ಕಣಿವೆ, ಅ. ೨೦: ನಿತ್ಯವೂ ನೂರಾರು ಟನ್ ಕಚ್ಚಾ ಹಾಗೂ ಸಿದ್ಧ ಸರಕುಗಳನ್ನು ಹೊತ್ತೊಯ್ಯುವ ಅತೀ ಹೆಚ್ಚು ಟ್ರಕ್‌ಗಳ ಸಂಚಾರವಿರುವ ಕೂಡ್ಲೂರು ಕೈಗಾರಿಕಾ ಪ್ರದೇಶದ ಹೆದ್ದಾರಿಯ ನಡುವೆಯೇ ಬೃಹತ್ ಹೊಂಡ ನಿರ್ಮಾಣವಾಗಿದೆ. ಈ ಬಗ್ಗೆ ಹಲವು ತಿಂಗಳು ಕಳೆದರೂ ಕೂಡ ಸಂಬAಧಿಸಿದ ಕೈಗಾರಿಕಾ ಇಲಾಖಾ ಅಧಿಕಾರಿಗಳು ಗಮನಹರಿಸದ ಕುರಿತು ಇಲ್ಲಿನ ಉದ್ಯಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೈಗಾರಿಕಾ ಪ್ರದೇಶದ ಹಾನಗಲ್ಲು ಕಾಫಿ ಸಂಸ್ಕರಣಾ ಘಟಕದ ಎದುರಿನ ಹೆದ್ದಾರಿಯ ನಡುವೆಯೇ ಮೋರಿಯೊಂದು ಕುಸಿದು ಅದರೊಳಗೆ ವಾಹನಗಳು ಬೀಳದಂತೆ ಕಟ್ಟಿಗೆಯ ತುಂಡುಗಳನ್ನು ಇಡಲಾಗಿದೆ. ಎಚ್ಚರ ತಪ್ಪಿ ಸಾಗುವ ವಾಹನಗಳು ಆಪಘಾತಕ್ಕೆ ಸಿಲುಕುವ ಮುನ್ನ ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಉದ್ಯಮಿ ವಿಮಲ್, ಕೃಷ್ಣ, ಶಿವಣ್ಣ ಮುಂತಾದವರು ಆಗ್ರಹಿಸಿದ್ದಾರೆ.