ಕೂಡಿಗೆ, ಅ. ೨೧: ಕುಶಾಲನಗರ ಸುಂದರ ನಗರದ ಕುಶಾಲನಗರ ಪ್ರಥಮ ದರ್ಜೆ ಕಾಲೇಜು ಪಕ್ಕದಲ್ಲಿ ಇರುವ ಅಂಬೇಡ್ಕರ್ ಭವನದ ಕಾಮಗಾರಿ ೧೦ ವರ್ಷಗಳಿಂದ ಪೂರ್ಣಗೊಳ್ಳದೆ ಇರುವುದರಿಂದ ಕೂಡಲೆ ಕಾಮಗಾರಿಯನ್ನು ಸಂಬAಧಿಸಿದ ಇಲಾಖೆಯವರು ಪೂರ್ಣಗೊಳಿಸಿ ಕಾರ್ಯಕ್ರಮಗಳನ್ನು ನಡೆಸಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ದಸಂಸ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಕರ್ನಾಟಕ ದಸಂಸ ಭೀಮಾವಾದ ಹಾಗೂ ಆರ್‌ಪಿಐ ಪಕ್ಷದ ರಾಜ್ಯ ಸಂಘಟನಾ ಸಂಚಾಲಕ ಕೆ.ಬಿ. ರಾಜು,

ಆರ್.ಪಿ.ಐ ಹಾಗೂ ಡಿಎಸ್‌ಎಸ್ ಪ್ರಮುಖರಾದ ರಾಮ್ ಕುಮಾರ್, ಬಿ.ಎಸ್. ರಮೇಶ್, ಎಸ್.ಕೆ. ಸ್ವಾಮಿ, ಟಿ.ಜಿ. ಶಿವಪ್ಪ, ಸುಶೀಲ ತ್ಯಾಗರಾಜ್, ಡಿ.ಟಿ. ಸುರೇಶ್ ಕುಮಾರ್, ಪ್ರೇಮಾ, ಮತ್ತಿತರರು ಪಾಲ್ಗೊಂಡಿದ್ದರು.