ಶನಿವಾರಸಂತೆ, ಅ. ೧೮: ನಂದಿಕೆರೆ ನಂದಿನೇಸರ ಉದ್ಯಾನವನ ಸುಂದರ ಪರಿಸರದಲ್ಲಿದ್ದು ಧಾರ್ಮಿಕತೆಯ ಭಾವನೆ ಮೂಡಿಸುವಂತಿದೆ. ಧಾರ್ಮಿಕ ಕೇಂದ್ರಗಳು ಸಮಾಜದ ಸುಸ್ಥಿತಿ ಕಾಪಾಡುತ್ತವೆ. ಧಾರ್ಮಿಕ ಕೇಂದ್ರಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಗೌರವ ಭಾವನೆ ಮೂಡಬೇಕು ಎಂದು ಅರಕಲಗೂಡು ಅರೆಮಾದನಹಳ್ಳಿ ವಿಶ್ವಕರ್ಮ ಜಗತ್ ಗುರು ಪೀಠದ ಅನಂತ ಶ್ರೀವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ಸಮೀಪದ ಕೊಡ್ಲಿಪೇಟೆಯ ನಂದಿಕೆರೆ ಆವರಣದ ನಂದಿ ನೇಸರ ಉದ್ಯಾನವನದಲ್ಲಿ ಗಂಗಾರತಿ-ಬಾಗಿನ ಸಮರ್ಪಣಾ ಕಾರ್ಯಕ್ರಮದ ನಂತರ ನಡೆದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆ ಸ್ವೀಕರಿಸಿದ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಕೊಡಗು ಜಿಲ್ಲೆಗೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ರೂ. ೩೦೦ ಕೋಟಿ ಅನುದಾನ ತಂದರೂ ಸ್ಮರಿಸುವ ಕಾರ್ಯ ಆಗಿಲ್ಲ. ಕೊಡ್ಲಿಪೇಟೆಗೆ ಕರೆಸಿ ಗೌರವ ಸಮರ್ಪಿಸಿದ್ದಕ್ಕೆ ಧನ್ಯತೆ ಅರ್ಪಿಸುತ್ತೇನೆ. ಯಾರೇ ಒಳ್ಳೆಯ ಕೆಲಸ ಮಾಡಿದರೂ ಅವರನ್ನು ಗೌರವಿಸಲೇಬೇಕು. ಸಚಿವರಾದ ಮಾಧುಸ್ವಾಮಿಯವರು ಸಣ್ಣ ನೀರಾವರಿ ಸಚಿವರಾಗಿದ್ದಾಗ ಜಿಲ್ಲೆಗೆ ರೂ.೧೫೦ ಕೋಟಿ ಅನುದಾನ ನೀಡಿದ್ದು; ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಆಗಿವೆ. ಉತ್ತಮ ಸಮಾಜಮುಖಿ ಕೆಲಸ ಮಾಡುತ್ತಿರುವ ಚಂದ್ರಮೌಳಿ ಅವರ ಶ್ರಮದಿಂದ ನಂದಿನೇಸರ ಉದ್ಯಾನ ನಿರ್ಮಾಣವಾಗಿದೆ ಎಂದು ಶ್ಲಾಘಿಸಿದರು.
ಗೌರವ ಸಮರ್ಪಣೆ ಸ್ವೀಕರಿಸಿದ ಮತ್ತೋರ್ವ ಮುಖ್ಯ ಅತಿಥಿ ಮಾಜಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಕೆರೆ ನಿರ್ಮಾಣ ಕೆರೆ ಜೀರ್ಣೋದ್ಧಾರ ಮಾಡುವುದು ಪುಣ್ಯದ ಕೆಲಸವಾಗಿದೆ. ನೀರು ಸಂಗ್ರಹವಾದAತೆ ಅಂತರ್ಜಲ ಹೆಚ್ಚಾಗಿ ಜೀವಜಲ ಉಳಿಯುತ್ತದೆ.ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ೧೩೮ ಕೆರೆಗಳಿಗೆ ನೀರುಣಿಸುವ ಕೆಲಸ ಮಾಡಿರುತ್ತೇನೆ. ಸಣ್ಣ ನೀರಾವರಿ ಇಲಾಖೆಯೂ ಇದೆ ಎಂದು ರಾಜ್ಯಕ್ಕೆ ತೋರಿಸುವಷ್ಟು ಕಾರ್ಯಕ್ರಮಗಳು ನನ್ನ ಅವಧಿಯಲ್ಲಿ ಆಗಿದೆ. ಚಂದ್ರಮೌಳಿಯವರ ಮನವಿ ಮೇರೆಗೆ ಕೆರೆಯನ್ನು ಅಭಿವೃದ್ಧಿಪಡಿಸಲು ಅನುದಾನ ನೀಡಿದೆ. ರಾಜಕಾರಣವೇ ಶ್ರೇಷ್ಠವಲ್ಲ; ಸಾಧನೆ ಮಾಡಲು ಬೇಕಾದಷ್ಟು ವೇದಿಕೆ ಇದೆ ಎಂದರು.
ಹಾಸನ ಶ್ರೀ ಆದಿಚುಂಚನಗಿರಿ ಶಾಖಾಮಠದ ಶಂಭುನಾಥ ಸ್ವಾಮೀಜಿಯವರು ಮಾತನಾಡಿ, ಅಧ್ಯಾತ್ಮಿಕ ಚಿಂತನೆ ಮೈಗೂಡಿಸಿಕೊಳ್ಳಲು ಗಂಗಾರತಿ-ಬಾಗಿನ ಸಮರ್ಪಣೆಯಂಥ ಕಾರ್ಯಕ್ರಮಗಳು ಕಾರಣವಾಗುತ್ತವೆ. ಉತ್ತಮ ಕಾರ್ಯಕ್ರಮಗಳ ಬಗ್ಗೆ ಚಿಂತನೆ ನಡೆಸಬೇಕು ಎಂದರು.
ಹೈಕೋರ್ಟ್ ಹಿರಿಯ ವಕೀಲ ಹಾಗೂ ಕೊಡ್ಲಿಪೇಟೆ ವಿದ್ಯಾಸಂಸ್ಥೆ ಅಧ್ಯಕ್ಷ ಚಂದ್ರಮೌಳಿ ಸಭಾಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ, ನಮ್ಮೂರಿನಲ್ಲೂ ಬೆಂಗಳೂರಿನ ಮಾದರಿಯಲ್ಲಿ ಉದ್ಯಾನ ಮಾಡಬೇಕೆಂಬ ಹಲವಾರು ವರ್ಷಗಳ ಆಲೋಚನೆಗೆ ಅಂದಿನ ಸಣ್ಣ ನೀರಾವರಿ ಮಂತ್ರಿ ಮಾಧುಸ್ವಾಮಿಯವರು ಸ್ಪಂದಿಸಿ, ಆಗ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರು ಕೈಜೋಡಿಸಿ, ಪ್ರಸ್ತುತ ನೀರಾವರಿ ಸಚಿವರಾಗಿರುವ ಭೋಸ್‌ರಾಜ್ ಮತ್ತು ಶಾಸಕ ಡಾ. ಮಂತರ್ ಗೌಡ ಅವರುಗಳ ಸಹಕಾರದಿಂದ ರೂ. ೩ ಕೋಟಿ ಅನುದಾನದಡಿ ಸುಂದರ ಉದ್ಯಾನವನ ನಿರ್ಮಾಣವಾಗಿದೆ. ಗೌರವಿಸುವುದು ಸಂಸ್ಕಾರದ ಭಾಗ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ.ಸೋಮಶೇಖರ್ “ವಚನ ಸಾಹಿತ್ಯ’’ ವಿಷಯದ ಬಗ್ಗೆ ಹಾಗೂ ಅಂತರರಾಷ್ಟ್ರೀಯ ಶಿಕ್ಷಣ ತಜ್ಞ ಎ.ಎಚ್.ಸಾಗರ್ “ಸಮರಸವೇ ಜೀವನ’’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಮಾದ್ರೆ ಮುದ್ದಿನಕಟ್ಟೆಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮನೆಹಳ್ಳಿಮಠ ತಪೋವನ ಕ್ಷೇತ್ರದ ಮಹಾಂತಶಿವಲಿAಗ ಸ್ವಾಮೀಜಿ, ಕಲ್ಲಳ್ಳಿಮಠದ ರುದ್ರಮುನಿ ಸ್ವಾಮೀಜಿ, ಕಲುಮಠದ ಮಹಾಂತಸ್ವಾಮೀಜಿ ಆಶೀರ್ವಚನ ನೀಡಿದರು.
ಕೆ.ಎಸ್.ಎಫ್.ಸಿ. ರಾಜ್ಯ ಸಹಾಯಕ ನಿರ್ದೇಶಕ ಸಂಗಮೇಶ್, ನಿವೃತ್ತ ಕೆಎಂಎಫ್‌ನ ಎಂ.ಡಿ. ಪ್ರೇಮನಾಥ್, ತ್ರಿವೇಣಿ ಮಾಧುಸ್ವಾಮಿ, ಅರುಣಾಚಂದ್ರಮೌಳಿ, ಡಾ.ಉದಯ್ ಕುಮಾರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ, ಇತರ ಗಣ್ಯರು ಉಪಸ್ಥಿತರಿದ್ದರು. ಡಾ.ಉದಯಕುಮಾರ್ ಸ್ವಾಗತಿಸಿ, ವೀಣಾ ನಿರೂಪಿಸಿ, ಯತೀಶ್ ವಂದಿಸಿದರು.
ರಾತ್ರಿ ನಡೆದ ಬೆಂಗಳೂರಿನ ಗಾನಗಂಗಾ ತಂಡದ ಪಂಪಾಪತಿ ಗದ್ದಿ, ಅರ್ಪಿತಾ ಮತ್ತು ಸಂಗಡಿಗರ ಸುಗಮ ಸಂಗೀತ ಕಾರ್ಯಕ್ರಮ ಜನಮನ ರಂಜಿಸಿತು. ಕಾರ್ಯಕ್ರಮದ ಪ್ರಯುಕ್ತ ನಂದಿನೇಸರ ಉದ್ಯಾನವನ ದೀಪಾಲಂಕಾರದಿAದ ಕಂಗೊಳಿಸುತ್ತಿತ್ತು.