ತಲಕಾವೇರಿ, ಅ. ೧೭: ಮಟ ಮಟ ಮಧ್ಯಾಹ್ನ ವೇಳೆ... ಸೂರ್ಯನ ಒಂದಷ್ಟು ಪ್ರಖರತೆ... ಆದರೂ ಆಹ್ಲಾದಕರವಾದ ವಾತಾವರಣ... ಸುಂದರ... ಸ್ವಚ್ಛವಾದ ಧಾರ್ಮಿಕತೆಯ ಭಕ್ತಿ ಭಾವದ ಸ್ಥಳದಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಇಲ್ಲಿ ಇದ್ದದ್ದು ಕೇವಲ ಭಕ್ತಿಯ ಪರಾಕಾಷ್ಠೆಯಷ್ಟೇ... ವೇದ ಮಂತ್ರಗಳ ಪಠಣ ಒಂದೆಡೆಯಾದರೆ, ಸುತ್ತಮುತ್ತಲೆಲ್ಲೂ ಮೊಳಗುತ್ತಿದ್ದ ಜಯಘೋಷಗಳು... ಕಣ್ಣು ಮುಚ್ಚಿ, ಕೈಮುಗಿದು ಪ್ರಾರ್ಥನೆಗೈಯ್ಯುತ್ತಿದ್ದ ಭಕ್ತ ಸಮೂಹ... ಮತ್ತೊಂದೆಡೆ ಭಜನೆ ಈ ಚಿತ್ರಣವಿದ್ದದ್ದು ಕಾವೇರಿ ಉಗಮ ಸ್ಥಾನವಾದ ಶ್ರೀ ತಲಕಾವೇರಿ ಸನ್ನಿಧಿಯಲ್ಲಿ.

ಇಂತಹ ಧಾರ್ಮಿಕತೆ ತುಂಬಿ ತುಳುಕುತ್ತಿದ್ದ ಸನ್ನಿವೇಶದ ನಡುವೆ ತೀರ್ಥರೂಪಿಣಿಯಾಗಿ ವರುಷಕ್ಕೊಮ್ಮೆ ಭಕ್ತರನ್ನು ಹರಸುವ ಕಾವೇರಿ ಮಾತೆ ಎಂದಿನAತೆ ದರುಶನವಿತ್ತು ನಾಡಿನ ಜನತೆಯನ್ನು ಪುನೀತಗೊಳಿಸಿದಳು.

ಕನ್ನಡ ನಾಡಿನ ಜೀವನದಿ, ಕೊಡಗಿನ ಆರಾಧ್ಯದೈವ, ಕೊಡವರ ಕುಲಮಾತೆ ಶ್ರೀ ಕಾವೇರಿ ತೀರ್ಥೋದ್ಭವ ಇಂದು ಮಕರ ಲಗ್ನದಲ್ಲಿ ಸೂರ್ಯನು ತುಲಾರಾಶಿಯನ್ನು ಪ್ರವೇಶಿಸಿದ ಕ್ಷಣದಲ್ಲಿ ಘಟಿಸಿತು. ಅಪರಾಹ್ನ ೧.೪೪ರ ನಿಗದಿತ ವೇಳೆಯಲ್ಲಿ ಕಾವೇರಿ ತೀರ್ಥ ಸ್ವರೂಪಿಣಿಯಾಗಿ ದರುಶನ ವಿತ್ತ ಕ್ಷಣ ತಲಕಾವೇರಿ ಕ್ಷೇತ್ರವನ್ನು ಪುಳಕಿತಗೊಳಿಸಿತ್ತು.

ಜೈ... ಜೈ ಮಾತಾ... ಕಾವೇರಿ ಮಾತಾ ಕಾವೇರಮ್ಮನ ಪಾದಾರವಿಂದಕ್ಕೆ ಗೋವಿಂದ... ಕನ್ನಿಬಾಳೋ... ಕಾವೇರಿಬಾಳೋ... ಕಾವೇರಮ್ಮ ಉಕ್ಕಿ ಬಾ ಎಂಬಿತ್ಯಾದಿ ಘೋಷಣೆಗಳು ಈ ವೇಳೆಯಲ್ಲಿ ಮುಗಿಲು ಮುಟ್ಟಿದ್ದವು. ತಳಿಯತಕ್ಕಿ ಬೊಳಕ್ ಹಿಡಿದು ಮಾತೆಯ ಸ್ವಾಗತಕ್ಕೆ ಮುಂದಾಗಿದ್ದ ಮಹಿಳೆಯರು, ದುಡಿಕೊಟ್ಟ್ಪಾಟ್‌ನೊಂದಿಗೆ ಅಮ್ಮನನ್ನು ಬರಮಾಡಿಕೊಳ್ಳುತ್ತಿದ್ದ ಪುರುಷರು, ವೇದ ಪಠಣಗಳೊಂದಿಗೆ ದೈವಿಕ ಕಾರ್ಯ ನೆರವೇರಿಸುತ್ತಿದ್ದ ವೈದಿಕ ಸಮೂಹ. ಇವರೆಲ್ಲರೊಂದಿಗೆ ಬೆರೆತಿದ್ದ ಸಮಸ್ತ ಭಕ್ತಾದಿಗಳು ಈ ಬಾರಿಯ ಪವಿತ್ರ ತೀರ್ಥೋದ್ಭವವನ್ನು ಸಾಕ್ಷೀಕರಿಸಿದರು. ಪ್ರಮುಖ ಜನಪ್ರತಿನಿಧಿಗಳು, ಅಧಿಕಾರಿಗಳಾದಿಯಾಗಿ ಕೊಡಗು ಸೇರಿದಂತೆ, ರಾಜ್ಯದ ಇತರೆಡೆಗಳಿಂದ ನೆರೆಯ ತಮಿಳುನಾಡು, ಕೇರಳ ರಾಜ್ಯದ ಭಕ್ತಾದಿಗಳು ಈ ಪವಿತ್ರ ಕ್ಷಣವನ್ನು ಕಣ್ತುಂಬಿಕೊAಡರು. ಪ್ರಸಕ್ತ ವರ್ಷ ಕಾವೇರಿ ತೀರ್ಥೋದ್ಭವ ಅಪರಾಹ್ನ ೧.೪೪ಕ್ಕೆ ನಿಗದಿಯಾಗಿದ್ದು, ಈ ನಿಗದಿತ ವೇಳೆಯಲ್ಲೇ ತೀರ್ಥರೂಪಿಣಿ ಕಾವೇರಿ ದರುಶನವಿತ್ತಳು.

ತೀರ್ಥರೂಪಿಣಿಯಾಗಿ ಪ್ರತ್ಯಕ್ಷಗೊಳ್ಳುವ ಕಾವೇರಿ ದರ್ಶನಕ್ಕಾಗಿ ಬೆಳಿಗ್ಗಿನಿಂದಲೇ ಭಕ್ತರ ದಂಡು ತಲಕಾವೇರಿ ಕ್ಷೇತ್ರದತ್ತ ದೌಡಾಯಿಸುತ್ತಿತ್ತು. ಕೊಡಗು ಸೇರಿದಂತೆ ಹೊರ ಜಿಲ್ಲೆ, ಹೊರರಾಜ್ಯಗಳಿಂದಲೂ ಭಕ್ತರು ಕಾವೇರಿ ಮಾತೆಯನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದರು. ಭಕ್ತರು ಜಯಘೋಷ, ಹರ್ಷೋದ್ಘಾರಗಳ ಸುರಿಮಳೆಗೈಯುತ್ತಿರುವಾಗಲೇ ನಿಗದಿತ ಸಮಯ ಮಧ್ಯಾಹ್ನ ೧.೪೪ರ ಮಕರ ಲಗ್ನದಲ್ಲಿ ಬ್ರಹ್ಮ ಕುಂಡಿಕೆಯಿAದ ಉಕ್ಕಿದ ಕಾವೇರಿಯನ್ನು ಭಕ್ತಗಣ ಭಾವಪರವಶವಾಗಿ ಸ್ವಾಗತಿಸಿಕೊಂಡಿತು.

ಧಾರ್ಮಿಕ ಕಾರ್ಯ

ಮಧ್ಯಾಹ್ನ ೧೨ ಗಂಟೆಯಿAದಲೇ ಪೌರೋಹಿತ್ಯ ತಂಡದಿAದ ಧಾರ್ಮಿಕ ಕಾರ್ಯಗಳು ಆರಂಭಗೊAಡವು. ಪ್ರಧಾನ ಅರ್ಚಕ ಪ್ರಶಾಂತ್ ಆಚಾರ್ ನೇತೃತ್ವದ ೧೧ ಮಂದಿಯ ತಂಡ ಕುಂಡಿಕೆ ಬಳಿ ಆಗಮಿಸಿ ಕೊಳಕ್ಕಿಳಿದು ಸ್ನಾನ ಮಾಡಿ ಕಾವೇರಿಗೆ ನಮಿಸಿ ಶುಭ್ರಗೊಂಡು ವಾಪಾಸ್ ಕುಂಡಿಕೆಯತ್ತ ಬಂದು ವೇದ ಮಂತ್ರ ಘೋಷಗಳ ಪಠಣದೊಂದಿಗೆ ಕಾವೇರಿಯ ಸ್ವಾಗತಕ್ಕೆ ಸಜ್ಜಾದರು.

ಕುಂಕುಮಾರ್ಚನೆ, ತೀರ್ಥ ಪೂಜೆಗಳ ಬಳಿಕ ಮಹಾಪೂಜೆ ಕೈಗೊಂಡರು. ಕುಂಡಿಕೆಯಿAದ ಕಾವೇರಿ ಉಕ್ಕಿ ಬರುತ್ತಿದಂತೆ ಮೊದಲು ಬ್ರಹ್ಮನಿಗೆ ತೀರ್ಥ ಅರ್ಪಣೆಗೈಯಲಾಯಿತು. ಬೆಳ್ಳಿ ಬಿಂದಿಗೆಯಲ್ಲಿ ಭಗಂಡೇಶ್ವರನಿಗಾಗಿ ತೀರ್ಥವನ್ನು ನೀಡಿ ಅಭಿಷೇಕಕ್ಕೆ ಕೊಂಡೊಯ್ದ ತಕ್ಷಣ ಭಕ್ತರತ್ತ ಅರ್ಚಕ ತಂಡದವರು ತೀರ್ಥವನ್ನು ಪ್ರೋಕ್ಷಿಸಿದರು.

ಭಕ್ತ ಸಮೂಹದ ಹರ್ಷೋದ್ಘಾರ

ಬ್ರಹ್ಮಗಿರಿ ಶಿಖರ ಸಾಲಿನ ನಡುವೆ ಇರುವ ಶ್ರೀ ಕ್ಷೇತ್ರ ತಲಕಾವೇರಿಯ ಸನ್ನಿಧಿಯಲ್ಲಿರುವ ಪವಿತ್ರ ಬ್ರಹ್ಮಕುಂಡಿಕೆಯಿAದ ಲೋಕಕಲ್ಯಾಣಿ ಕಾವೇರಿ ತೀರ್ಥ ಸ್ವರೂಪಿಣಿಯಾಗಿ ದರ್ಶನ ನೀಡುವ ಮೂಲಕ ಭಕ್ತ ಸಮೂಹವನ್ನು ಪುನೀತಗೊಳಿಸಿದಳು.

ವರ್ಷಂಪ್ರತಿಯAತೆ ಈ ಬಾರಿಯೂ ಶ್ರೀಮಾತೆಯನ್ನು ಭಕ್ತಿಭಾವದಿಂದಲೇ ಬರಮಾಡಿಕೊಳ್ಳಲಾಯಿತು.

ಜೈ ಜೈ ಮಾತಾ... ಕಾವೇರಿ ಮಾತಾ... ಕಾವೇರಮ್ಮನ ಪಾದಾರವಿಂದಕ್ಕೆ ಗೋವಿಂದಾ... ಕಾವೇರಿ ಬಾಳೊ, ಉಕ್ಕಿ ಬಾ, ಹರಿದು ಬಾ ಕಾವೇರಿ..ಎಂಬಿತ್ಯಾದಿ ಘೋಷಣೆಗಳು, ಮಾತೆಯನ್ನು ಆರಾಧಿಸುವ ಭಕ್ತಿ ಭಾವವನ್ನು ತೋರುವ ಹಾಡು... ಭಜನೆಗಳು, ಪುರೋಹಿತ ತಂಡದಿAದ ನಿರಂತರವಾಗಿ ಕೇಳಿ ಬರುತ್ತಿದ್ದ ಮಂತ್ರಘೋಷಗಳ ಪಠಣ ಕ್ಷೇತ್ರವನ್ನು, ಅಲ್ಲಿ ಜಮಾಯಿಸಿದ್ದ ಭಕ್ತವೃಂದವನ್ನು ಭಾವಪರವಶತೆಗೊಳಗಾಗುವಂತೆ ಮಾಡಿತು. ಕೆ.ನಿಡುಗಣೆಯ ಕರವಲೆ ಭಗವತಿ ತಂಡದಿAದ ಬಾಳೋ ಪಾಟ್, ದುಡಿಕೊಟ್ ಪಾಟ್ ಕ್ಷೇತ್ರದಲ್ಲಿ ಮೊಳಗಿತು.

ತೀರ್ಥೋದ್ಭವದ ನಿಗದಿತ ಸಮಯ ತನಕವೂ ಭಕ್ತಗಣ ಕಾವೇರಮ್ಮನ ಸ್ತುತಿಸುತ್ತ, ಜಯಘೋಷ ಕೂಗುತ್ತ ತಾಯಿಯ ಆಗಮನ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದರು. ಪವಿತ್ರ ಕುಂಡಿಕೆಯಲ್ಲಿ ಧಾರ್ಮಿಕ ಕಾರ್ಯ ನೆರವೇರುತ್ತಿದಂತೆ ಜಯಘೋಷ ದುಪ್ಪಟ್ಟಾಗಿ ಮೊಳಗಲಾರಂಭಿಸಿತು. ಅರ್ಚಕರ ತಂಡ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಕುಂಡಿಕೆಗೆ ಅರಿಶಿಣ, ಕುಂಕುಮ, ಹೂಗಳನ್ನು ಅರ್ಪಿಸಿ ಪೂಜಿಸಿತು. ಕೊಳದ ಮುಂಭಾಗದ ಮೆಟ್ಟಿಲಿನಲ್ಲಿ ಕುಳಿತಿದ್ದ ಭಕ್ತರ ನಡುವೆ ಶಾಸಕರಾದ ಮಂತರ್ ಗೌಡ, ಎ.ಎಸ್. ಪೊನ್ನಣ್ಣ ಹಾಗೂ ಪೊನ್ನಣ್ಣ ಪತ್ನಿ ಕಾಂಚನ್ ಕುಳಿತು ಜಯಘೋಷ ಮೊಳಗಿಸಿದರು. ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಕುಂಡಿಕೆಯಲ್ಲಿ ತೀರ್ಥೋದ್ಭವ ಆಗುತ್ತಿದಂತೆ ಭಕ್ತರಲ್ಲಿ ಮಿಂಚಿನ ಸಂಚಾರದ ಅನುಭವವಾಯಿತು. ಬಿಂದಿಗೆಗಳನ್ನು ಹೊತ್ತೊಯ್ದು ಕಲ್ಯಾಣಿಗಿಳಿದು ಪವಿತ್ರ ಕಾವೇರಿಯನ್ನು ತುಂಬಿಸಿಕೊAಡರು. ಅನಂತರ ಭಕ್ತಾದಿಗಳಿಗೆ ತೀರ್ಥ ವಿತರಿಸಲು ವ್ಯವಸ್ಥೆ ಮಾಡಲಾಗಿತ್ತು.

ತೀರ್ಥಕ್ಕಾಗಿ ತಳ್ಳಾಟ-ನೂಕಾಟ

ತೀರ್ಥೋದ್ಭವಗೊಂಡ ಮರುಕ್ಷಣ ಭಕ್ತರು ಕೊಳಕ್ಕಿಳಿದು ತೀರ್ಥಕ್ಕಾಗಿ ಲಗ್ಗೆಯಿಟ್ಟರು. ಬ್ರಹ್ಮಕುಂಡಿಕೆ ಸುತ್ತಲೂ ಪವಿತ್ರ ತೀರ್ಥವನ್ನು ಪಡೆಯಲು ಭಕ್ತರ ದಂಡು ಕಂಡುಬAತು.

ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಸರತಿಸಾಲಿನಲ್ಲಿ ಭಕ್ತರು ತೆರಳಲು ವ್ಯವಸ್ಥೆ ಕಲ್ಪಿಸಿದ್ದರು. ಆದರೆ ಕೆಲಕಾಲ ತಳ್ಳಾಟ-ನೂಕುನುಗ್ಗಲು ಪರಿಸ್ಥಿತಿ ಸೃಷ್ಟಿಯಾಯಿತು. ಗಂಟೆಗಟ್ಟಲೇ ಕಾದು ಭಕ್ತರು ಕಾವೇರಿ ತಾಯಿಯನ್ನು ತೀರ್ಥರೂಪವಾಗಿ ಕೊಂಡೊಯ್ದರು.

(ಮೊದಲ ಪುಟದಿಂದ) ಕುಂಡಿಕೆಯಲ್ಲಿ ತೀರ್ಥೋದ್ಭವ ಆಗುತ್ತಿದಂತೆ ಭಕ್ತರಲ್ಲಿ ಮಿಂಚಿನ ಸಂಚಾರದ ಅನುಭವವಾಯಿತು. ಬಿಂದಿಗೆಗಳನ್ನು ಹೊತ್ತೊಯ್ದು ಕಲ್ಯಾಣಿಗಿಳಿದು ಪವಿತ್ರ ಕಾವೇರಿಯನ್ನು ತುಂಬಿಸಿಕೊAಡರು. ಅನಂತರ ಭಕ್ತಾದಿಗಳಿಗೆ ತೀರ್ಥ ವಿತರಿಸಲು ವ್ಯವಸ್ಥೆ ಮಾಡಲಾಗಿತ್ತು.

ತೀರ್ಥಕ್ಕಾಗಿ ತಳ್ಳಾಟ-ನೂಕಾಟ

ತೀರ್ಥೋದ್ಭವಗೊಂಡ ಮರುಕ್ಷಣ ಭಕ್ತರು ಕೊಳಕ್ಕಿಳಿದು ತೀರ್ಥಕ್ಕಾಗಿ ಲಗ್ಗೆಯಿಟ್ಟರು. ಬ್ರಹ್ಮಕುಂಡಿಕೆ ಸುತ್ತಲೂ ಪವಿತ್ರ ತೀರ್ಥವನ್ನು ಪಡೆಯಲು ಭಕ್ತರ ದಂಡು ಕಂಡುಬAತು.

ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಸರತಿಸಾಲಿನಲ್ಲಿ ಭಕ್ತರು ತೆರಳಲು ವ್ಯವಸ್ಥೆ ಕಲ್ಪಿಸಿದ್ದರು. ಆದರೆ ಕೆಲಕಾಲ ತಳ್ಳಾಟ-ನೂಕುನುಗ್ಗಲು ಪರಿಸ್ಥಿತಿ ಸೃಷ್ಟಿಯಾಯಿತು. ಗಂಟೆಗಟ್ಟಲೇ ಕಾದು ಭಕ್ತರು ಕಾವೇರಿ ತಾಯಿಯನ್ನು ತೀರ್ಥರೂಪವಾಗಿ ಕೊಂಡೊಯ್ದರು.

ತಲಕಾವೇರಿ ಕ್ಷೇತ್ರದಲ್ಲಿ ಭಕ್ತಿ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದವು. ಕೊಡವ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ, ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಕಲಾತಂಡಗಳಿAದ ಕಾವೇರಿ ತಾಯಿಯನ್ನು ನೆನೆಯುವ, ನಮಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತ್ಯೇಕವಾಗಿ ತಲಕಾವೇರಿ ಕ್ಷೇತ್ರದ ಮೆಟ್ಟಿಲನ ಒಂದು ಬದಿಯಲ್ಲಿ ವೇದಿಕೆಯನ್ನು ನಿರ್ಮಿಸಲಾಗಿತ್ತು. ನೃತ್ಯ, ಹಾಡುಗಾರಿಕೆಯ ಮೂಲಕ ಕಲಾವಿದರು ಕಾವೇರಮ್ಮನನ್ನು ಸ್ತುತಿಸಿದರು. ಕಾವೇರಿ ತೀರ್ಥೋದ್ಭವ ಸಂದರ್ಭ ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್, ಸರಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್, ಅಪರ ಜಿಲ್ಲಾಧಿಕಾರಿ ಐಶ್ವರ್ಯ, ಉಪವಿಭಾಗಾಧಿಕಾರಿ ನಿತೀಶ್ ಚಕ್ಕಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಕ್ರೀಡಾ ಪ್ರಾಧಿಕಾರ ರಾಜ್ಯ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ತಲಕಾವೇರಿ ತಕ್ಕಮುಖ್ಯಸ್ಥ ಕೋಡಿ ಮೋಟಯ್ಯ, ಭಾಗಮಂಡಲ ತಕ್ಕಮುಖ್ಯಸ್ಥ ಬಳ್ಳಡ್ಕ ಅಪ್ಪಾಜಿ, ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ತಲಕಾವೇರಿ-ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಭಾಗಮಂಡಲ-ತಲಕಾವೇರಿ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಪಾರುಪತ್ತೆಗಾರ ಪೊನ್ನಣ್ಣ, ಮಡಿಕೇರಿ ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಸೇರಿದಂತೆ ಅನೇಕ ಗಣ್ಯರು ಈ ಶುಭ ಘಳಿಗೆಯಲ್ಲಿ ಭಾಗಿಯಾಗಿದ್ದರು.

ಇದೊಂದು ವಿಶೇಷ ಆಚರಣೆಯಾಗಿದೆ. ಕಾವೇರÀಮ್ಮೆ ಎಲ್ಲರಿಗೂ ಆನಂದ, ಆರೋಗ್ಯ ಕರುಣಿಸಲಿ. ಕಳೆದ ವರ್ಷ ತೀರ್ಥೋದ್ಭವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ಬಾರಿ ಪಾದಯಾತ್ರೆಯೊಂದಿಗೆ ಬಂದು ಈ ಕ್ಷಣ ಕಣ್ತುಂಬಿಕೊAಡು ತಾಯಿ ಆಶೀರ್ವಾದ ಪಡೆಯುವ ಸೌಭಾಗ್ಯ ದೊರೆತಿದೆ. ಭಾಗಮಂಡಲದಲ್ಲಿ ಭಗಂಡೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ಖುಷಿ ನೀಡಿದೆ.

-ಯದುವೀರ್ ಒಡೆಯರ್, ಸಂಸದ

ಕೊಡಗಿನಲ್ಲಿ ಹುಟ್ಟುವ ಕಾವೇರಿ ನದಿ ಜನ, ರೈತರ ಜೀವನಾಡಿ. ಕರ್ನಾಟಕ ಮಾತ್ರವಲ್ಲದೆ ಇತರೆ ಜಿಲ್ಲೆಗೂ ಇದು ಜೀವನದಿಯಾಗಿದೆ. ಸೂಕ್ತ ವ್ಯವಸ್ಥೆಯೊಂದಿಗೆ ಆಚರಣೆ ನಡೆದಿದೆ. ಪ್ರತಿವರ್ಷ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆಚರಣೆಯೊಂದಿಗೆ ಕಾವೇರಿ ನದಿ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜಲಮೂಲಗಳನ್ನು ಸಂರಕ್ಷಣೆ ಮಾಡುವ ಪಣ ಎಲ್ಲರೂ ತೊಡಬೇಕು. ತಾಯಿ ಆಶೀರ್ವಾದ ಸದಾ ಎಲ್ಲರ ಮೇಲಿರಲಿ.

-ಡಾ. ಮಂತರ್ ಗೌಡ, ಮಡಿಕೇರಿ ಶಾಸಕ ಕೊಡಗಿನಲ್ಲಿ ಹುಟ್ಟುವ ಕಾವೇರಿ ನದಿ ಜನ, ರೈತರ ಜೀವನಾಡಿ. ಕರ್ನಾಟಕ ಮಾತ್ರವಲ್ಲದೆ ಇತರೆ ಜಿಲ್ಲೆಗೂ ಇದು ಜೀವನದಿಯಾಗಿದೆ. ಸೂಕ್ತ ವ್ಯವಸ್ಥೆಯೊಂದಿಗೆ ಆಚರಣೆ ನಡೆದಿದೆ. ಪ್ರತಿವರ್ಷ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆಚರಣೆಯೊಂದಿಗೆ ಕಾವೇರಿ ನದಿ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜಲಮೂಲಗಳನ್ನು ಸಂರಕ್ಷಣೆ ಮಾಡುವ ಪಣ ಎಲ್ಲರೂ ತೊಡಬೇಕು. ತಾಯಿ ಆಶೀರ್ವಾದ ಸದಾ ಎಲ್ಲರ ಮೇಲಿರಲಿ.

-ಡಾ. ಮಂತರ್ ಗೌಡ, ಮಡಿಕೇರಿ ಶಾಸಕ ವಿಮಾನದಲ್ಲೂ ಕೇಳಿಬಂದ ಸ್ವಾಗತ

ಕಾವೇರಿ ತೀರ್ಥೋದ್ಭವ ಎಂಬ ಪಾವಿತ್ರö್ಯತೆಯ ವಿಚಾರ ಎಲ್ಲೆಲ್ಲೂ ಜನಜನಿತ. ಈ ಬಾರಿ ವಿಶೇಷವಾಗಿ ಬ್ರಿಟಿಷ್ ಏರ್‌ವೇಸ್‌ನ ವಿಮಾನವೊಂದರಲ್ಲಿ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕರಿಗೆ ವಿಮಾನದಲ್ಲಿಯೇ ತೀರ್ಥೋದ್ಭವದ ಸಂದೇಶದೊAದಿಗೆ ಸ್ವಾಗತ ದೊರೆತಿದ್ದು, ವಿಶೇಷವಾಗಿತ್ತು.

ಬೆಳಗ್ಗಿನ ಜಾವ ೫.೩೦ಕ್ಕೆ ಈ ವಿಮಾನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಈ ವೇಳೆ “ನಮಸ್ಕಾರ ಬೆಂಗಳೂರು ಕೆಂಪೇಗೌಡ ಅಂತರರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಎಲ್ಲರಿಗೂ ಸ್ವಾಗತ ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ಪ್ರಯಾಣಿಸಿದ್ದಕ್ಕೆ ತಮಗೆಲ್ಲರಿಗೂ ಧನ್ಯವಾದ ಮತ್ತು ತಮಗೆಲ್ಲರಿಗೂ ಕರ್ನಾಟಕದ ಜೀವನದಿ ಹಾಗೂ ಕೊಡವ ಜನಾಂಗದ ಕುಲದೇವಿ ಕಾವೇರಿ ತಾಯಿಯ ಸಂಕ್ರಮಣದ ಹಾರ್ದಿಕ ಶುಭಾಶಯಗಳು'' ಎಂಬ ಸಂದೇಶ ಕೇಳಿ ಬಂದಿತ್ತು.ಮಾತೆಯ ಆಶೀರ್ವಾದವಿರಲಿ - ಪೊನ್ನಣ್ಣ

ಕಾವೇರಿ ಮಾತೆಯ ಆಶೀರ್ವಾದ ದೇಶದ ಜನರ ಮೇಲಿರಲಿ. ಎಲ್ಲರಿಗೂ ಆರೋಗ್ಯ, ನೆಮ್ಮದಿ ನೀಡಲಿ.

ಮಧ್ಯಾಹ್ನ ೧.೪೪ ಗಂಟೆಗೆ ಕಾವೇರಿ ದರ್ಶನ ನೀಡಿದ್ದಾಳೆ. ಇದು ಸಾರ್ಥಕ ಘಳಿಗೆಯಾಗಿದೆ. ಸಹಸ್ರ ಭಕ್ತಾದಿಗಳು ಸುಂದರ ಕ್ಷಣ ಕಣ್ತುಂಬಿಕೊAಡಿದ್ದಾರೆ. ದೇಶವನ್ನು ತಾಯಿ ಸಮೃದ್ಧಿಸಲಿ, ಜನರಿಗೆ ನೆಮ್ಮದಿ, ಆರೋಗ್ಯ ನೀಡಲಿ. ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಲಕಾವೇರಿ ತನಕ ಪಾದಯಾತ್ರೆ ಮಾಡಿರುವುದು ಒಳ್ಳೆ ಅನುಭವ ನೀಡಿದೆ. ಪ್ರತಿಕೂಲ ಹವಾಮಾನದಿಂದ ಉಪಮುಖ್ಯಮಂತ್ರಿ, ಮುಜರಾಯಿ ಸಚಿವರು ಆಗಮಿಸಲು ಸಾಧ್ಯವಾಗಲಿಲ್ಲ.

-ಎ.ಎಸ್. ಪೊನ್ನಣ್ಣ, ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಕಂಗೊಳಿಸುತ್ತಿದ್ದ ಕ್ಷೇತ್ರ

ಜಿಲ್ಲಾಡಳಿತ, ಪೊಲೀಸ್ ಇಲಾಖೆ ವ್ಯವಸ್ಥಿತ ಕ್ರಮಗಳನ್ನು ಕೈಗೊಂಡಿದ್ದರೆ, ಅತ್ತ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಶ್ರೀ ಭಗಂಡೇಶ್ವರ - ತಲಕಾವೇರಿ ದೇವಾಲಯದ ಮೂಲಕ ಎಲ್ಲಾ ರೀತಿಯ ಧಾರ್ಮಿಕ ವಿಧಿ - ವಿಧಾನಗಳ ಪಾಲನೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು.

ಭಗಂಡೇಶ್ವರ ಕ್ಷೇತ್ರ ಹಾಗೂ ತಲಕಾವೇರಿ ಸನ್ನಿಧಿ ವಿದ್ಯುತ್ ಬೆಳಕು, ಹೂವಿನ ಅಲಂಕಾರದೊAದಿಗೆ ಕಂಗೊಳಿಸುತ್ತಿತ್ತು. ಭಾಗಮಂಡಲದಿAದ - ತಲಕಾವೇರಿ ಮಾರ್ಗದಲ್ಲಿಯೂ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ವರದಿ : ಹೆಚ್.ಜೆ. ರಾಕೇಶ್, ಚಿತ್ರಗಳು : ಲಕ್ಷಿö್ಮÃಶ್, ಸುನಿಲ್, ಕರುಣ್