ಸೋಮವಾರಪೇಟೆ, ಅ. ೧೮: ಕಳೆದ ತಾ. ೧೩ರ ನಡುಕಿನ ಜಾವ ೨.೩೦ರ ಸುಮಾರಿಗೆ ಅಕ್ರಮವಾಗಿ ಗೋವುಗಳನ್ನು ಸಾಗಾಟಗೊಳಿಸುತ್ತಿದ್ದ ಸಂದರ್ಭ, ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಪಲ್ಟಿಯಾಗಿ ಮೂರು ಗೋವುಗಳ ಸಹಿತ ಈರ್ವರು ಆರೋಪಿಗಳು ಗಾಯಗೊಂಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರಪೇಟೆಯಿಂದ ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ಅಕ್ರಮವಾಗಿ ಮೂರು ಗೋವುಗಳನ್ನು ಸಾಗಾಟಗೊಳಿಸಿದ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಅಲ್‌ಮಸ್ ಖಾನ್ ಮತ್ತು ಸಯ್ಯದ್ ಗಫೂರ್ ಸೇರಿದಂತೆ, ಬೆಂಗಾವಲು ವಾಹನವನ್ನು ಚಾಲಿಸಿ, ಆರೋಪಿಗಳನ್ನು ಘಟನಾ ಸ್ಥಳದಿಂದ ಸಾಗಿಸಿದ್ದ ಇನ್ನೋವಾ ಕಾರನ್ನು ಚಾಲಿಸುತ್ತಿದ್ದ ದಿಲ್‌ವಾಜ್ ಅವರುಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಳೆದ ತಾ. ೧೩ರ ನಸುಕಿನ ಜಾವ ಪಟ್ಟಣ ಸಮೀಪದ ಸೋಮವಾರಪೇಟೆ-ಶನಿವಾರಸಂತೆ ರಾಜ್ಯ ಹೆದ್ದಾರಿಯ ಕಾಗಡಿಕಟ್ಟೆ ಬಳಿಯ ಅಯ್ಯಪ್ಪ ದೇವಾಲಯದ ತಿರುವಿನಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟಗೊಳಿಸುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಅಶೋಕ್ ಲೈಲ್ಯಾಂಡ್ ಕಂಪೆನಿಯ ಗೂಡ್ಸ್ ವಾಹನ ಗುಂಡಿಗೆ ಮಗುಚಿಕೊಂಡಿತ್ತು.
ಘಟನೆಯಿAದ ವಾಹನದಲ್ಲಿದ್ದ ಅಲ್‌ಮಸ್ ಖಾನ್ ಮತ್ತು ಸಯ್ಯದ್ ಗಫೂರ್‌ಗೆ ಗಾಯಗಳಾಗಿದ್ದು, ಇದರೊಂದಿಗೆ ಮೂರು ಗೋವುಗಳಿಗೂ ಪೆಟ್ಟಾಗಿದ್ದವು. ತಕ್ಷಣ ಗೂಡ್ಸ್ ವಾಹನಕ್ಕೆ ಬೆಂಗಾವಲು ವಾಹನವಾಗಿ ಬಳಕೆಯಾಗುತ್ತಿದ್ದ ಇನ್ನೋವಾ ಕಾರಿನಲ್ಲಿ ದಿಲ್‌ನವಾಜ್ ಎಂಬಾತ ಈರ್ವರನ್ನು ರಾತೋರಾತ್ರಿ ಅರಕಲಗೂಡಿಗೆ ಕರೆದೊಯ್ದಿದ್ದ.
ಈ ಘಟನೆಗೆ ಸಂಬAಧಿಸಿದAತೆ ಪೊಲೀಸರು ಆರೋಪಿಗಳನ್ನು ಬಂಧಿಸಿರಲಿಲ್ಲ. ಜಿಲ್ಲೆಯಲ್ಲಿ ನಿರಂತರವಾಗಿ ಅಕ್ರಮ ಗೋ ಕಳ್ಳತನ, ಗೋಹತ್ಯೆ, ಗೋಮಾಂಸ ಮಾರಾಟ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಪದಾಧಿಕಾರಿಗಳು ನಿನ್ನೆ ದಿನ ಸೋಮವಾರಪೇಟೆ ಪೊಲೀಸ್ ಠಾಣೆ ಎದುರು ತೀವ್ರ ಪ್ರತಿಭಟನೆ ನಡೆಸಿದ್ದರು.
ಕಳೆದ ತಾ. ೧೬ರಂದು ಕೃತ್ಯದ ಓರ್ವ ಆರೋಪಿ ಅಲ್‌ಮಸ್ ಖಾನ್‌ನನ್ನು ಅರಕಲಗೂಡಿನಲ್ಲಿ ವಶಕ್ಕೆ ಪಡೆದಿದ್ದ ಪೊಲೀಸರು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದರೊಂದಿಗೆ ಇನ್ನೋವಾ ಕಾರನ್ನು ವಶಕ್ಕೆ ಪಡೆದಿದ್ದರು.
ಹಿಂದೂ ಜಾಗರಣಾ ವೇದಿಕೆಯ ಪ್ರತಿಭಟನೆಯ ನಂತರ ನಿನ್ನೆ ರಾತ್ರಿ ಕೃತ್ಯದ ಈರ್ವರು ಆರೋಪಿಗಳನ್ನು ಸ್ಥಳದಿಂದ ಕರೆದೊಯ್ದ; ಎಸ್ಕಾರ್ಟ್ ವಾಹನವಾಗಿ ಬಳಕೆಯಾಗಿದ್ದ ಇನ್ನೋವಾ ಕಾರನ್ನು ಚಾಲಿಸುತ್ತಿದ್ದ ದಿಲ್‌ನವಾಜ್ ನನ್ನು ಬಂಧಿಸಲಾಗಿದೆ. ಇಂದು ಮತ್ತೋರ್ವ ಆರೋಪಿ ಸೈಯ್ಯದ್ ಗಫೂರ್‌ನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ ಅವರ ನೇತೃತ್ವದಲ್ಲಿ ಮೂರು ತನಿಖಾ ತಂಡಗಳು ನಿರಂತರವಾಗಿ ಕಾರ್ಯಾಚರಣೆ ನಡೆಸಿ ಗೋಕಳ್ಳರನ್ನು ಬಂಧಿಸಿದೆ.