ಮಡಿಕೇರಿ, ಅ. ೨೦ : ಆರ್‌ಎಸ್‌ಎಸ್ ಈ ದೇಶದಲ್ಲಿ ವಿಶಾಲವಾಗಿ ಬೆಳೆದಿದೆ. ಆರ್‌ಎಸ್ ಎಸ್‌ನ ಈ ಬೆಳವಣಿಗೆಯನ್ನು ನೋಡಲು ಸಾಧ್ಯವಾಗದೆ ರಾಜ್ಯ ಸರ್ಕಾರ ಅದರ ಕಾರ್ಯ ಚಟು ವಟಿಕೆಗಳಿಗೆ ಸರ್ಕಾರಿ ಸ್ಥಳಗಳಲ್ಲಿ ನಿಷೇಧ ಹೇರಲು ಮುಂದಾಗಿದ್ದು, ಇದಕ್ಕೆ ನಾವು ಬಿಡುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಷ್ಟಿçÃಯ ಸ್ವಯಂ ಸೇವಕ ಸಂಘ ನೂರು ವರ್ಷಗಳನ್ನು ಪೂರೈಸಿದೆ. ಗ್ರಾಮ ಗ್ರಾಮಗಳಲ್ಲಿ ಪಥಸಂಚಲನ ನಡೆಯುತ್ತಿದೆ. ಇದರಿಂದಾಗಿ ಕಾಂಗ್ರೆಸ್‌ಗೆ ಭಯ ಉಂಟಾಗಿದ್ದು, ಆರ್‌ಎಸ್‌ಎಸ್ ಕಾರ್ಯ ಚಟುವಟಿಕೆಗಳನ್ನು ಸರ್ಕಾರಿ ಜಾಗಗ ಳಲ್ಲಿ ನಿಷೇಧಿಸಲು ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಧಮ್ ಇದ್ದರೆ ನಿಷೇಧ ಹೇರಲಿ ಎಂದು ಸವಾಲೆಸೆದ ರಂಜನ್ ಈ ಹಿಂದೆ ಎರಡು ಬಾರಿ ನಿಷೇಧ ಹೇರಿದರೂ ಆರ್‌ಎಸ್‌ಎಸ್ ಮತ್ತೆ ಪುನರಾಂಭಗೊAಡಿತ್ತು ಎಂದು ತಿಳಿಸಿದರು. ಈ ದೇಶದ ಪ್ರಧಾನಿ ಸೇರಿದಂತೆ ಬಿಜೆಪಿಯವರು ಕೂಡ ಆರ್‌ಎಸ್‌ಎಸ್‌ನಿಂದಲೇ ಬಂದವರು. ಆರ್‌ಎಸ್‌ಎಸ್ ಜಾತಿಗೆ ಸೀಮಿತವಾಗಿಲ್ಲ; ಇದರಲ್ಲಿ ಮುಸಲ್ಮಾನರು, ಕ್ರೆöÊಸ್ತರು ಕೂಡ ಇದ್ದಾರೆ. ಆರ್‌ಎಸ್‌ಎಸ್ ದೇಶಭಕ್ತ ಸಂಘಟನೆಯಾಗಿದ್ದು, ದೇಶಭಕ್ತಿ ಇರುವವರನ್ನು ಆರ್‌ಎಸ್‌ಎಸ್ ಸೇರಿಸಿಕೊಳ್ಳುತ್ತದೆ. ಇಂತಹ ಸಂಘಟನೆಯ ಕಾರ್ಯಚಟುವಟಿಕೆಗೆ ನಿಷೇಧ ಹೇರುವ ಅಧಿಕಾರ ಅವರಿಗಿಲ್ಲ. ಒಂದು ವೇಳೆ ನಿಷೇಧ ಹೇರಿದರೆ ದೇಶವೇ ದಂಗೆ ಏಳುತ್ತದೆ ಎಂದು ಅಪ್ಪಚ್ಚು ರಂಜನ್ ಎಚ್ಚರಿಕೆಯಿತ್ತರು. ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಪ್ರಿಯಾಂಕ್ ಖರ್ಗೆ ತಾಕತ್ತಿದ್ದರೆ ದಲಿತ ಸಮುದಾಯದವರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ರಾಜ್ಯದ ಮುಖ್ಯಮಂತ್ರಿ ಮಾಡುವ ಬಗ್ಗೆ ಮಾತನಾಡಲಿ ಹಾಗೂ ತಮ್ಮ ಇಲಾಖೆಯಲ್ಲಿ ಹೊಸ ಆವಿಷ್ಕಾರ ತರುವ ಬಗ್ಗೆ ಚಿಂತಿಸಲಿ ಎಂದು ಅಪ್ಪಚ್ಚು ರಂಜನ್ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಆರ್‌ಎಸ್‌ಎಸ್ ಕಾರ್ಯಚಟುವಟಿಕೆಗೆ ಸರ್ಕಾರಿ ಜಾಗಗಳಲ್ಲಿ ಏಕೆ ನಿಷೇಧ ಹೇರಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ. ಸಚಿವರೊಬ್ಬರ ಪತ್ರಕ್ಕೆ ಹಿಂದೆ ಮುಂದೆ ಯೋಚಿಸದೆ ಮುಖ್ಯಮಂತ್ರಿಗಳು ಈ ರೀತಿಯ ನಿರ್ಧಾರ ಕೈಗೊಳ್ಳಲು ಹೊರಟಿರುವುದು ಸರಿಯಲ್ಲ ಎಂದರು. ಆರ್‌ಎಸ್‌ಎಸ್‌ನ ಕಾರ್ಯಚಟುವಟಿಕೆಗೆ ನಿಷೇಧ ಹೇರುವುದಾ ದರೆ ಇತರ ಕೋಮಿನ ಸಂಘಟನೆಗಳ ಚಟುವ ಟಿಕೆಗೂ ಸರ್ಕಾರ ತಾಕತ್ತಿದ್ದರೆ ನಿಷೇಧ ಹೇರಿ ತೋರಿಸಲಿ ಎಂದು ಸವಾಲೆಸೆದರು. ಕೊಡಗಿನಲ್ಲಿ ಗೋಸಾಗಾಟ, ಗೋಹತ್ಯೆ ನಿರಂತರ ವಾಗಿ ನಡೆಯುತ್ತಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜನಪ್ರತಿನಿಧಿಗಳು ನಿಷ್ಕಿçಯರಾಗಿದ್ದಾರೆ ಎಂದು ಆರೋಪಿಸಿದ ರವಿ ಕಾಳಪ್ಪ ೪ನಾಲ್ಕನೇ ಪುಟಕ್ಕೆ (ಮೊದಲ ಪುಟದಿಂದ) ಪೊಲೀಸ್ ಇಲಾಖೆ ಗೋಹತ್ಯೆ, ಗೋಸಾಗಾಟದ ವಿರುದ್ಧ ಏಕೆ ಕಠಿಣ ಕ್ರಮಕೈಗೊಳ್ಳುತ್ತಿಲ್ಲ; ಯಾವುದಾದರು ಒತ್ತಡಗಳಿಗೆ ಪೊಲೀಸ್ ಇಲಾಖೆ ಮಣಿಯುತ್ತಿದೆಯೆ ಎಂದು ಪ್ರಶ್ನಿಸಿದರು. ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಸಮರ್ಪಕ ಎಂದ ಅವರು ಇದಕ್ಕೆ ಶಿಕ್ಷಕರುಗಳನ್ನು ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಸರ್ಕಾರ ಯಾವುದಾದರು ಯೋಜನೆ ಜಾರಿ ಮಾಡುವುದಿದ್ದರೆ ತಜ್ಞರ ಸಲಹೆ ಪಡೆದು ಸಮಪರ್ಕವಾಗಿ ಜಾರಿ ಮಾಡಲಿ ಎಂದು ರವಿ ಕಾಳಪ್ಪ ಹೇಳಿದರು.
ಬಿಜೆಪಿ ವಕ್ತಾರ ತಳೂರು ಕಿಶೋರ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದೇಶಪ್ರೇಮವಿಲ್ಲ ಎಂದು ಆರೋಪಿಸಿದರು. ಅವರುಗಳು ಆರ್‌ಎಸ್‌ಎಸ್ ಭೈಠಕ್‌ನಲ್ಲಿ ಪಾಲ್ಗೊಳ್ಳಲಿ, ಆಗ ಅವರಿಗೆ ದೇಶಪ್ರೇಮ ಏನೆಂಬುದು ಗೊತ್ತಾಗುತ್ತದೆ ಎಂದು ಹೇಳಿದರು. ದೇಶಕ್ಕೆ ಗಂಡಾAತರ ಎದುರಾದಾಗಲೆಲ್ಲ ಆರ್‌ಎಸ್‌ಎಸ್ ದೇಶಕ್ಕಾಗಿ ಸೇವೆ ಮಾಡುತ್ತಾ ಬಂದಿದೆ ಎಂದು ಅವರು ನುಡಿದರು.
ಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ಚಲನ್‌ಕುಮಾರ್, ವಿ.ಕೆ. ಲೋಕೇಶ್ ಉಪಸ್ಥಿತರಿದ್ದರು.