ಶ್ರೀಮAಗಲ, ಅ. ೨೧: ಒಂದು ದಿನದ ಕಾರ್ಯಕ್ರಮ ನಡೆಸುವುದೇ ಕಷ್ಟಕರ. ಹೀಗಿರುವಾಗ ೯ ವರ್ಷಗಳಿಂದ ಹತ್ತು ದಿನಗಳವರೆಗೆ ಇಷ್ಟು ದೊಡ್ಡ ಕಾರ್ಯಕ್ರಮ ನಡೆಸುತ್ತಿರುವುದು ನಿಜವಾಗಿಯೂ ಇಡೀ ಕೊಡವ ಜನಾಂಗ ಮೆಚ್ಚುವಂತಹದ್ದು ಎಂದು ನಿವೃತ್ತ ಕೆ.ಎ.ಎಸ್. ಅಧಿಕಾರಿ ಚೊಟ್ಟೆಯಂಡಮಾಡ ಎಂ. ರಾಜೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆದ ೯ನೇ ವರ್ಷದ ಚಂಗ್ರಾAದಿ ಪತ್ತಲೋದಿ ಮೂರÀನೇ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕೊಡವರ ಪದ್ದತಿ- ಸಂಸ್ಕೃತಿ ಸೇರಿದಂತೆ ಭವಿಷ್ಯದ ಬದುಕಿಗೆ ಕೊಡವ ಸಮಾಜದ ತೀರ್ಮಾನವನ್ನು ಎಲ್ಲರೂ ಪರಿಗಣಿಸುವಂತಾಗಬೇಕು ಎಂದರು.
ಮತ್ತೋರ್ವ ಮುಖ್ಯ ಅತಿಥಿ ಪ್ರಗತಿಪರ ಕಾಫಿ ಬೆಳೆಗಾರ ಬಾಚರಣಿಯಂಡ ಪ್ರಕಾಶ್ ಮಾತನಾಡಿ, ನಮ್ಮ ಸಮಯವನ್ನು ಕ್ಲಬ್ ಪ್ರವಾಸದ ನೆಪದಲ್ಲಿ ಅನವಶ್ಯಕ ಹಾಳು ಮಾಡಬಾರದು. ಒಂದು ಪ್ರವಾಸದಲ್ಲಿ ಭಾಗವಹಿಸಿದರೆ ಅಲ್ಲಿ ನಮ್ಮ ಬದುಕಿನ ಬಗ್ಗೆ ಹಾಗೂ ಕೊಡವ ಸಂಸ್ಕೃತಿಯ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತಾಗಬೇಕು. ಕೊಡವರ ಜನಸಂಖ್ಯೆ ವೃದ್ಧಿಯಾದರೆ ಕೊಡವ ಸಂಸ್ಕೃತಿಯ ಬೆಳವಣಿಗೆ ತನ್ನಿಂತಾನೆ ಆಗಲಿದೆ ಎಂದರು.
ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬುಲೀರ ಹರೀಶ್ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಕ್ಕೆಸೊಡ್ಲೂರ್ ಮಂದತವ್ವ ಸಾಂಸ್ಕೃತಿಕ ಕೂಟದ ಕಲಾವಿದರ “ದೂರತ ಕುಂದ್” ಎನ್ನುವ ನಾಟಕ ಕೊಡಗಿನ ಹಸಿರು ಪರಿಸರದಲ್ಲಿ ಕೊಡವರ ಸುಂದರ ಬದುಕಿನ ಚಿತ್ರಣ ಎಲ್ಲರ ಮನಸಿಗೆ ಮುಟ್ಟುವಂತಿತ್ತು. ಕಾರ್ಯಕ್ರಮದಲ್ಲಿ ಅತಿಥಿಗಳಾದ ರಾಜೇಂದ್ರ ಹಾಗೂ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭ ಅಡುಗೆ ಪೈಪೋಟಿ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಪಡೆಯಿತು. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಯಿತು. ಭಾಗವಹಿಸಿದವರಿಗೂ ಸಹ ವಿಶೇಷ ಬಹುಮಾನ ವಿತರಿಸಲಾಯಿತು. ಇಂದು ಸಂಜೆ ೬ ಗಂಟೆಗೆ ಕುಟ್ಟ ಕೊಡವ ಸಮಾಜ ಪೊಮ್ಮಕ್ಕಡ ಕೂಟದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.