ಮಡಿಕೇರಿ, ಅ. ೧೫: ಪ್ರಕೃತಿದತ್ತ ಸೌಂದರ್ಯ, ಅಹ್ಲಾದಕರ ವಾತಾರಣದಿಂದ ಕಣ್ಮನ ಸೆಳೆಯುವ ಕೊಡಗು ಜಿಲ್ಲೆಯಲ್ಲಿ ನಡೆದ ‘ಸ್ವಚ್ಛ ಕೊಡಗು-ಸುಂದರ ಕೊಡಗು’ ಅಭಿಯಾನಕ್ಕೆ ನಿರೀಕ್ಷೆಗೂ ಮೀರಿ ಬೆಂಬಲ ದೊರೆತು ಇತಿಹಾಸ ಪುಟದಲ್ಲಿ ದಾಖಲಾಗುವ ಮೂಲಕ ಸಂಚಲನವನ್ನು ಸೃಷ್ಟಿಸಿತು.
ಜಿಲ್ಲಾದ್ಯಂತ ಏಕಕಾಲದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಪಕ್ಷ, ಜಾತಿ, ಧರ್ಮ ಮರೆತು ಎಲ್ಲಾ ವರ್ಗದವರು ಜೊತೆಯಾಗಿ ಸ್ವಚ್ಛಂದ ಕೊಡಗು ನಿರ್ಮಾಣದ ಸಂಕಲ್ಪ ತೊಟ್ಟರು. ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರಮುಖರು, ಸಂಘ-ಸAಸ್ಥೆಯವರು, ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಕೈಜೋಡಿಸಿ ಮಹತ್ವದ ಕಾರ್ಯದ ಯಶಸ್ವಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಿಂದೆAದೂ ನಡೆಯದ ಈ ರೀತಿಯ ಸ್ವಚ್ಛತಾ ಅಭಿಯಾನಕ್ಕೆ ಜಿಲ್ಲೆಯ ಜನರಿಂದ ವ್ಯಾಪಕ ಬೆಂಬಲ ದೊರೆಯಿತು.
ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯಿತಿ, ಕೊಡಗು ಚೇಂಬರ್ ಆಫ್ ಕಾಮರ್ಸ್, ಕೊಡಗು ಹೋಂ ಸ್ಟೇ ಅಸೋಸಿಯೇಷನ್, ರೋಟರಿ, ಲಯನ್ಸ್ ಸಂಸ್ಥೆಗಳು, ಪ್ರವಾಸೋದ್ಯಮ ಇಲಾಖೆ, ರೆಡ್‌ಕ್ರಾಸ್, ಸ್ಥಳೀಯ ಸಂಘ ಸಂಸ್ಥೆಗಳು, ಹಲವಾರು ಶಿಕ್ಷಣ ಸಂಸ್ಥೆಗಳು, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ವಾಹನ ಚಾಲಕ ಹಾಗೂ ಮಾಲೀಕರ ಸಂಘಗಳು ಸೇರಿ ಜಿಲ್ಲೆಯ ೩೦೦ಕ್ಕೂ ಅಧಿಕ ಸಂಘಟನೆಗಳು ಕೈ ಜೋಡಿಸಿದವು.
ಬೆಳಗ್ಗಿನಿಂದಲೇ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಬಿರುಸಿನಿಂದ ನಡೆಯಿತು. ಸ್ವಯಂ ಸೇವಕರು ಬೀದಿಗಿಳಿದು ರಸ್ತೆ ಬದಿ, ಸಾರ್ವಜನಿಕ ಪ್ರದೇಶ, ಅರಣ್ಯದಂಚಿನ ಪ್ರದೇಶಗಳಲ್ಲಿ ಎಸೆಯಲ್ಪಟ್ಟಿದ್ದ ತ್ಯಾಜ್ಯ, ಮದ್ಯದ ಪೊಟ್ಟಣ, ಬಿಯರ್ ಬಾಟಲಿಗಳು, ಕಸ ಕಡ್ಡಿಗಳನ್ನು ತೆರವು ಮಾಡಿದರು. ೪ಐದÀನೇ ಪುಟಕ್ಕೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಭಿಯಾನಕ್ಕೆ ಶಾಸಕ ಡಾ. ಮಂತರ್ ಗೌಡ ಹಾಗೂ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರುಗಳು ಜ. ತಿಮ್ಮಯ್ಯ ವೃತ್ತದಲ್ಲಿ ಚಾಲನೆ ನೀಡಿದರು.
ಶಾಸಕರು, ಜಿಲ್ಲಾಧಿಕಾರಿ ಕೈಯಲ್ಲಿ ಪೊರಕೆ ಹಿಡಿದು ಮುಖ್ಯ ರಸ್ತೆಯಲ್ಲಿ ಕಸ ಗುಡಿಸುವುದರ ಜೊತೆಗೆ ಬಿದ್ದಿದ್ದ ಕಸಗಳನ್ನು ಹೆಕ್ಕಿ, ಚರಂಡಿಗಿಳಿದು ಅಲ್ಲಿಯೂ ಶುಚಿತ್ವ ಕಾರ್ಯ ನಡೆಸಿದರು.
ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಸೇರಿದಂತೆ ರೋಟರಿ ಮಿಸ್ಟಿ ಹಿಲ್ಸ್, ಲಯನ್ಸ್ ಕ್ಲಬ್, ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು, ಕೂರ್ಗ್ ವೈಲ್ಡರ್‌ನೆಸ್ ರೆಸಾರ್ಟ್, ಜ. ತಿಮ್ಮಯ್ಯ ಪಬ್ಲಿಕ್ ಸ್ಕೂಲ್, ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಮಡಿಕೇರಿ ಗೌಡ ಸಮಾಜ, ಜಿಲ್ಲಾ ಬಂಟರ ಸಂಘ, ಮಡಿಕೇರಿ ಮಾಜಿ ಸೈನಿಕರ ಸಂಘ, ಕೊಡಗು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ, ಕೂರ್ಗ್ ಟ್ರಾವೆಲ್ ಅಸೋಸಿಯೇಷನ್, ನಗರಸಭೆ ಸೇರಿದಂತೆ ವಿವಿಧ ಸಂಘಟನೆಯವರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ನಗರದ ವಿವಿಧ ಬಡಾವಣೆ, ರಸ್ತೆಗಳಲ್ಲಿ ಸ್ವಯಂ ಸೇವಕರಾಗಿ ಸ್ವಚ್ಛತಾ ಕಾರ್ಯದಲ್ಲಿ ನೂರಾರು ಮಂದಿ ಭಾಗವಹಿಸಿದರು. ಕುಶಾಲನಗರ ಹೆದ್ದಾರಿಯಲ್ಲಿಯೂ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.
ನಗರಸಭೆ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಪೌರಾಯುಕ್ತ ಹೆಚ್.ಆರ್.ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ನಾಸೀರ್ ಅಹಮ್ಮದ್, ಉಪಾಧ್ಯಕ್ಷ ಜಾಹೀರ್ ಅಹಮ್ಮದ್, ಗೌರವ ಸಲಹೆಗಾರ ಜಿ.ಚಿದ್ವಿಲಾಸ್, ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನದ ಸಾಮಾಜಿಕ ಜಾಲತಾಣ ಪ್ರಚಾರ ಸಮಿತಿ ಸಂಚಾಲಕ ಅನಿಲ್ ಹೆಚ್.ಟಿ. ಸಂಘಧ ನಿರ್ದೇಶಕ ಹರಿಕೃಷ್ಣ ಮದನ್, ಚೇಂಬರ್ ಆಫ್ ಕಾಮರ್ಸ್ ಮಡಿಕೇರಿ ಘಟಕದ ಅಧ್ಯಕ್ಷ ಸಂತೋಷ್ ಅಣ್ವೇಕರ್, ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್, ಕಾರ್ಯದರ್ಶಿ ನವೀನ್ ಎ.ಕೆ., ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್, ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ, ರೆಡ್ ಕ್ರಾಸ್ ಜಿಲ್ಲಾಧ್ಯಕ್ಷ ಬಿ.ಕೆ. ರವೀಂದ್ರ ರೈ, ಔಷಧಿ ವ್ಯಾಪಾರಸ್ಥರ ಸಂಘದ ಜಿಲ್ಲಾ ನಿರ್ದೇಶಕರಾದ ಪ್ರಸಾದ್ ಗೌಡ, ವಸಂತ್ ಕುಮಾರ್ ಅಂಬೆಕಲ್ ವಿನೋದ್, ಜನರಲ್ ತಿಮ್ಮಯ್ಯ ಶಾಲಾ ಪ್ರಾಂಶುಪಾಲೆ ಬಾಳೆಯಡ ಸವಿತಾ ಪೂವಯ್ಯ, ಇನ್ನರ್ ವೀಲ್ ಕಾರ್ಯದರ್ಶಿ ನಮಿತಾ ರೈ, ಕೊಡಗು ಅಭಿವೃದ್ಧಿ ಸಮಿತಿ ಸಂಚಾಲಕ ಪ್ರಸನ್ನ ಭಟ್, ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಪ್ರವಾಸೋದ್ಯಮ ಇಲಾಖೆಯ ಪ್ರಬಾರ ಉಪನಿರ್ದೇಶಕ ಬಸಪ್ಪ, ಅಧಿಕಾರಿ ಜತಿನ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕೂರ್ಗ್ ಟ್ರಾವೆಲ್ ಅಸೋಸಿಯೇಷನ್ ಅಧ್ಯಕ್ಷ ವಸಂತ್, ಲಯನ್ಸ್ ಅಧ್ಯಕ್ಷ ಮದನ್ ಸೇರಿದಂತೆ ಅನೇಕರು ಹಾಜರಿದ್ದರು.ಮಾಂದಲಪಟ್ಟಿ
ಮಡಿಕೇರಿ : ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಹಮ್ಮಿಕೊಂಡಿರುವ ಸ್ವಚ್ಛ ಕೊಡಗು- ಸುಂದರ ಕೊಡಗು ಅಭಿಯಾನಕ್ಕೆ ಮಾಂದಲಪಟ್ಟಿ ಜೀಪು ಚಾಲಕರ ಸಂಘವು ಕೈಜೋಡಿಸಿದೆ. ಸುಮಾರು ೨೫ ಮಂದಿ ನಾಲ್ಕೆöÊದು ತಂಡಗಳಾಗಿ ಶ್ರಮಾದಾನದಲ್ಲಿ ತೊಡಗಿಸಿಕೊಂಡಿತ್ತು. ನಂದಿಮೊಟ್ಟೆಯಿAದ ಮಾಂದಲಪಟ್ಟಿವರೆಗೆ ೧೮ ಕಿ.ಮೀ ರಸ್ತೆ ಬದಿಯಲ್ಲಿನ ಕಸವನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು.
ಪ್ರವಾಸಿಗರು ಹಾಗೂ ಸಾರ್ವಜನಿಕರು ರಸ್ತೆ ಬದಿ ಕಸ ಎಸೆಯದೆ ಸ್ವಚ್ಛತೆ ಕಾಪಾಡುವಂತೆ ಮಾಂದಲಪಟ್ಟಿ ಜೀಪು ಚಾಲಕರ ಸಂಘದ ಖಜಾಂಚಿ ಮೊಣ್ಣಯ್ಯ ಮನವಿ ಮಾಡಿದರು. ಮಾಂದಲಪಟ್ಟಿಗೆ ತೆರಳುವ ಪ್ರವಾಸಿಗರು ಅಲ್ಲಿ ಕಸ ಹಾಕದಂತೆ ಜೀಪು ಚಾಲಕರು ಎಚ್ಚರ ವಹಿಸಬೇಕೆಂದು ಅವರು ಹೇಳಿದರು.
ಈ ಸಂದರ್ಭ ಸಂಘದ ಪ್ರಮುಖರಾದ ಶರಣು, ಪುಷ್ಪರಾಜ್, ರವಿ, ಡೇವಿಡ್‌ರಾಜ್, ದರ್ಶನ್, ಪಾಂಡಿರ ರವಿ, ಪಾಂಡಿರ ಚೇತು, ಗಜೇಂದ್ರ, ನಾರಾಯಣ, ಮನು, ಗಣೇಶ್, ರಾಜೇಶ್, ಮುತ್ತಣ್ಣ ಸ್ವಚ್ಛ ಕೊಡಗು ಮತ್ತು ಸುಂದರ ಕೊಡಗು ಅಭಿಯಾನವನ್ನು ಪಾಲಿಬೆಟ್ಟದ ಗಣಪತಿ ಸೇವಾ ಮಿತ್ರ ಮಂಡಳಿ ಹಾಗೂ ಕೃಷಿ ಪತ್ತಿನ ಸಹಕಾರ ಸಂಘ ನೇತೃತ್ವದಲ್ಲಿ ಪಾಲಿಬೆಟ್ಟದ ಪಟ್ಟಣದಿಂದ ಸುತ್ತಮುತ್ತಲು ನಡೆಯಿತು. ಸುಮಾರು ೭ ಕಿ.ಮೀ. ಕಸ ಹೆಕ್ಕುವುದರ ಮೂಲಕ ಸ್ವಚ್ಛತೆಯನ್ನು ಸ್ವಯಂ ಸೇವಕರು ಮಾಡಿದರು.
ಪಾಲಿಬೆಟ್ಟ ಗ್ರಾಮ ಪಂಚಾಯಿತಿ, ಸಂಜೀವಿನಿ ಒಕ್ಕೂಟ, ಟಾಟಾ ಕಾಫಿ ಸಂಸ್ಥೆ, ಕಲ್ಚರಲ್ ಅಸೋಸಿಯೇಷನ್, ಕ್ಯಾಪ್ಟನ್ಸ್ ಇಲೆವೆನ್, ಬ್ಯಾಂಬೂ ಕ್ಲಬ್, ಕೊಡಗು ಜಿಲ್ಲಾ ಸಹಕಾರ ಸಂಘ ನಿ., ವರ್ತಕರ ಸಂಘ, ಬಸವೇಶ್ವರ ಸ್ವ-ಸಹಾಯ ಸಂಘ, ಮೇಕೂರು ಹಾಗೂ ಕಾಫಿ ಬೆಳೆಗಾರÀgÄ, ಕಾರ್ಮಿಕರುಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ, ಸಮಾಜ ಸೇವಕ ಮೂಕೋಂಡ ವಿಜು ಸುಬ್ರಮಣಿ, ಗ್ರಾಮ ಪಂಚಾಯಿತಿ ಸದಸ್ಯ ಎಂ.ಬಿ. ಪವಿತ್ರ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಸತೀಶ್, ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮಿತ ಸಂಜೀವಿನಿ ಒಕ್ಕೂಟದ ಮೇಲ್ವಿಚಾರಕಿ ರಾಜೇಶ್ವರಿ, ವರ್ತಕರ ಸಂಘದ ಅಧ್ಯಕ್ಷ ಮುನೀರ್, ಕ್ಯಾಪ್ಟನ್ಸ್ ಇಲೆವೆನ್ ಅಧ್ಯಕ್ಷ ಎ.ಎಲ್. ರವಿಕುಮಾರ್, ಬಸವೇಶ್ವರ, ಸ್ವ ಸಹಾಯ ಸಂಘದ ವಿಮಲಾ ರಾಮದಾಸ್, ಬ್ಯಾಂಬೂ ಕ್ಲಬ್ ವ್ಯವಸ್ಥಾಪಕÀ ಲಕ್ಷö್ಮ್ಮಣ್ ಹಾಗೂ ಇನ್ನಿತರ ಸಂಘ ಸಂಸ್ಥೆಯವರು ಹಾಜರಿದ್ದರು.ಮಕ್ಕಂದೂರು ಗ್ರಾಮದಲ್ಲಿ ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನÀದಲ್ಲಿ ಮಕ್ಕಂದೂರು ಗ್ರಾಮ ಪಂಚಾಯಿತಿ, ಕೂರ್ಗ್ ಮೆರಿಯಟ್, ಸುವರ್ಣ ಇಕೋ ವಿಲೇಜ್, ಹೋಂಸ್ಟೇ ಅಸೋಸಿಯೇಷನ್ ಮಕ್ಕಂದೂರು, ಸಂಜೀವಿನಿ ಒಕ್ಕೂಟ ಮಕ್ಕಂದೂರು, ಏಕದಂತ ಯುವಕ ಸಂಘ, ಗಜಾನನ ಯುವಕ ಸಂಘ, ಆಶಾಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.ಕೂಡಿಗೆ : ಸುಂದರ ಕೊಡಗು-ಸ್ವಚ್ಛ ಕೊಡಗು ಅಭಿಯಾನದ ಅಂಗವಾಗಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಚತಾ ಅಭಿಯಾನ ನಡೆಯಿತು. ಗ್ರಾಮದ ಗಡಿ ಕಬ್ಬಿನ ಗದ್ದೆ ಬಳಿಯಿಂದ ದುಬಾರೆ ಪ್ರವಾಸಿ ತಾಣದ ತನಕ ೫ ಕಿಮೀ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ರಿವರ್ ರ‍್ಯಾಫ್ಟಿಂಗ್ ಮಾಲೀಕರು, ಕಾರ್ಮಿಕರ ಸಂಘಟನೆ, ಹೊಟೇಲ್ ಅಸೋಸಿಯೇಷನ್ ಸೇರಿದಂತೆ ಗ್ರಾಮದ ವಿವಿಧ ಸಂಘಟನೆ, ಸಂಘ ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಹೆದ್ದಾರಿ ಇಕ್ಕೆಲಗಳಲ್ಲಿ ಶ್ರಮ ದಾನ ಮೂಲಕÀ ಸ್ವಚ್ಛತೆ ನಡೆಸಿದರು.
ಪ್ಲಾಸ್ಟಿಕ್ ಬಾಟಲಿ, ಕಸ ತ್ಯಾಜ್ಯಗಳನ್ನು ಹೆಕ್ಕಿ ಸಂಗ್ರಹಿಸಿ ಟ್ರಾö್ಯಕ್ಟರ್ ಮೂಲಕ ಸಾಗಿಸಿ ವಿಲೇವಾರಿಗೊಳಿಸಲಾಯಿತು. ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ, ಸ್ವಚ್ಛತೆ ನಮ್ಮೆಲ್ಲರ ಪ್ರಮುಖ ಆದ್ಯತೆಯಾಗಬೇಕಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲ ಪರಿಸರವನ್ನು ಮಾಲಿನ್ಯ ಮಾಡದೆ ಪರಿಸರ ಸಂರಕ್ಷಣೆ, ಮಾಲಿನ್ಯ ತಡೆಗಟ್ಟಲು ಮುಂದಾದಾಗ ಮಾತ್ರ ಸುಂದರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಆರ್.ಕೆ.ಚಂದ್ರ, ಮಾವಜಿ ರಕ್ಷಿತ್, ಮಾಜಿ ಸದಸ್ಯ ಸುಮೇಶ್, ರಿವರ್ ರ‍್ಯಾಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ವಿಜು ಚಂಗಪ್ಪ, ನೌಕರರ ಸಂಘದ ಅಧ್ಯಕ್ಷ ನಿತನ್, ಹೊಟೇಲ್ ಉದ್ಯಮಿ ರತೀಶ್ ಸೇರಿದಂತೆ ಪೌರಕಾರ್ಮಿಕರು, ಸಿಬ್ಬಂದಿಗಳು ಇದ್ದರು. ಚೆಯ್ಯಂಡಾಣೆ: ನರಿಯಂದಡ ಗ್ರಾಮ ಪಂಚಾಯಿತಿ,ಸAಜೀವಿನಿ ಒಕ್ಕೂಟ,ಸ್ಥಳೀಯ ಹೋಂ ಸ್ಟೇ,ರೆಸಾರ್ಟ್ ಹಾಗೂ ಸ್ಥಳೀಯ ವರ್ತಕರು ವತಿಯಿಂದ "ಸ್ವಚ್ಛ ಕೊಡಗು ಸುಂದರ ಕೊಡಗು" ಕಾರ್ಯಕ್ರಮದ ಭಾಗವಾಗಿ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಚೆಯ್ಯಂಡಾಣೆ ಪಟ್ಟಣದಿಂದ ಆರಂಭಗೊAಡ ಸ್ವಚ್ಛತೆ ಪಟ್ಟಣದ ಪ್ರಮುಖ ಬೀದಿ,ಆಸ್ಪತ್ರೆ ಸಮೀಪ, ಬ್ಯಾಂಕ್ ಸಮೀಪ, ನಾಪೋಕ್ಲು, ವೀರಾಜಪೇಟೆ ಮುಖ್ಯ ರಸ್ತೆಯ ಎರಡು ಬದಿಗಳನ್ನು ಸ್ವಚ್ಛಗೊಳಿಸಿ ನಂತರ ಕರಡದ ವರೆಗೆ ರಸ್ತೆಯ ಬದಿಯಲ್ಲಿರುವ ಕಸ, ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ನಡಿಕೇರಿಯಂಡ ದಿಲೀಪ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ್ ಈರಪ್ಪ, ಸದಸ್ಯೆ ಪುಷ್ಪ, ಮನೆಯಪಂಡ ಧೀರಜ್ ತಿಮ್ಮಯ್ಯ, ನವೀನ್ ನಂಜುAಡ, ಸುನಿಲ್, ರಾಧಾಕೃಷ್ಣ, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಗ್ರಾಮಸ್ಥರು, ಮತ್ತಿತರರು ಇದ್ದರು. ಇಲ್ಲಿಗೆ ಸಮೀಪದ ಕಿಗ್ಗಾಲು ಗ್ರಾಮದಲ್ಲಿ ಸ್ವಚ್ಛ ಕೊಡಗು- ಸುಂದರ ಕೊಡಗು ಅಭಿಯಾನದಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸ್ಥಳೀಯ ಗ್ರಾ.ಪಂ. ಸದಸ್ಯೆ ಬಿ.ಎಸ್. ರೇಖಾ ನೇತೃತ್ವದಡಿಯಲ್ಲಿ ಕಿಗ್ಗಾಲು ಬೇತ್ರಿ ಗ್ರಾಮಾಂತರ ರಸ್ತೆಯನ್ನು ಕಿಗ್ಗಾಲು ಗ್ರಾಮಸ್ಥರ ಸಹಕಾರದೊಂದಿಗೆ ಸ್ವಚ್ಛಗೊಳಿಸಲಾಯಿತು. ಸುಮಾರು ಒಂದು ಜೀಪ್ ಲೋಡಿನಷ್ಟು ತ್ಯಾಜ್ಯವನ್ನು ಸಂಗ್ರಹಿಸಲಾಯಿತು.