ಬೆಂಗಳೂರು, ಅ. ೧೮ : ತನ್ನ ಪ್ರೇಯಸಿಯ ಜೊತೆಗೆ ಬೆಂಗಳೂರಿನ ಹೊಟೇಲೊಂದರ ಕೊಠಡಿಯಲ್ಲಿ ಕಳೆದ ೮ ದಿನಗಳಿಂದ ವಾಸವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಯುವಕ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ.
ಮೃತನನ್ನು ಪುತ್ತೂರಿನ ತಕ್ಷಿತ್ (೨೦) ಎಂದು ಗುರುತಿಸಲಾಗಿದೆ. ಈತನ ಜತೆಗಿದ್ದ ಯುವತಿ ವೀರಾಜಪೇಟೆ ಮೂಲದವಳೆಂದು ತಿಳಿದು ಬಂದಿದೆ. ತಾ. ೯ರಂದು ಮಧ್ಯಾಹ್ನ ಇಬ್ಬರೂ ಕೂಡ ಮಡಿವಾಳದ ಗ್ರಾö್ಯಂಡ್ ಚಾಯ್ಸ್ ಲಾಡ್ಜ್ನಲ್ಲಿ ರೂಮ್ ಪಡೆದಿದ್ದರು. ತಾ. ೧೭ ರಂದು ಈತನ ಪ್ರೇಯಸಿ ಪಾಯಲ್ (೨೦) (ಹೆಸರು ಬದಲಿಸಲಾಗಿದೆ) ರೂಮಿನಿಂದ ಆಚೆ ಹೋದವಳು ಮತ್ತೆ ಬಂದಿರಲಿಲ್ಲ. ಅಲ್ಲದೆ ಅಂದು ಈತ ರೂಮಿನಿಂದ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡಿದ್ದ ಹೊಟೇಲ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ರೂಮ್ ಒಳಗೆ ಹೋಗಿ ನೋಡಿದಾಗ ಆತನ ಶವ ನೆಲದ ಮೇಲೆ ಬಿದ್ದಿತ್ತು. ಕೂಡಲೇ ಸಿಬ್ಬಂದಿಯು ಪೊಲೀಸರಿಗೆ ತಿಳಿಸಿದ್ದಾರೆ.
ಯುವಕ ಸಾವು ಕಾಣುವ ಮುಂಚೆಯೇ ಯುವತಿ ಬೆಂಗಳೂರನ್ನು ತೊರೆದಿದ್ದಳು ಎನ್ನಲಾಗಿದೆ. ಇದರಿಂದಾಗಿ ಸಾವಿನ ಸುತ್ತ ಹಲವು ಅನುಮಾನ ವ್ಯಕ್ತವಾಗಿದೆ. ಈ ಕುರಿತು ಮಾಹಿತಿ ನೀಡಿದ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರು ಇಬ್ಬರೂ ಕೂಡ ಹೊಟೇಲ್ನಲ್ಲಿ ರೂಮ್ ಪಡೆದುಕೊಂಡು ವಾಸ್ತವ್ಯ ಹೂಡಿದರು. ಪ್ರಾಥಮಿಕ ತನಿಖೆಯ ಪ್ರಕಾರ ಇಬ್ಬರೂ ಮಂಗಳೂರು ಹೊರವಲಯದ ಕಾಲೇಜೊಂದರಲ್ಲಿ ಬಿಬಿಎ ಪದವಿ ಒದುತ್ತಿದ್ದಾಗ ಪರಿಚಿತರಾಗಿ ನಂತರ ಪರಸ್ಪರ ಪ್ರೀತಿಸಿದ್ದಾರೆ. ಇಬ್ಬರೂ ಕೂಡ ನಿಗದಿತ ವಿಷಯಗಳಲ್ಲಿ ತೇರ್ಗಡೆ ಆಗದ ಕಾರಣ ಕಾಲೇಜಿನಿಂದ `ಡ್ರಾಪೌಟ್’ ಆಗಿದ್ದರು ಎಂದು ತಿಳಿಸಿದರು.
ತಕ್ಷಿತ್, ತನ್ನ ಮನೆಯವರಿಗೆ ಮೈಸೂರಿಗೆ ಓÀzಲು ಹೋಗ್ತೀನಿ ಎಂದು ಸುಳ್ಳು ಹೇಳಿ ಪ್ರೇಯಸಿ ಜೊತೆ ಮಡಿವಾಳದ ಲಾಡ್ಜ್ನಲ್ಲಿ ರೂಮ್ ಮಾಡಿಕೊಂಡಿದ್ದ. ಕಳೆದ ಎಂಟು ದಿನದಿಂದಲೂ ಜೋಡಿಯು ಝೊಮ್ಯಾಟೋ ಮತ್ತು ಸ್ವಿಗ್ಗಿಯಿಂದ ಊಟ ತಿಂಡಿ ತರಿಸಿಕೊಂಡು ಸೇವಿಸುತ್ತಿದ್ದರು ಎಂದು ಲಾಡ್ಜ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಗುರುವಾರ ಊಟ ಸೇವಿಸಿದ ಬಳಿಕ ಇಬ್ಬರು ಅಸ್ವಸ್ಥಗೊಂಡು ಮೆಡಿಕಲ್ನಿಂದ ಮಾತ್ರೆ ತಂದು ಸೇವಿಸಿದ್ದರು ಎನ್ನಲಾಗಿದೆ
ಸ್ವಲ್ಪ ಆರಾಮ ಆಗುತ್ತಿದ್ದಂತೆ ಶುಕ್ರವಾರ ಮಧ್ಯಾಹ್ನ ಊಟ ಮುಗಿಸಿ ಯುವತಿ ರೂಮ್ ಚೆಕ್ಔಟ್ ಮಾಡಿ ಕೊಡಗಿಗೆ ವಾಪಸಾಗಿದ್ದಳು. ಆದರೆ, ರೂಮ್ನಲ್ಲಿದ್ದ ತಕ್ಷಿತ್ ಮಲಗಿದ್ದಲ್ಲಿಯೇ ಮೃತ್ತಪಟ್ಟಿದ್ದಾನೆ. ತಕ್ಷಣ ಮಡಿವಾಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಕೋನಗಳಲ್ಲಿಯೂ ತನಿಖೆ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ತಕ್ಷಿತ್ಗೆ ಹೃದಯಾಘಾತ ಆಗಿರೋ ಶಂಕೆ ವ್ಯಕ್ತವಾಗಿದ್ದು, ಯುಡಿಆರ್ ದಾಖಲಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.
ಆದರೆ ಈ ಪ್ರಕರಣದಲ್ಲಿ ಪೊಲೀಸರಿಗೆ ಹಲವು ಅನುಮಾನ ವ್ಯಕ್ತವಾಗಿದೆ. ಸ್ವಿಗ್ಗಿಯಲ್ಲಿ ತಂದ ಆಹಾರದಿಂದ ಫುಡ್ ಪಾಯ್ಸನ್ ಆಗಿರಬಹುದು ಎನ್ನುವ ಅನುಮಾನವಿದೆ. ಯುವತಿ ರೂಮ್ನಿಂದ ಹೊರಗೆ ಹೋಗೋವರೆಗೂ ಜೀವಂತವಾಗಿದ್ದ ತಕ್ಷಿತ್ ನಂತರ ಸಾವನ್ನಪ್ಪಿದ್ದು ಹೇಗೆ? ತಕ್ಷಿತ್ ಯುವತಿ ಜೊತೆ ೮ ದಿನ ರೂಮ್ನಲ್ಲಿ ವಾಸ್ತವ್ಯ ಹೂಡಿದ್ದ ಉದ್ದೇಶವಾದರೂ ಏನು ? ಹಾಗೆ ನಾನಾ ಅನುಮಾನಗಳಿಗೆ ಪೊಲೀಸರು ಉತ್ತರ ಹುಡುಕುವ ಪ್ರಯತ್ನದಲ್ಲಿದ್ದಾರೆ.
ಯುವಕನ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು ಶನಿವಾರ ಮರಣೋತ್ತರ ಪರೀಕ್ಷೆ ನಡೆಸಿ ಮೃತನ ಪೋಷಕರಿಗೆ ಒಪ್ಪಿಸಲಾಗಿದೆ. ಪೊಲೀಸರು ಅಸ್ವಾಭಾವಿಕ ಮರಣ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಮರಣೋತ್ತರ ಪರೀಕ್ಷಾ ವರದಿಯನ್ನು ಕಾಯುತಿದ್ದಾರೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಾರಾ ಫಾತಿಮಾ ತಿಳಿಸಿದರು.