ಚೆಯ್ಯಂಡಾಣೆ, ಅ. ೧೪: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ವೀರಾಜಪೇಟೆ ತಾಲೂಕು, ಮೂರ್ನಾಡು ವಲಯ ಹಾಗೂ ಪ್ರಗತಿ ಸ್ವಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಪಾರಾಣೆಯಲ್ಲಿ ಜರುಗಿತು.
ಪಾರಾಣೆ ಸರಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಬಿ.ಎಸ್. ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ನಿವೃತ್ತ ಸೈನಿಕ ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯರಾದ ವಿ.ಎಂ. ಸುಬ್ರಮಣಿ ಉದ್ಘಾಟಿಸಿ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಜನರ ಬೆಳವಣಿಗೆ ಹಾಗೂ ಸಮಾಜಮುಖಿ ಚಿಂತನೆಯಿAದ ಕೂಡಿರುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ತಾಲೂಕಿನ ಯೋಜನಾಧಿಕಾರಿ ಹರೀಶ್.ಪಿ. ಮಾತನಾಡಿ, ಜ್ಞಾನದೀಪ ಶಿಕ್ಷಕರ ಆಯ್ಕೆ, ಮಾಸಾಶÀÀÀನ, ಸುಜ್ಞಾನಿಧಿ, ಶಿಷ್ಯ ವೇತನ, ದೇವಸ್ಥಾನ, ಹಿಂದು ರುದ್ರ ಭೂಮಿ ಜೀರ್ಣೋದ್ದಾರ, ಊರಿನ ಕೆರೆಗಳ ಪುನರ್ ಚೇತನಕ್ಕೆ ಬೇಕಾಗುವ ಅನುದಾನವನ್ನು ಕ್ಷೇತ್ರದ ವತಿಯಿಂದ ನೀಡಲಾಗಿದೆ ಎಂದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಉಮಾ ಪ್ರಭು ಮಾತನಾಡಿ, ಸತ್ಯನಾರಾಯಣ ಪೂಜೆಯು ನಮ್ಮ ಸನಾತನ ಸಂಸ್ಕೃತಿಯಾಗಿದೆ ಎಂದರು, ಪಾರಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಟ್ಟಿ ಕುಶಾಲಪ್ಪ ಮಾತನಾಡಿದರು.
ಈ ಸಂದರ್ಭ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ವೇದಪ್ರಸಾದ್, ಕಾದೀರ ಉಮೇಶ್ ಪಳಂಗಪ್ಪ, ಕೃಷಿ ಪತ್ತಿನ ವ್ಯವಸ್ಥಾಪಕರಾದ ಮಂಜು ಮಾಚಯ್ಯ, ಬೆಳ್ಳಿಮಯ್ಯ, ಕಾದೀರ ನಿಶಾ ಪಳಂಗಪ್ಪ, ಬೊಳ್ಳಚೆಟ್ಟೀರ ಪ್ರಕಾಶ್ ಕಾಳಪ್ಪ, ಬಲ್ಯಾಟಂಡ ಕೌಶಿ ಕುಟ್ಟಯ್ಯ, ವಲಯದ ಮೇಲ್ವಿಚಾರಕ ಪ್ರತಾಪ್ ದೇವಾಡಿಗ, ಕೃಷಿ ಮೇಲ್ವಿಚಾರಕ ವಸಂತ, ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು, ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸಾವಿತ್ರಿ ಸ್ವಾಗತಿಸಿ, ಮಂಜುಳಾ ವಂದಿಸಿದರು.