ಗೋಣಿಕೊಪ್ಪ ವರದಿ, ಅ. ೨೧: ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ಲೀಗ್ ಹಾಕಿ ಪಂದ್ಯಾಟದಲ್ಲಿ ಬಲಂಬೇರಿ, ಬೊಟ್ಟಿಯತ್‌ನಾಡ್, ಕೋಣನಕಟ್ಟೆ, ಚಾರ್ಮರ್ಸ್, ಚಾಲೆಂಜರ್ಸ್ ತಂಡಗಳು ಗೆಲುವಿನ ಆರಂಭ ಪಡೆದುಕೊಂಡಿವೆ.

ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್, ಭಗವತಿ ಹಾಕಿ ಕ್ಲಬ್, ನೀಲಿಯಾಟ್ ಕೋಕೇರಿ, ವೀರಾಜಪೇಟೆ ಕೊಡವ ಸಮಾಜ ತಂಡಗಳು ಸೋಲಿಗೆ ಶರಣಾದವು. ಟಾಟಾ ಕಾಫಿ ಮತ್ತು ವೀರಾಜಪೇಟೆ ಟವರ್ಸ್ ತಂಡಗಳ ನಡುವಿನ ಪಂದ್ಯ ರೋಚಕ ಟೈ ಫಲಿತಾಂಶ ಪಡೆದುಕೊಂಡಿತು.

ಬಲಂಬೇರಿ ಮಹಾದೇವ ಸ್ಪೋರ್ಟ್ಸ್ ಕ್ಲಬ್ ತಂಡವು ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ವಿರುದ್ದ ೫-೦ ಗೋಲುಗಳಿಂದ ಜಯಿಸಿತು. ಬಲಂಬೇರಿ ಆಟಗಾರರಾದ ಅಪ್ಪಚ್ಚು ೩ ಗೋಲು, ಕುಶಾಲಪ್ಪ ೨ ಗೋಲು ಹೊಡೆದು ಮಿಂಚಿದರು. ಸರಣಿಯ ಮೊದಲ ಪಂದ್ಯವನ್ನು ಬಲಂಬೇರಿ ಗೆದ್ದುಕೊಂಡಿತು. ಕೋಣನಕಟ್ಟೆ ಇಲೆವೆನ್ ತಂಡವು ೭-೧ ಗೋಲುಗಳಿಂದ ಭಗವತಿ ಹಾಕಿ ಕ್ಲಬ್ ವಿರುದ್ದ ಗೆಲುವು ದೊರೆಯಿತು. ಕೋಣನಕಟ್ಟೆ ಆಟಗಾರ ಯಶ್ವಿನ್ ಗಣಪತಿ ೨ ಗೋಲು, ಮೋಹನ್ ಮುತ್ತಣ್ಣ ೨, ನಾಚಪ್ಪ, ದೀಪಕ್ ಮಂಜುನಾಥ್, ನವೀನ್ ಕಾರ್ಯಪ್ಪ, ಭಗವತಿ ಆಟಗಾರ ಪೆಮ್ಮಯ್ಯ ತಲಾ ಒಂದೊAದು ಗೋಲು ಹೊಡೆದರು.ವೀರಾಜಪೇಟೆ ಟವರ್ಸ್ ಹಾಗೂ ಟಾಟಾ ಕಾಫಿ ತಂಡಗಳ ನಡುವಿನ ಪಂದ್ಯ ೩-೩ ಗೋಲುಗಳ ರೋಚಕ ಡ್ರಾದಲ್ಲಿ ಅಂತ್ಯವಾಯಿತು.

ಟವರ್ಸ್ ಆಟಗಾರ ಮಣಿ, ಬನ್ಸಿ ಬೋಪಣ್ಣ, ಟಿ. ಡಿ. ಬೋಪಣ್ಣ, ಟಾಟಾ ಕಾಫಿ ಪರ ಶಿರಾಗ್ ತಮ್ಮಯ್ಯ, ದಿಲನ್ ಮುತ್ತಣ್ಣ, ಪವನ್ ತಲಾ ಒಂದೊAದು ಗೋಲು ಹೊಡೆದರು. ಮಡಿಕೇರಿ ಚಾರ್ಮರ್ಸ್ ತಂಡವು ನೀಲಿಯಾಟ್ ಕೋಕೇರಿ ವಿರುದ್ದ ೧-೦ ಗೋಲುಗಳಿಂದ ಜಯ ಸಾಧಿಸಿತು. ಚಾರ್ಮರ್ಸ್ ಪರ ಅಲನ್ ಗಳಿಸಿದ ಏಕೈಕ ಗೋಲು ಗೆಲುವು ತಂದುಕೊಟ್ಟಿತು.

ಕೂರ್ಗ್ ಚಾಲೆಂಜರ್ಸ್ ತಂಡಕ್ಕೆ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್, ಕ್ಯಾಲ್ಸ್ ತಂಡದ ವಿರುದ್ಧ ೧-೦ ಗೋಲುಗಳ ಜಯ ಸಿಕ್ಕಿತು. ಕೂರ್ಗ್ ಚಾಲೆಂಜರ್ಸ್ ಆಟಗಾರ ಅಯ್ಯಮ್ಮ ಗೋಲು ಬಾರಿಸಿದರು.

ಬೊಟ್ಟಿಯತ್‌ನಾಡ್ ಕುಂದ ತಂಡ ವೀರಾಜಪೇಟೆ ಕೊಡವ ಸಮಾಜ (ಎ) ವಿರುದ್ದ ೫-೦ ಗೋಲುಗಳ ಗೆಲುವು ಪಡೆದುಕೊಂಡಿತು. ಬೊಟ್ಟಿಯತ್‌ನಾಡ್ ಪರ ಭೀಮಯ್ಯ ೨, ಗಣಪತಿ ೨, ಸೋಮಣ್ಣ ೧ ಗೋಲು ಹೊಡೆದರು