫ್ಯಾಕ್ಟರಿ ಹಾಗೂ ಕೆರೆಯ ವಿಚಾರಕ್ಕೆ ಸಂಬAಧಿಸಿದAತೆ ಹಿಂದಿನಿAದಲೂ ತನ್ನ ಮೇಲೆ ದ್ವೇಷ ಸಾಧನೆ ಮಾಡಲಾಗುತ್ತಿದೆ. ಈ ನಡುವೆ ಸ್ಥಳೀಯವಾಗಿ ಜೂಜು ಆಡಿಸುತ್ತಿದ್ದಾರೆ ಎಂದು ಸ್ಥಳೀಯ ಯುವಕನೋರ್ವ ಪೊಲೀಸ್ ದೂರು ನೀಡಿದ್ದರಿಂದ ಆತನಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆಯೂ ಶನಿವಾರಸಂತೆ ಠಾಣೆಗೆ ದೂರು ನೀಡಲು ತೆರಳಿದಾಗ ಸೂಕ್ತ ಸ್ಪಂದÀನ ಲಭಿಸಲಿಲ್ಲ. ಈ ಹಿಂದೆಯೇ ಕಠಿಣ ಕ್ರಮ ಕೈಗೊಂಡಿದ್ದರೆ ಇಂತಹ ಕೃತ್ಯ ಎಸಗುತ್ತಿರಲಿಲ್ಲ. ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಶನಿವಾರಸಂತೆ ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕೆಂದು ತೇಜಕುಮಾರ್ ಒತ್ತಾಯಿಸಿದ್ದಾರೆ. ತನ್ನ ಮೇಲೆ ಲಾರಿ ಹತ್ತಿಸಿ ಹತ್ಯೆಗೆ ಯತ್ನಿಸಿದ ರಮೇಶ್ ಹಾಗೂ ದಿವಾಕರ್ ಅವರುಗಳ ೪ಏಳನೇ ಪುಟಕ್ಕೆ (ಮೊದಲ ಪುಟದಿಂದ) ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶನಿವಾರಸಂತೆ ಪೊಲೀಸ್ ಠಾಣೆಗೆ ತೇಜಕುಮಾರ್ ದೂರು ನೀಡಿದ ಮೇರೆ, ಈರ್ವರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಚಂದ್ರಶೇಖರ್, ಶನಿವಾರಸಂತೆ ಠಾಣಾಧಿಕಾರಿ ಗೋವಿಂದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರಿನ ಏರ್‌ಬ್ಯಾಗ್ ಹೊರ ಬಂದಿದ್ದರಿAದ ತೇಜಕುಮಾರ್ ಅವರು ಅಪಾಯದಿಂದ ಪಾರಾಗಿದ್ದಾರೆ.

ಘಟನೆಗೆ ಸಂಬAಧಿಸಿದAತೆ ಆರೋಪಿಗಳಾದ ರಮೇಶ್ ಹಾಗೂ ದಿವಾಕರ್ ಅವರುಗಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದ್ದು, ಪ್ರಾಥಮಿಕ ತನಿಖೆ ಪೂರ್ಣಗೊಳಿಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆಸಲಾಗಿದೆ ಎಂದು ನಂಬಲಾರ್ಹ ಮೂಲಗಳಿಂದ ತಿಳಿದುಬಂದಿದೆ.