ಅಫ್ಘಾನಿಸ್ತಾನ, ಅ. ೧೮ : ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನ ಹಾಗೂ ನೆರೆ ರಾಷ್ಟç ಪಾಕಿಸ್ತಾನದ ನಡುವೆ ಕಳೆದ ಕೆಲವು ದಿನಗಳ ಹಿಂದೆ ಪ್ರಾರಂಭವಾದ ಸಂಘರ್ಷ ಇಂದೂ ಮುಂದುವರಿದಿದ್ದು, ಪಾಕಿಸ್ತಾನ ತಾ.೧೭ರಂದು ನಡೆಸಿದ ವಾಯು ದಾಳಿಗೆ ಅಫ್ಘಾನಿಸ್ತಾನದ ೩ ವೃತ್ತಿಪರ ಕ್ರಿಕೆಟಿಗರು ಸೇರಿದಂತೆ ೮ ಮಂದಿ ಅಮಾಯಕರು ಬಲಿಯಾಗಿದ್ದಾರೆ. ಸಿಗ್ಭಾತುಲ್ಹಾ, ಹರೂನ್ ಹಾಗೂ ಕಬೀರ್ ಆಗಾ ಅವರುಗಳು ಅಫ್ಘಾನಿನ ಪ್ರಾದೇಶಿಕ ತಂಡಗಳನ್ನು ಪ್ರತಿನಿಧಿಸುತ್ತಿದ್ದು, ಪಾಕ್ ದಾಳಿಗೆ ಮೂವರೂ ಬಲಿಯಾಗಿದ್ದಾರೆ. ಅಲ್ಲಿನ ರ್ಗೂನ್ ಜಿಲ್ಲೆಯ ಪಕ್ಟಿಕಾ ಪ್ರದೇಶದ ಮೇಲೆ ದಾಳಿ ಮಾಡಿದ ಪಾಕ್ ವಾಯುದಳ, ಅಲ್ಲಿಯದ್ದೇ ನಿವಾಸಿಗಳಾದ ಮೂವರು ಆಟಗಾರರನ್ನು ಬಲಿ ಪಡೆದಿದೆ. ಒಂದು ದಿನದ ಹಿಂದೆ ಈ ಮೂವರು ಕ್ರಿಕೆಟಿಗರು ಶರಾನ ಎಂಬ ಪ್ರದೇಶಕ್ಕೆ ತೆರಳಿ ಕ್ರಿಕೆಟ್ ಪಂದ್ಯಾಟವೊAದರಲ್ಲಿ ಭಾಗವಹಿಸಿದ್ದರು.
ಪಂದ್ಯದಲ್ಲಿ ಇವರ ತಂಡ ಜಯಗಳಿಸಿದ್ದು, ಈ ಸಂಬAಧ ತಮ್ಮ ಸ್ವಂತ ಊರಾದ ಪಕ್ಟಿಕಾದಲ್ಲಿ ವಿಜಯೋತ್ಸವವನ್ನು ಆಚರಿಸುತ್ತಿದ್ದ ಸಂದರ್ಭವೇ ಪಾಕ್ ದಾಳಿ ಮಾಡಿ ಮೂವರು ಕ್ರಿಕೆಟಿಗರು ಸೇರಿ ೮ ಅಮಾಯಕರನ್ನು ಬಲಿ ಪಡೆದಿದೆ.
ಪಾಕ್ ಜೊತೆ ಪಂದ್ಯ ಆಡದಿರಲು ತೀರ್ಮಾನ
ಘಟನೆ ನಡೆದ ಕೆಲವೇ ಕ್ಷಣದಲ್ಲಿ ಅಫ್ಘಾನಿಸ್ತಾನದ ಕ್ರಿಕೆಟ್ ಮಂಡಳಿಯು ಮುಂದಿನ ತಿಂಗಳೂ ನಿಗದಿಯಾಗಿದ್ದ ಪಾಕ್ನೊಂದಿಗಿನ ಪಂದ್ಯವನ್ನು ಆಡದಿರಲು ನಿರ್ಧರಿಸಿದೆ. ಪಾಕ್, ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವೆ ಟಿ-೨೦ ಕ್ರಿಕೆಟ್ ಸರಣಿ ನವೆಂಬರ್ ತಿಂಗಳಲ್ಲಿ ನಿಗದಿಯಾಗಿತ್ತು. ಅಫ್ಘಾನಿಸ್ತಾನದ ಕ್ರಿಕೆಟ್ ತಂಡದ ನಾಯಕ ರಶೀದ್ ಖಾನ್ ಸೇರಿದಂತೆ ಇತರ ಆಟಗಾರರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಲ್ಲದೆ ಪಾಕಿಸ್ತಾನದೊಂದಿಗೆ ಮುಂದಿನ ತಿಂಗಳು ಪಂದ್ಯ ಆಡದಿರಲು ಕ್ರಿಕೆಟ್ ಮಂಡಳಿ ಕೈಗೊಂಡ ನಿರ್ಧಾರವನ್ನು ಸ್ವಾಗತಿಸಿದ್ದಾರೆ.