ಗೋಣಿಕೊಪ್ಪಲು. ಅ. ೨೩: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ವಿ. ಬಾಡಗ ಗ್ರಾಮದ ರೈತರ ಹಾಗೂ ಬೆಳೆಗಾರರ ಕಾಫಿ, ಅಡಿಕೆ, ಕರಿಮೆಣಸು ತೋಟಗಳಿಗೆ ತೆರಳಿದ ಕೊಡಗು ಜಿಲ್ಲಾ ಬಿ.ಜೆ.ಪಿ. ಕೃಷಿ ಮೋರ್ಚಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಳೆ ಯಿಂದಾಗಿ ರೈತರು ಬೆಳೆದ ಬೆಳೆ ನಷ್ಟ ಆಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಕೊಡಗಿನ ನಾನಾ ಭಾಗಕ್ಕೆ ತೆರಳಿದ ಕೃಷಿ ಮೋರ್ಚಾದ ಪ್ರಮು ಖರು ರೈತರ, ಬೆಳೆಗಾರರ ಸಮಸ್ಯೆ ಆಲಿಸಿದರು. ಅಲ್ಲದೆ ತೋಟಗಳಿಗೆ ತೆರಳಿ ಬೆಳೆನಷ್ಟವಾಗಿರುವ ಬಗ್ಗೆ ಖುದ್ದು ಮಾಹಿತಿ ಪಡೆದರು.

ರಾಜ್ಯ ಬಿ.ಜೆ.ಪಿ. ಕೃಷಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ನವೀನ್ ಕುಮಾರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿದ ಮಳೆಯಾಗಿರುವುದರಿಂದ ರೈತರ ಪ್ರಮುಖ ಬೆಳೆಯಾದ ಕಾಫಿ, ಕರಿಮೆಣಸು ಹಾಗೂ ಅಡಿಕೆ ಬೆಳೆಗಳು ಹಾಳಾಗಿವೆ. ಈ ಬಗ್ಗೆ ವೀರಾಜಪೇಟೆ ಕ್ಷೇತ್ರದ ಶಾಸಕÀ ಎ.ಎಸ್. ಪೊನ್ನಣ್ಣ ಅವರು ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ ಸರ್ಕಾರದ ವತಿಯಿಂದ ರೈತರಿಗೆ ಪರಿಹಾರ ಘೋಷಣೆ ಮಾಡುವ ಅವಕಾಶವಿತ್ತು.

ಆದರೆ ರೈತರನ್ನು ಹಾಗೂ ಬೆಳೆಗಾರರನ್ನು ನಿರ್ಲಕ್ಷö್ಯ ಮಾಡಿದ್ದಾರೆ. ಕೊಡಗಿನಲ್ಲಿ ೧.೨೦ ಲಕ್ಷ ಹೆಕ್ಟೆರ್‌ನಲ್ಲಿ ಕಾಫಿ ಬೆಳೆ ಬೆಳೆಯಲಾಗುತ್ತಿದೆ. ಸಮೀಕ್ಷೆ ವೇಳೆ ಶೇ.೭೦ರಷ್ಟು ಕಾಫಿ ಹಾಳಾಗಿರುವುದು ಕಂಡು ಬಂದಿದೆ. ಬಹುತೇಕರು ಸಣ್ಣ ಹಿಡುವಳಿದಾರರಾಗಿದ್ದಾರೆ. ರೈತರ ಸಮಸ್ಯೆಗಳು ಇನ್ನೂ ಕೂಡ ಶಾಸಕರ ಗಮನಕ್ಕೆ ಬಂದಿಲ್ಲ. ಒಂದೆಡೆ ಆನೆ ಮಾನವ ಸಂಘರ್ಷ, ಸಿ ಅ್ಯಂಡ್ ಡಿ. ಲ್ಯಾಂಡ್ ಸಮಸ್ಯೆಯಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ರಾಜಕೀಯ ದ್ವೇಷÀದ ಪರಿಮಿತಿಯಿಂದ ಹೊರ ಬಂದು ಮುಖ್ಯಮಂತ್ರಿಗಳಿಗೆ ಉತ್ತಮ ಸಲಹೆ ನೀಡುವ ಮೂಲಕ ರೈತರ ಜ್ವಲಂತ ಸಮಸ್ಯೆಗಳಿಗೆ ಹಾಗೂ ಬೆಳೆ ನಷ್ಟ ಪರಿಹಾರವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಇಲ್ಲಿಯ ತನಕ ಪರಿಹಾರ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ಅನಿವಾರ್ಯವಾಗಿ ನಾವುಗಳೇ ಸರ್ಕಾರಕ್ಕೆ ಹಾಗೂ ಶಾಸಕರಿಗೆ ಒತ್ತಡ ಹೇರುವ ನಿಟ್ಟಿನಲ್ಲಿ ಕೊಡಗಿನಲ್ಲಿ ಸಮೀಕ್ಷೆ ಕಾರ್ಯವನ್ನು ಕೈಗೆತ್ತಿಕೊಂಡಿದ್ದೇವೆ. ಕೊಡಗಿನ ರೈತರಿಗೆ ಆಗಿರುವ ನಷ್ಟ ಪರಿಹಾರವನ್ನು ತುಂಬಿಸಿಕೊಡುವ ಸಲುವಾಗಿ ಕೂಡಲೇ ಪರಿಹಾರ ಘೋಷಣೆ ಮಾಡುವಂತೆ ಒತ್ತಾಯಿಸಿದರು.

ಪ್ರಣಾಳಿಕೆಯಲ್ಲಿ ಕೃಷಿ ಕ್ಷೇತ್ರಕ್ಕೆ ಹೊಸತನ ತರುವ ನಿಟ್ಟಿನಲ್ಲಿ ಒಂದು ಲಕ್ಷದ ಐವತ್ತು ಸಾವಿರ ಕೋಟಿ ಹಣವನ್ನು ಖರ್ಚು ಮಾಡುತ್ತೇವೆ ಎಂದು ಶಾಸಕರು ಪ್ರಸ್ತಾಪ ಮಾಡಿದ್ದರು. ಆ ಬಗ್ಗೆ ರೈತರ ಮುಂದೆ ಶ್ವೇತ ಪತ್ರ ಹೊರಡಿಸುವಂತೆ ಒತ್ತಾಯಿಸಿದರು.

ಕೊಡಗು ಜಿಲ್ಲೆಯಲ್ಲಿ ೨೮೧ ಕಂದಾಯ ಗ್ರಾಮಗಳು ಸೇರಿ ೫೨೫ ಹಳ್ಳಿಗಳಿವೆ. ಕಂದಾಯ ಗ್ರಾಮಗಳಿಗೆ ಹೊಸತನ ತರುವ ನಿಟ್ಟಿನಲ್ಲಿ ೫೦ ಸಾವಿರ ಕೋಟಿ ಅನುದಾನವನ್ನು ಇಡುವುದಾಗಿ ತಿಳಿಸಲಾಗಿತ್ತು. ಈ ಬಗ್ಗೆ ಶಾಸಕರು ಕೊಡಗಿನ ಜನತೆಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಾಗಿದ್ದ ಸಂದರ್ಭ ಬೆಳೆ ನಷ್ಟ ಸಂಭವಿಸಿದ ಸಂದರ್ಭ ಪ್ರತಿ ಹೆಕ್ಟೇರ್‌ಗೆ ತಲಾ ೨೮ ಸಾವಿರದಂತೆ ೨ ಹೆÀಕ್ಟೇರ್‌ಗೆ ೫೬ ಸಾವಿರ ಹಣವನ್ನು ಪರಿಹಾರವಾಗಿ ಘೋಷಣೆ ಮಾಡಿ ದ್ದರು. ರಸಗೊಬ್ಬರ, ಕಾರ್ಮಿಕರ ವೇತನ ಸೇರಿದಂತೆ ರೈತರ ಎಲ್ಲಾ ಖರ್ಚುಗಳು ಅಧಿಕ ವಾಗಿರುವುದರಿಂದ ಕೊಡಗಿನ ಶಾಸಕದ್ವಯರು ಮುಖ್ಯಮಂತ್ರಿಗಳಿಗೆ ಇಲ್ಲಿನ ವಸ್ತು ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಮೂಲಕ ಹೆÀಕ್ಟೇರ್‌ಗೆ ತಲಾ ಕನಿಷ್ಟ ೧ ಲಕ್ಷ ಹಣವನ್ನು ಬಿಡುಗಡೆ ಮಾಡಿಸುವಂತೆ ಆಗ್ರಹಿಸಿದರು. ಜಿಲ್ಲಾ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ ಮಾತನಾಡಿ, ಕೊಡಗಿನ ಪ್ರಮುಖ ಬೆಳೆಯಾದ ಕಾಫಿ ಅಡಿಕೆ ಹಾಗೂ ಕರಿಮೆಣಸು ನಾಶವಾಗಿದೆೆ. ಕಳೆದ ಬಾರಿ ಒಂದು ಎಕರೆಗೆ ರೈತರು ೨೫ರಿಂದ ೩೦ ಚೀಲ ಕಾಫಿಯನ್ನು ಕುಯ್ಯುತ್ತಿದ್ದರು. ೪ಏಳನೇ ಪುಟಕ್ಕೆ (ಮೊದಲ ಪುಟದಿಂದ) ಈ ಬಾರಿ ೫ ರಿಂದ ೭ ಚೀಲ ಎಕರೆಗೆ ಬರುವುದು ಕಷ್ಟವಾಗಿದೆ. ಆ ಮಟ್ಟದಲ್ಲಿ ರೈತರಿಗೆ ಅತಿವೃಷ್ಟಿಯಿಂದ ಹಾನಿಯಾಗಿದೆ. ಕಾಂಗ್ರೆಸ್ ಸರ್ಕಾರವು ಕೊಡಗಿನ ರೈತರನ್ನು ಕಡೆಗಣಿಸಿ ಪರಿಹಾರದಿಂದ ಹೊರಗಿಟ್ಟಿದೆ ಎಂದು ದೂರಿದರು.

ಅತಿಯಾದ ಮಳೆಯಿಂದ ಬೆಳೆ ನಷ್ಟವಾಗಿದೆ. ಈ ಹಿಂದೆ ನೀಡಲಾಗಿದ್ದ ಹೆಕ್ಟೇರ್‌ಗೆ ೨೮ ಸಾವಿರ ಬೆಳೆ ಪರಿಹಾರ ಹಣವನ್ನು ಹೆಚ್ಚು ಮಾಡುವ ಮೂಲಕ ಕೊಡಗಿನ ರೈತರಿಗೆ ಪರಿಹಾರ ಹಣ ಸಿಗಬೇಕು. ಪರಿಹಾರ ಕೊಡುವಲ್ಲಿ ಕೊಡಗನ್ನು ನಿರ್ಲಕ್ಷಿಸಿದ್ದಲ್ಲಿ ರಸ್ತೆ ತಡೆ ಹೋರಾಟವನ್ನು ಕೃಷಿ ಮೋರ್ಚಾದ ವತಿಯಿಂದ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಸಮೀಕ್ಷೆ ವೇಳೆ ವೀರಾಜಪೇಟೆ ಮಂಡಲ ಕೃಷಿ ಮೋರ್ಚಾ ಅಧ್ಯಕ್ಷ ಅಪ್ಪಿ ಸುಬ್ರಮಣಿ, ಜಿಲ್ಲಾ ಉಪಾಧ್ಯಕ್ಷ ಚೋಡುಮಾಡ ದಿನೇಶ್, ಸದಸ್ಯರಾದ ನಡುಮನೆ ನವೀನ್, ನಡುಮನೆ ಸಂಜು, ಜಿಲ್ಲಾ ಕಾರ್ಯದರ್ಶಿ ಕುಪ್ಪಂಡ ದಿಲನ್ ಬೋಪಣ್ಣ, ಆಲೆಮಾಡ ಸುಧೀರ್, ವೀರಾಜಪೇಟೆ ಮಂಡಲ ಪ್ರಧಾನ ಕಾರ್ಯದರ್ಶಿ ತೋರೆರ ವಿನು, ಪ್ರಮುಖರಾದ ಮಚ್ಚಾರಂಡ ಪ್ರವೀಣ್ ತಿಮ್ಮಯ್ಯ, ತೀತಿಮಾಡ ಬೋಪಣ್ಣ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.