ಮಡಿಕೇರಿ, ಅ. ೨೦ : ಕಾವೇರಿ ಚಂಗ್ರಾAದಿಯ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ಟಿ ಪರಂಬ್‌ನಲ್ಲಿ ಹಿರಿಯರಿಗೆ ಪುಷ್ಪನಮನ ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿತು. ಅನಾದಿ ಕಾಲದಿಂದಲೂ ಜಾನಪದ ಪದ್ಧತಿಯ ರೂಪದಲ್ಲಿ ನಡೆದುಕೊಂಡು ಬಂದಿರುವAತೆ ದೋಸೆ ಮತ್ತು ಪುಟ್ಟ್ ನ್ನು “ಬೊತ್ತ್” ಎಂಬ ಗಿಡಮೂಲಿಕೆಯ ಮರದ ಬಳ್ಳಿಯಲ್ಲಿಟ್ಟು ಹಿರಿಯರನ್ನು ಸ್ಮರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ದೇವಟ್‌ಪರಂಬ್ ದುರಂತ ನರಮೇಧದ ಸ್ಮಾರಕ ಸ್ಥಳಕ್ಕೆ ಅಧ್ಯಾತ್ಮಿಕ ಮತ್ತು ಧಾರ್ಮಿಕ ಪಾವಿತ್ರö್ಯತೆಯನ್ನು ನೀಡುವ ಉದ್ದೇಶದಿಂದ ಕಳೆದ ಅನೇಕ ವರ್ಷಗಳಿಂದ ಸಿಎನ್‌ಸಿ ಸಂಘಟನೆ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ ಎಂದರು.

ಪ್ರತಿ ವರ್ಷ ಕಾವೇರಿ ತೊಲೆಯಾರ್ ಚಂಗ್ರಾAದಿ ಆಚರಣೆಗೆ ಎರಡು ಅಥವಾ ಮೂರು ದಿನಗಳ ಮೊದಲು ತಮ್ಮ ಜೌಗು ಭೂಮಿಗಳು, ಭತ್ತದ ಗದ್ದೆಗಳು, ಭತ್ತ ಒಣಗಿಸುವ ಅಂಗಳಗಳು, ಹಸುವಿನ ಸಗಣಿ ಹೊಂಡಗಳು, ಕೊಟ್ಟಿಗೆಗಳು, ಕುಡಿಯುವ ನೀರಿನ ಬಾವಿಗಳು, ದ್ವಾರಗಳು ಮತ್ತು ಮನೆಗಳ ಮುಂಭಾಗದ ಪ್ರದೇಶಗಳಲ್ಲಿ ಬೊತ್ತನ್ನು ನೆಡುವುದು ಕೊಡವರ ಸಂಪ್ರದಾಯವಾಗಿದೆ ಎಂದು ವಿವರಿಸಿದರು. ಭಾರತದ ಸಂವಿಧಾನ ಪರಿಶೀಲನಾ ಆಯೋಗವು ಶಿಫಾರಸ್ಸು ಮಾಡಿದಂತೆ, ಈಶಾನ್ಯ ಭಾರತದ ಹತ್ತು ಅಸ್ತಿತ್ವದಲ್ಲಿರುವ ಸ್ವಾಯತ್ತ ಪ್ರದೇಶಗಳು, ಪ್ರಾದೇಶಿಕ ಮಂಡಳಿಗಳು. ಲೇಹ್ ಮತ್ತು ಲಡಾಖ್ ಸ್ವಾಯತ್ತ ಪ್ರದೇಶಗಳ ಮಾದರಿಯಲ್ಲಿ, ಭಾರತದ ಸುಜರೈಂಟಿಯೊಳಗೆ ಸಂವಿಧಾನದ ೬ನೇ ಮತ್ತು ೮ನೇ ಶೆಡ್ಯೂಲ್‌ಗಳೊಂದಿಗೆ ೨೪೪ ಮತ್ತು ೩೭೧ ನೇ ವಿಧಿಗಳ ಅಡಿಯಲ್ಲಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು ನೀಡಬೇಕು ಎಂದು ಹೇಳಿದರು. ದೇವಟ್‌ಪರಂಬ್ ದುರಂತ ನರಮೇಧ ಸ್ಮಾರಕ ಸ್ಥಳದಲ್ಲಿ ಪವಿತ್ರ ಕಾವೇರಿ ತೀರ್ಥವನ್ನು ಅರ್ಪಿಸಿದರು.

ಕಲಿಯಂಡ ಪ್ರಕಾಶ್, ಅಳ್ಮಂಡ ಜೈ, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಮಂದಪAಡ ಮನೋಜ್, ಮಂದಪAಡ ಸೂರಜ್, ಕಾಟುಮಣಿಯಂಡ ಉಮೇಶ್, ಮಂಗೇರಿರ ಜಗದೀಶ್, ಮಂದಪAಡ ನೇಹ ದೇಚಕ್ಕ, ಮಂದಪAಡ ವಿಹಾನ್ ದೇವಯ್ಯ, ಚಿಯಬೇರ ಸತೀಶ್, ಕುಟ್ಟೇಟಿರ ದರ್ಶನ್ ಹಾಗೂ ಅಜ್ಜಿನಂಡ ಜೈತ್ರ ಅಯ್ಯಪ್ಪ ಹಾಜರಿದ್ದು ಹಿರಿಯರಿಗೆ ಗೌರವ ಅರ್ಪಿಸಿದರು.