ಮರಗೋಡು, ಅ. ೨೦ : ವಿವೇಕ ಜಾಗೃತ ಬಳಗದ ವತಿಯಿಂದ ಭಜನೆ ಮತ್ತು ವನಿತಾ ಸಂಗಮವೆAಬ ವಿಶೇಷ ಕಾರ್ಯಕ್ರಮ ಮರಗೋಡುವಿನ ವಿ.ಎಸ್.ಎಸ್.ಎನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮರಗೋಡು ಹೊಸ್ಕೇರಿ, ಅರೆಕಾಡು, ಕಟ್ಟೆಮಾಡು ಹಾಗೂ ವಿವಿಧ ಭಾಗಗಳಿಂದ ನೂರಾರು ಮಹಿಳೆಯರು ಭಾಗವಹಿಸಿದ್ದರು. ಮುಖ್ಯ ಅತಿಥಿ ಹಾಗೂ ಪ್ರವಚನಕಾರರಾಗಿ ದಿವ್ಯ ಹವ್ಯಾಸ್ ಭಾಗವಹಿಸಿ ಮಾತನಾಡಿ ಮನೆಯಲ್ಲಿ ಗೃಹಿಣಿಯರ ಪಾತ್ರ ಮತ್ತು ಸಂಸಾರವನ್ನು ಹೇಗೆ ನಿಭಾಯಿಸಿ ಸಮಾಜಮುಖಿಯಾಗಿ ಬದುಕಬೇಕೆಂಬುದನ್ನು ಹಾಗೂ ಬದುಕಿನ ಬಿಡುವಿಲ್ಲದ ದಿನಚರಿಯಲ್ಲಿ ಸಂಸಾರವನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎಂಬುದರ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಳಗದ ಸದಸ್ಯರಾದ ನಿಶಾಮಣಿ ಭುವನೇಶ್ವರ್, ದಾಕ್ಷಾಯಣಿ, ಸಂದ್ಯಾ ಅಣ್ಣಯ್ಯರವರ ನೇತೃತ್ವದಲ್ಲಿ ನಡೆಯಿತು. ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.