ಸೋಮವಾರಪೇಟೆ, ಅ. ೧೫: ಸ್ವಚ್ಚ ಕೊಡಗು-ಸುಂದರ ಕೊಡಗು ಅಭಿಯಾನಕ್ಕೆ ಸೋಮವಾರಪೇಟೆ ಭಾಗದಲ್ಲಿ ಪ್ರಜ್ಞಾವಂತರು ಸ್ವಯಂ ಪ್ರೇರಿತರಾಗಿ ಕೈಜೋಡಿಸಿದರು. ಕೂರ್ಗ್ ಹೊಟೇಲ್-ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಕರೆ ನೀಡಿದ್ದ ಅಭಿಯಾನದಲ್ಲಿ ಭಾಗಿಯಾಗಿದ್ದ ವಿವಿಧ ಸಂಘ ಸಂಸ್ಥೆಗಳ ನೂರಾರು ಮಂದಿ ಸದಸ್ಯರು, ೮ ಕಿ.ಮೀ.ವರೆಗೆ ರಸ್ತೆಯ ಬದಿಯಲ್ಲಿ ಸ್ವಚ್ಚತೆ ನಡೆಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ವಿವೇಕಾನಂದ ವೃತ್ತದಲ್ಲಿ ಅಸೋಸಿಯೇಷನ್‌ನ ಪ್ರಮುಖ ಬಿ.ಎಸ್. ಸುಂದರ್ ಅವರು ಸ್ವಾಮಿ ವಿವೇಕಾನಂದ ಪ್ರತಿಮೆಗೆ ೪ಮೂರನೇ ಪುಟಕ್ಕೆ ಸೋಮವಾರಪೇಟೆ, ಅ. ೧೫: ಸ್ವಚ್ಚ ಕೊಡಗು-ಸುಂದರ ಕೊಡಗು ಅಭಿಯಾನಕ್ಕೆ ಸೋಮವಾರಪೇಟೆ ಭಾಗದಲ್ಲಿ ಪ್ರಜ್ಞಾವಂತರು ಸ್ವಯಂ ಪ್ರೇರಿತರಾಗಿ ಕೈಜೋಡಿಸಿದರು. ಕೂರ್ಗ್ ಹೊಟೇಲ್-ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಕರೆ ನೀಡಿದ್ದ ಅಭಿಯಾನದಲ್ಲಿ ಭಾಗಿಯಾಗಿದ್ದ ವಿವಿಧ ಸಂಘ ಸಂಸ್ಥೆಗಳ ನೂರಾರು ಮಂದಿ ಸದಸ್ಯರು, ೮ ಕಿ.ಮೀ.ವರೆಗೆ ರಸ್ತೆಯ ಬದಿಯಲ್ಲಿ ಸ್ವಚ್ಚತೆ ನಡೆಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ವಿವೇಕಾನಂದ ವೃತ್ತದಲ್ಲಿ ಅಸೋಸಿಯೇಷನ್‌ನ ಪ್ರಮುಖ ಬಿ.ಎಸ್. ಸುಂದರ್ ಅವರು ಸ್ವಾಮಿ ವಿವೇಕಾನಂದ ಪ್ರತಿಮೆಗೆ ೪ಮೂರನೇ ಪುಟಕ್ಕೆ (ಮೊದಲ ಪುಟದಿಂದ)
ಮಾಲಾರ್ಪಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಹೊಟೇಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಜಿಲ್ಲಾದ್ಯಂತ ಏಕಕಾಲದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ನಮ್ಮ ಕರೆಗೆ ಹತ್ತಾರು ಸಂಘ ಸಂಸ್ಥೆಗಳು ಕೈಜೋಡಿಸಿವೆ. ಕೊಡಗು ಕರ್ನಾಟಕ ಕಾಶ್ಮೀರ ಎಂದು ಹೆಸರು ಪಡೆದಿದೆ. ಇದನ್ನು ಇನ್ನಷ್ಟು ಸುಂದರ ಹಾಗೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.
ನಮ್ಮ ಮನೆಯಂತೆಯೇ ನಮ್ಮ ಊರನ್ನೂ ಸುಂದರವಾಗಿಟ್ಟುಕೊಳ್ಳಬೇಕು. ಪರಿಸರವನ್ನು ಹಾಳು ಮಾಡಬಾರದು. ಈ ಬಗ್ಗೆ ಮಕ್ಕಳಿಗೂ ತಿಳುವಳಿಕೆ ನೀಡಬೇಕು ಎಂದರು.
ಬಸ್‌ನಲ್ಲಿ ಹೋಗುವಾಗ ನೀರಿನ ಬಾಟಲ್, ಪ್ಲಾಸ್ಟಿಕ್ ಕವರ್ ಎಸೆಯಬಾರದು. ಬಸ್‌ಗಳಲ್ಲಿ ಟಿಕೇಟ್ ಕೇಳಿ ಪಡೆಯಿರಿ ಎಂಬ ಫಲಕ ಇರುವಂತೆ ಕಸವನ್ನು ಹೊರಗೆ ಎಸೆಯಬೇಡಿ ಎಂಬ ಸೂಚನಾ ಫಲಕವನ್ನೂ ಅಳವಡಿಸಬೇಕು. ಸಾರ್ವಜನಿಕ ಪ್ರದೇಶದಲ್ಲಿ ತ್ಯಾಜ್ಯ ಎಸೆಯುವುದನ್ನು ಸ್ವಯಂಪ್ರೇರಿತವಾಗಿ ನಿಲ್ಲಿಸಬೇಕು ಎಂದು ಅಭಿಪ್ರಾಯಿಸಿದರು.
ಸರ್ಕಾರದ್ದು ಮಾತ್ರವಲ್ಲ-ಜನತೆಯ ಜವಾಬ್ದಾರಿ: ಅಭಿಯಾನದಲ್ಲಿ ಭಾಗಿಯಾಗಿದ್ದ ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ಕುಮಾರ್ ಮಾತನಾಡಿ, ಪರಿಸರ ಸ್ವಚ್ಛತೆ ಕಾಪಾಡಲು ಎಲ್ಲರೂ ವೈಯಕ್ತಿಕ ಆಸಕ್ತಿ ವಹಿಸಬೇಕು. ಸ್ಕಾಟ್‌ಲ್ಯಾಂಡ್ ಆಫ್ ಇಂಡಿಯಾ ಎಂದು ಕೊಡಗನ್ನು ಎಲ್ಲರೂ ಹೊಗಳುತ್ತೇವೆ. ಇದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪರಿಸರದ ಸ್ವಚ್ಛತೆ ಎಂಬುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಇದು ನಮ್ಮದೇ ಕೆಲಸ ಎಂಬುದನ್ನು ಎಲ್ಲರೂ ಅರಿಯಬೇಕೆಂದು ಕರೆ ನೀಡಿದರು.
ಭಾರತೀಯರು ಬೇರೆ ದೇಶಗಳಿಗೆ ಹೋದಾಗ ಅಲ್ಲಿನ ಶಿಸ್ತು, ಸ್ವಚ್ಛತೆಗೆ ಒಗ್ಗಿಕೊಳ್ಳುತ್ತೇವೆ. ಆದರೆ ಇಲ್ಲಿಗೆ ಬಂದಾಗ ನಮ್ಮ ಪರಿಸರ ಸ್ವಚ್ಛತೆಯ ಬಗ್ಗೆ ಅಷ್ಟಾಗಿ ತೊಡಗಿಸಿಕೊಳ್ಳುವುದಿಲ್ಲ. ಇಂತಹ ಮನೋಭಾವನೆ ಬದಲಾಗಬೇಕು. ಪರಿಸರ ಸ್ವಚ್ಛತೆಯ ನಿಟ್ಟಿನಲ್ಲಿ ಅಸೋಸಿಯೇಷನ್‌ನಿಂದ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕು ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ರೋಹಿತ್ ಮಾತನಾಡಿ, ಸ್ವಚ್ಛತಾ ಆಂದೋಲನ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು.
ನಮ್ಮ ಮನೆ, ರಸ್ತೆ, ತೋಟ, ಊರನ್ನು ಪ್ರತಿದಿನ ಸ್ವಚ್ಛವಾಗಿಟ್ಟುಕೊಳ್ಳಬೇಕು. ನಮ್ಮ ಅಕ್ಕಪಕ್ಕದವರಿಗೂ ಈ ಬಗ್ಗೆ ಅರಿವು ಮೂಡಿಸಬೇಕು. ತಾಲೂಕು ಪಂಚಾಯಿತಿಯಿAದ ಆಯ್ದ ಕಡೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಮಾತನಾಡಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ. ಪ್ರತಿದಿನ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದೆ. ಈಗಾಗಲೇ ತ್ಯಾಜ್ಯ ವಿಲೇವಾರಿ ಘಟಕದ ಅಂತಿಮ ಹಂತದ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು, ಘಟಕ ಪೂರ್ಣಗೊಂಡ ನಂತರ ಪಟ್ಟಣದ ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸಲಿದೆ ಎಂದರು.
ಈ ಸಂದರ್ಭ ಪ.ಪಂ. ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯರಾದ ಶೀಲಾ ಡಿಸೋಜ, ಬಿ.ಸಿ. ವೆಂಕಟೇಶ್, ಲಯನ್ಸ್ ಅಧ್ಯಕ್ಷ ಬಿ.ಎಂ. ರಾಮ್‌ಶೆಟ್ಟಿ, ರೋಟರಿ ಪ್ರಮುಖರಾದ ಪಿ.ಕೆ. ರವಿ, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ, ವರ್ತಕರ ಸಂಘದ ಅಧ್ಯಕ್ಷ ಧನುರಾಜ್, ಮೋಟಾರ್ ಯೂನಿಯನ್ ಅಧ್ಯಕ್ಷ ಬಾಲಕೃಷ್ಣ, ಜಾನಪದ ಪರಿಷತ್ ಅಧ್ಯಕ್ಷ ಕೆ.ಎ. ಪ್ರಕಾಶ್, ಎಸಿಎಫ್ ಗೋಪಾಲ್, ಆರ್‌ಎಫ್‌ಓ ಶೈಲೇಂದ್ರ, ಯಿಫಾ ಸಂಘಟನೆಯ ಶ್ರೀನಿಧಿ, ಆದರ್ಶ್ ತಮ್ಮಯ್ಯ, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ. ಲವ, ದಸಂಸ ಮುಖಂಡ ಎಂ.ಪಿ. ಹೊನ್ನಪ್ಪ, ಬಿಜೆಪಿ ಮುಖಂಡ ಮನುಕುಮಾರ್ ರೈ, ಮಹೇಶ್ ತಿಮ್ಮಯ್ಯ, ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಕರವೇ ಅಧ್ಯಕ್ಷ ಕೆ.ಎನ್. ದೀಪಕ್, ಜನಧ್ವನಿ ವೇದಿಕೆಯ ಪ್ರಸನ್ನ, ಪ್ರಮುಖರಾದ ತಿಮ್ಮಶೆಟ್ಟಿ, ಬಿ.ಆರ್. ಪ್ರಮೋದ್, ಸಿ.ಕೆ. ಮಲ್ಲಪ್ಪ, ಎ.ಪಿ. ವೀರರಾಜು, ಹೆಚ್.ಸಿ. ನಾಗೇಶ್, ರಾಜ್‌ಶ್ರೀ ಸದಾನಂದ್, ಬಿ.ಎಸ್. ಶ್ರೀಧರ್, ಜೇಸೀ ಅಧ್ಯಕ್ಷೆ ಜಗದಾಂಭ, ಇಂದಿರಾ ಮೋಣಪ್ಪ, ಆಶಾ ಯೋಗೇಂದ್ರ ಸೇರಿದಂತೆ ಇತರರು ಇದ್ದರು.
ಪ್ರಮುಖರ ಅನಿಸಿಕೆಯ ನಂತರ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿವೇಕಾನಂದ ವೃತ್ತದಿಂದ ಕೋವರ್‌ಕೊಲ್ಲಿವರೆಗೆ ರಸ್ತೆಯ ಇಕ್ಕೆಲಗಳಲ್ಲಿದ್ದ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು. ಅರಣ್ಯ ಇಲಾಖೆಯವರು ಕಾರೇಕೊಪ್ಪ, ಯಡವನಾಡು ಭಾಗದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಟಾಟಾ ಕಾಫಿ ಸಂಸ್ಥೆಯ ಕಾರ್ಮಿಕರು ಕೋವರ್‌ಕೊಲ್ಲಿಯಿಂದ ಐಗೂರು ಮಾರ್ಗದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ಬೇಳೂರು ಗ್ರಾಮ ಪಂಚಾಯಿತಿ ವತಿಯಿಂದ ತ್ಯಾಜ್ಯ ಸಂಗ್ರಹ-ಸಾಗಾಟಕ್ಕೆ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೊಟೇಲ್-ರೆಸಾರ್ಟ್ ಅಸೋಸಿಯೇಷನ್‌ನಿಂದ ಸ್ವಯಂಸೇವಕರಿಗೆ ಕೈ ಗ್ಲೌಸ್, ತ್ಯಾಜ್ಯ ಸಂಗ್ರಹಕ್ಕೆ ಬ್ಯಾಗ್‌ಗಳು, ಕುಡಿಯಲು ಪಾನೀಯ, ಬಿಸ್ಕೆಟ್‌ಗಳ ವ್ಯವಸ್ಥೆ ಮಾಡಲಾಗಿತ್ತು.
ಕೈಜೋಡಿಸಿದ ಟಾಟಾ ಕಾಫಿ ಸಂಸ್ಥೆ
ಸ್ವಚ್ಚತಾ ಅಭಿಯಾನಕ್ಕೆ ಕೋವರ್‌ಕೊಲ್ಲಿ ಟಾಟಾ ಕಾಫಿ ಎಸ್ಟೇಟ್ ಸಂಸ್ಥೆಯಿAದ ೫೦ಕ್ಕೂ ಅಧಿಕ ಮಂದಿ ಕಾರ್ಮಿಕರು ಭಾಗಿಯಾಗಿದ್ದರು. ಸಂಸ್ಥೆಯಿAದ ಒಂದು ಟ್ರಾö್ಯಕ್ಟರ್‌ಅನ್ನು ಅಭಿಯಾನಕ್ಕೆ ನೀಡಲಾಗಿತ್ತು. ಸಂಬಳ ಸಹಿತ ಸ್ಚಚ್ಚತಾ ಕಾರ್ಯದಲ್ಲಿ ಕಾರ್ಮಿಕರು ತೊಡಗಿದ್ದರು. ಘಟಕದ ವ್ಯವಸ್ಥಾಪಕ ಅಪ್ಪಯ್ಯ ಅವರು ಅಭಿಯಾನದಲ್ಲಿ ಭಾಗಿಯಾಗಿದ್ದರು.