ಮಡಿಕೇರಿ, ಅ. ೭: ಬ್ರಹ್ಮಗಿರಿ ಸರ್ವೋದಯ ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ(ಸಿ.ಬಿ.ಎಸ್.ಸಿ) ಕೊಡಗು ಜಿಲ್ಲಾ ಒಕ್ಕೂಟದ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮ ಸಿದ್ದಾಪುರದ ಸಂತ ಅನ್ನಮ್ಮ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯದ ಟಿ.ಜಯಶ್ರಿ, ಕೂಡಿಗೆ ಸೈನಿಕ ಶಾಲೆಯ ಕೆ. ದಕ್ಷಿಣಮೂರ್ತಿ, ನಾಪೋಕ್ಲು ಅಂಕುರ್ ಪಬ್ಲಿಕ್ ಸ್ಕೂಲ್‌ನ ತೆಕ್ಕಡ ವಿ.ಮಹೇಶ್, ಅರಮೇರಿಯ ಎಸ್.ಎಂ.ಎಸ್ ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಷನ್ ಶಾಲೆಯ ಮೈತ್ರಿ ರಾವ್, ಎ.ಎಲ್.ಜಿ ಕ್ರೆಸೆಂಟ್ ಶಾಲೆಯ ಶೈಲಿ, ಹಾತೂರಿನ ನ್ಯಾಷನಲ್ ಅಕಾಡೆಮಿ ಸ್ಕೂಲ್ ನ ಕುಟ್ಟಂಡ ನೀಲಮ್ಮ ಸೋಮಣ್ಣ ಹಾಗೂ ಸಿದ್ದಾಪುರದ ಸಂತ ಅನ್ನಮ್ಮ ಶಾಲೆಯ ಲೆನಿ ಸೋಲೋಮನ್ ಅವರುಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನು ಮೈಸೂರಿನ ಶಿಕ್ಷಣ ಪಿ.ಯು ಕಾಲೇಜಿನ ಪಿ.ದೇವರಾಜು ಉದ್ಘಾಟಿಸಿದರು. ಬ್ರಹ್ಮಗಿರಿ ಸಿ.ಬಿಎಸ್.ಸಿ ಒಕ್ಕೂಟದ ಜಾಯ್ ಸಿ. ವಿನಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂತ ಅನ್ನಮ್ಮ ಶಾಲೆಯ ವ್ಯವಸ್ಥಾಪಕಿ ಮರ್ಜೋರಿ, ಮುಖ್ಯೋಪಾಧ್ಯಾಯರಾದ ಸಿಸ್ಟರ್ ಅರ್ಪಿತಾ, ಅಂಕುರ್ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರಾದ ಮಮತ, ಅರಮೇರಿ ಎಸ್.ಎಂ.ಎಸ್ ಶಾಲೆಯ ಪ್ರತಿಭಾ ಹಾಗೂ ಇತರರು ಇದ್ದರು.