ಮಡಿಕೇರಿ, ಅ. ೨೧: ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟç ಸಂಸ್ಥೆಯ ಇಂಡಿಜಿನಸ್ ಪೀಪಲ್ಸ್ ರೈಟ್ಸ್, ಎಸ್.ಟಿ ಪಟ್ಟಿ, ಪಾರ್ಲಿಮೆಂಟ್ ಮತ್ತು ಎಸೆಂಬ್ಲಿಯಲ್ಲಿ ವಿಶೇಷ ಪ್ರಾತಿನಿಧ್ಯ, ಕೊಡವರ ಪೂರ್ವಾರ್ಜಿತ ಭೂ ಹಕ್ಕು ಮತ್ತು ಕೊಡವರ ಧಾರ್ಮಿಕ ಸಂಸ್ಕಾರ ತೋಕ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕಾದರೆ ಕೊಡವರ ಪ್ರತ್ಯೇಕ ಗುರುತು ಪ್ರಕ್ರಿಯೆ ರಾಷ್ಟಿçÃಯ ಜನಗಣತಿಯಲ್ಲಿ ದಾಖಲೀಕರಣವಾದರೆ ಮಾತ್ರ ಸಾಧ್ಯ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ಯು ನಾಚಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಮ್ಮತ್ತಿಯಲ್ಲಿ ನಡೆದ ೧೬ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆ್ಯನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಅನ್ನು ಅಳವಡಿಸಬೇಕು, ಇದರ ಆಧಾರದಡಿ ಮುಂದೆ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕ್ಷೇತ್ರ ಪುನರ್ ವಿಂಗಡಣೆಗೆ ಮಾನದಂಡವಾಗಲಿರುವ ಈ ಜನಗಣತಿಯು ಕೊಡವರ ರಾಜಕೀಯ ಸಬಲೀಕರಣ, ಸ್ವಯಂ ನಿರ್ಧಾರದ ಹಕ್ಕು ಸ್ಥಾಪಿಸಲು ಮೆಟ್ಟಿಲಾಗಲಿದೆ. ಅಲ್ಲದೆ ಕೊಡವರ ಧಾರ್ಮಿಕ ಸಂಸ್ಕಾರ ತೋಕ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರಿಯಲು ಪೂರಕವಾಗಲಿದೆ ಎಂದರು.

ಕೊಡವರು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದವರಲ್ಲ. ಇಂದು ಜನಗಣತಿಯೂ ಸೇರಿದಂತೆ ರಾಜ್ಯ ದಾಖಲೆಗಳ ಎಲ್ಲಾ ಕಾಲಂಗಳಲ್ಲಿ ಈ ದೇಶದ ಬಹುಧರ್ಮ, ಪ್ರಭಲಧರ್ಮ ಮತ್ತು ಬಲಾಡ್ಯ ಜಾತಿಯನ್ನು ದೃಷ್ಟಿಯಲ್ಲಿಟ್ಟು ರಚಿಸಲ್ಪಟ್ಟಿರುವ ಧರ್ಮ ಮತ್ತು ಜಾತಿ ಬಗ್ಗೆ ಮಾತ್ರ ಉಲ್ಲೇಖ ಇರುವುದರಿಂದ ಕೊಡವರು ಅನಿವಾರ್ಯವಾಗಿ ಧರ್ಮ ಮತ್ತು ಜಾತಿ ಕಾಲಂಗಳನ್ನು ಒಪ್ಪಿಕೊಂಡು ಕೊಡವ ಎಂದು ದಾಖಲಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

೧೮೭೧-೭೨ ರಿಂದ ೧೯೩೧ರ ವರೆಗೆ ನಡೆದ ರಾಷ್ಟಿçÃಯ ಜನಗಣತಿಯಲ್ಲಿ ಕೊಡವರನ್ನು ಧರ್ಮೇತರ ಮತ್ತು ಜಾತಿಯೇತರ ಜನಾಂಗ/ಮೂಲವAಶಸ್ಥ (ರೇಸ್) ಎಂದು ದಾಖಲಿಸಲ್ಪಡುವ ಮೂಲಕ ಕೊಡವರ ಪ್ರತ್ಯೇಕ ಅಸ್ತಿತ್ವ ಮತ್ತು ಸ್ವತಂತ್ರ ವ್ಯಕ್ತಿತ್ವವನ್ನು ಗುರುತಿಸಿ ನಮ್ಮ ಹೆಗ್ಗುರುತು ರಾಜ್ಯ ದಾಖಲೆಯಲ್ಲಿ ನಳನಳಿಸುವಂತಾಗಿತ್ತು. ತದನಂತರ ನಮ್ಮನ್ನು ೨೦೨೧ರ ವರೆಗೆ ಪ್ರತಿ ದಶಮಾನಗಳಿಗೊಮ್ಮೆ ನಡೆಸುವ ರಾಷ್ಟಿçÃಯ ಜನಗಣತಿಯಲ್ಲಿ ಬಲಾಡ್ಯ ಧಾರ್ಮಿಕ ಮತ್ತು ಜಾತಿಯೊಂದಿಗೆ ವಿಲೀನಗೊಳಿಸಿ ನಮ್ಮ ಅಸ್ತಿತ್ವ ಮತ್ತು ಹೆಗ್ಗುರುತು ವಿನಾಶದೊಂದಿಗೆ ಕೊಡವರ ಅಸ್ಮಿತೆ ಮತ್ತು ಸತ್ವವನ್ನು ಧ್ವಂಸ ಮಾಡಲಾಯಿತು. ಮುಂದೆ ಅದು ಕೊಡವರ ಸ್ವಯಂ ನಿರ್ಣಯ ಹಕ್ಕು ಹಾಗೂ ಸಂವಿಧಾನಿಕ ಹಕ್ಕುಗಳ ಧ್ವನಿಯೂ ಪ್ರತಿಪಾಧಿಸಲು ಆಗಲಾರದಷ್ಟು ಕ್ಷೀಣಗೊಂಡು ಧಮನಕ್ಕೊಳಗಾಯಿತು ಎಂದರು.

ಆದ್ದರಿAದ ೨೦೨೬ ಅಕ್ಟೋಬರ್ ನಿಂದ ಕೇಂದ್ರ ಸರಕಾರದ ಮೂಲಕ ನಡೆಯಲಿರುವ ಭಾರತ ದೇಶದ ೧೬ನೇ ರಾಷ್ಟಿçÃಯ ಜನಗಣತಿಯ ಸಂದರ್ಭ ಎಲ್ಲಾ ಕಾಲಂನಲ್ಲಿ “ಕೊಡವ” ಎಂದೇ ಬರೆಸಬೇಕೆಂಬ ಕರೆಯೂ ಸೇರಿದಂತೆ ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಜನಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.

ಬಾAಗ್ಲಾದೇಶಿ ರೋಹಿಂಗ್ಯಗಳಿಗೆ ನೆಲೆ ಕಲ್ಪಿಸಲು ಅವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಮುಂದೆ ಕೊಡಗಿಗೆ ದುಪ್ಪಟ್ಟು ಮತದಾರರ ಆಧಾರದಲ್ಲಿ ಪಾರ್ಲಿಮೆಂಟ್ ಸೀಟ್ ಬೇಕೆಂದು ಎರಡು ರಾಷ್ಟಿçÃಯ ರಾಜಕೀಯ ಪಕ್ಷಗಳು ಲಜ್ಜೆಗೇಡಿ ಮತಭಿಕ್ಷೆ ಕಾರ್ಯದಲ್ಲಿ ತೊಡಗಿದ್ದು, ಇದಕ್ಕಾಗಿ ಕೊಡವರ ಭೂಮಿಗಳನ್ನು ಬಲವಂತ ತೆರವುಗೊಳಿಸಿ ಅಲ್ಲಿ ಇವರಿಗೆಲ್ಲ ಭೂಮಿ, ವಸತಿ ನಿರ್ಮಿಸುವ ಒಳಸಂಚು ನಡೆಸಲಾಗುತ್ತಿದೆ. ಇದಕ್ಕೆ ಪ್ರತಿಭಟಿಸಿದರೆ, ಕೊಡಗಿನಲ್ಲಿ ಕಾರ್ಮಿಕರ ಕೊರತೆಯ ನೆಪ ತೋರಿಸಲಾಗುತ್ತದೆ ಎಂದು ನಾಚಪ್ಪ ಕಳವಳ ವ್ಯಕ್ತಪಡಿಸಿದರು. ಮುಂದಿನ ೧೭ನೇ ಜನಜಾಗೃತಿ ಮಾನವ ಸರಪಳಿಯು ತಾ.೨೭ ರಂದು ಮಂಗಳವಾರ ಬೆಳಿಗ್ಗೆ ೧೦.೩೦ ಗಂಟೆಗೆ ಶ್ರೀಮಂಗಲದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಇಲ್ಲಿಯತನಕ ಬಿರುನಾಣಿ, ಟಿ.ಶೆಟ್ಟಿಗೇರಿ, ಕಡಂಗ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ಮಾದಾಪುರ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್ಲು, ಗೋಣಿಕೊಪ್ಪ, ವೀರಾಜಪೇಟೆ, ಮೂರ್ನಾಡು, ಚೇರಂಬಾಣೆ ಹಾಗೂ ಚೆಟ್ಟಳ್ಳಿಗಳಲ್ಲಿ ಕೊಡವ ಮಾನವ ಸರಪಳಿ ನಡೆದಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉದಿಯಂಡ ಚೋಂದಮ್ಮ, ಬಾದುಮಂಡ ಸಾನ್ವಿ ದೇಚಮ್ಮ, ಬಾದುಮಂಡ ಸಾಂಚಿ ಪೊನ್ನಮ್ಮ, ಪಂದ್ಯAಡ ನಿಶಿ ಬೋಜಮ್ಮ, ಕೊಲ್ಲೀರ ಉಮೇಶ್, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ, ಕಾರ್ಯದರ್ಶಿ ಪಟ್ಟಡ ಧನು ಉತ್ತಯ್ಯ, ನೆಲ್ಲಮಕ್ಕಡ ವಿವೇಕ್, ಮಂಡೇಪAಡ ಲಾಲ, ಪಟ್ಟಡ ಅರುಣ್, ಕೊಲ್ಲೀರ ಧರ್ಮಜ, ಕೊಲ್ಲೀರ ಗೋಪಿ, ಮಾಚಿಮಂಡ ಪೆಮ್ಮಯ್ಯ, ಕಾವಡಿಚಂಡ ಗಣಪತಿ, ಕೇಚಂಡ ಶಿವಪ್ಪ, ಪಳೆಯತಂಡ ಹರೀಶ್, ಮುಕ್ಕಾಟಿರ ಜಯ, ಪಂದ್ಯAಡ ಸುರೇಶ್, ಚೆಪುö್ಪಡಿರ ಮುತ್ತಣ್ಣ, ಮುಕ್ಕಾಟೀರ ಮೊಣ್ಣಪ್ಪ, ಮುರುವಂಡ ಸುರೇಶ್ ಮುದ್ದಯ್ಯ, ಬೊಮ್ಮಂಡ ಮಂದಣ್ಣ, ಕುಟ್ಟಂಡ ತಿಮ್ಮಯ್ಯ, ಚೋವಂಡ ನಾಚಪ್ಪ, ಮಂಡೇಪAಡ ಪೊನ್ನಪ್ಪ ಕುಂಞÂಯAಡ ರಾಜು, ಚೋವಂಡ ಗಣೇಶ್, ಕಾವಡಿಚಂಡ ಬೋಪಣ್ಣ, ಕಾವಡಿಚಂಡ ಅಯ್ಯಪ್ಪ, ಮಾಚಿಮಾಡ ರತನ್, ಡಾ.ವಾಟೇರಿರ ಸುಬ್ರಮಣಿ, ನಡಿಕೇರಿಯಂಡ ಗಣೇಶ್, ಉದ್ದಪಂಡ ಶಂಕರಿ, ನಾಯಂಡ ಪೂವಯ್ಯ, ವಕೀಲ ಬಿದ್ದಂಡ ಸುಬ್ಬಯ್ಯ, ಮಚ್ಚಾರಂಡ ಕಾರ್ಯಪ್ಪ, ನೆಲ್ಲಮಕ್ಕಡ ಮುತ್ತಣ್ಣ, ಮುಕ್ಕಾಟೀರ ತಮ್ಮಣ್ಣ, ಚೇನಂಡ ಅಜಿತ್, ಮಂದೆಪAಡ ಹರೀಶ್, ಮಾಚಿಮಂಡ ರಾಜ, ಕಾವಡಿಚಂಡ ದೀಪಕ್ ಉತ್ತಯ್ಯ, ಕಾವಡಿಚಂಡ ನಾಚಪ್ಪ, ಅರೆಯಡ ಗಿರೀಶ್, ಕಾಂಡೇರ ಸುರೇಶ್, ಕಿರಿಯಮಾಡ ಶೆರಿನ್, ಪುದಿಯೋಕ್ಕಡ ಪೃಥ್ವಿ ಬೋಪಣ್ಣ ಪಾಲ್ಗೊಂಡಿದ್ದರು.