ಸೋಮವಾರಪೇಟೆ, ಅ. ೭: ನೇಪಾಳದ ಕಟ್ಮುಂಡುವಿನಲ್ಲಿ ನಡೆದ ಏಷ್ಯನ್ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ೫೦ ಕೆ.ಜಿ. ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಪಡೆದ ಅತ್ತೂರು-ನಲ್ಲೂರು ಜ್ಞಾನಗಂಗಾ ವಸತಿ ಶಾಲೆಯ ವಿದ್ಯಾರ್ಥಿ ಎಂ. ಮನ್ವಿತ್ ಅವರನ್ನು ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎನ್.ಟಿ. ಪರಮೇಶ್, ಉಪಾಧ್ಯಕ್ಷ ಬಿ. ಶಿವಪ್ಪ, ನಿರ್ದೇಶಕರುಗಳಾದ ಮೃತ್ಯುಂಜಯ, ಶಿವಕುಮಾರ್, ಶ್ರೀಕಾಂತ್, ಹೆಚ್.ಕೆ. ಮಾದಪ್ಪ, ಬಿ.ಎಂ. ರಾಮ್ ಪ್ರಸಾದ್, ರಾಘವ, ಸುರೇಶ್, ದರ್ಶನ್ ಜೋಯಪ್ಪ, ವೆಂಕಪ್ಪ, ಪಿ.ಎನ್. ಶೋಭಿತ, ರೂಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಾರಾ ಅವರುಗಳು ಮನ್ವಿತ್‌ನನ್ನು ಸನ್ಮಾನಿಸಿದರು. ಈ ಸಂದರ್ಭ ಪೋಷಕರಾದ ಐಗೂರು ಗ್ರಾಮದ ಎಂ.ಕೆ. ಮೋಹನ್ ಇದ್ದರು.