ನಾಪೋಕ್ಲು, ಅ. ೨೦ : ಇಂಡೋನೇಷ್ಯಾದ ನೇಗೇರಿ ಸಮರಂಗ್ ಯೂನಿವರ್ಸಿಟಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕಾನ್ಫರೆನ್ಸ್ನಲ್ಲಿ ಜುರೈಜ್ ನೂರಾನಿ ಕುಂಜಿಲ ತನ್ನ ಪ್ರಬಂಧ ಮಂಡನೆಗೆ ಆಯ್ಕೆಯಾಗಿದ್ದಾರೆ. ಈ ಮೊದಲು ಅರ್ಥಶಾಸ್ತç ಮೈಕ್ರೋಫೈನಾನ್ಸ್ನಲ್ಲಿ ತನ್ನ ಸಂಶೋಧನಾ ಪ್ರಬಂಧಗಳನ್ನು ಬ್ರಿಟನ್‌ನ ಆಕ್ಸ್ಫರ್ಡ್ ಯೂನಿವರ್ಸಿಟಿಯಲ್ಲಿ ಪ್ರಸ್ತುತ ಪಡಿಸಿದ್ದು ನಾಲೆಜ್ ಸಿಟಿಯ ಅಂತರರಾಷ್ಟ್ರೀಯ ಕಾಲೇಜಿನ ಪಿ.ಜಿ. ವಿದ್ಯಾರ್ಥಿಯಾಗಿದ್ದು ಹಲವು ಅಂತರರಾಷ್ಟಿçÃಯ ಕಾನ್ಫರೆನ್ಸ್ಗಳಲ್ಲಿ ಭಾಗವಹಿಸಿದ್ದಾರೆ. ಇವರು ಕುಂಜಿಲದ ಅಜೀಜ್ ಮಾಸ್ಟರ್ ಹಾಗೂ ಸುಮಯ್ಯ ದಂಪತಿ ಪುತ್ರ.