ವೀರಾಜಪೇಟೆ, ಅ. ೧೨: ವೀರಾಜಪೇಟೆಯ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಪದಾಧಿಕಾರಿಗಳು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಗೃಹ ಕಚೇರಿಯಲ್ಲಿ ಶಾಸಕರನ್ನು ಭೇಟಿ ಮಾಡಿ ವಿವಿಧ ಅಗತ್ಯ ವಿಚಾರಗಳ ಬಗ್ಗೆ ಸಭೆ ನಡೆಸಿದರು.

ಪೊನ್ನಣ್ಣ ಅವರಿಗೆ ನಗರದ ಕೆಲವು ಸಾರ್ವಜನಿಕರು ಗಂಭೀರ ಸಮಸ್ಯೆಯ ಬಗ್ಗೆ ಮನವಿ ಸಲ್ಲಿಸಿದರು. ಇತ್ತೀಚಿನ ವರ್ಷಗಳಲ್ಲಿ ನಗರದಲ್ಲಿ ವಾಹನಗಳ ದಟ್ಟಣೆ ಜಾಸ್ತಿಯಾಗಿದ್ದು, ಬದಲಿ ರಸ್ತೆಗೆ ಶಾಸಕರಿಗೆ ಸದಸ್ಯರು ಕೆಲವು ಸಲಹೆಗಳನ್ನು ನೀಡಿದರು. ಮನವಿಯನ್ನು ಆಲಿಸಿದ ಬಳಿಕ ಮಾತನಾಡಿದ ಶಾಸಕರು ವೀರಾಜಪೇಟೆ ನಗರದ ರಸ್ತೆ ಅಗಲಿಕರಣ ಮಾಡದೇ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಸರಕಾರದ ವತಿಯಿಂದ ಕೋಟಿಗಟ್ಟಲೆ ಹಣವನ್ನು ಬಿಡುಗಡೆ ಮಾಡಿಸಿ ತಂದಿರುವೆ, ಈಗಾಗಲೇ ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಆದರೆ ಕಾಮಗಾರಿ ಮಾಡಲು ಅಲ್ಲಿನ ನಿವಾಸಿಗಳು ಸಹಕಾರ ನೀಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ರಸ್ತೆ ಅಗಲೀಕರಣವಾದರೆ ವ್ಯಾಪಾರ ವಹಿವಾಟು ಹೆಚ್ಚಾಗಿ ನಡೆಯುತ್ತದೆ. ರಸ್ತೆ ಅಗಲೀಕರಣದ ವೇಳೆ ಮುಖ್ಯ ರಸ್ತೆಯ ಹಿಂಬದಿಯಲ್ಲಿ ಜಾಗ ಇದ್ದರೆ ಅಲ್ಲಿ ಮಾಲೀಕರು ಉತ್ತಮ ರೀತಿಯಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಳ್ಳಬಹುದು. ಸಂಪೂರ್ಣ ಮನೆಯನ್ನು ಕಳೆದು

ಕೊಳ್ಳುವವರಿಗೆ ಬೇರೆ ಜಾಗದಲ್ಲಿ ಮನೆ ನಿರ್ಮಾಣವಾಗುತ್ತದೆ ಎಂದರು.

ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಮಾತನಾಡಿ ರಸ್ತೆಯ ಬದಿಯಲ್ಲಿ ಚರಂಡಿ ಹಾಗೂ ಪಾದಾಚಾರಿ ಮಾರ್ಗ ಕೂಡ ಬರಲಿದೆ, ಉತ್ತಮ ರೀತಿಯ ಬೀದಿದೀಪ ಕೂಡ ಇರುತ್ತದೆ. ಸಾರ್ವಜನಿಕರು ಸಹಕಾರ ನೀಡಲು ಮುಂದಿನ ದಿನಗಳಲ್ಲಿ ಕಟ್ಟಡ ಮಾಲೀಕರು ಹಾಗೂ ಮನೆ ಮಾಲೀಕರು ಹಾಗೂ ವರ್ತಕÀರು ಸಭೆ ಸೇರಿ ಅಂತಿಮ ನಿರ್ಧಾರ ತೆಗೆದುಕೊಳ್ಳೋಣ ಎಂದು ತಿಳಿಸಿದರು.

ಚೇಂಬರ್ ಆಫ್ ಕಾಮರ್ಸ್ನ ಪ್ರಧಾನ ಕಾರ್ಯದರ್ಶಿ ರವಿ ಉತ್ತಪ್ಪ ಮಾತನಾಡಿ, ಶಾಸಕರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಸಭೆ ಕರೆದು ತಿಳಿ ಹೇಳುವ ಕಾರ್ಯ ಆಗಬೇಕಿದೆ ಎಂದರು. ಸದಸ್ಯರಾದ ಆರ್.ಕೆ ಸಲಾಂ ಮಾತನಾಡಿ, ವೀರಾಜಪೇಟೆ ನಗರ ಅಭಿವೃದ್ಧಿ ಹೊಂದಬೇಕು. ವ್ಯಾಪಾರ ವಹಿವಾಟು ಇಲ್ಲದೆ ವರ್ತಕರು ಸೊರಗುತ್ತಿದ್ದಾರೆ. ರಸ್ತೆ ಅಗಲೀಕರಣವಾದರೆ ಉತ್ತಮ ಪಾರ್ಕಿಂಗ್ ವ್ಯವಸ್ಥೆ ಆಗುತ್ತದೆ ಎಂದರು. ಅನೇಕ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭ ವೀರಾಜಪೇಟೆ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಕಾಶಿ ಕಾವೇರಪ್ಪ, ಕಾರ್ಯದರ್ಶಿ ಶಾಹುಲ್ ಹಮೀದ್, ಜಂಟಿ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಬಿ.ಎಂ. ಸುರೇಶ್, ನಿರ್ದೇಶಕರುಗಳಾದ ಬೋಪಯ್ಯ, ಜಾಫರ್, ಬೊಪಣ್ಣ, ರೆಹಮಾನ್, ಸಲಹೆಗಾರರಾದ ಸೋಮಯ್ಯ ಹಾಗೂ ಪ್ರಮುಖರು ಉಪಸ್ಥಿತರಿದ್ದರು.