*ಗೋಣಿಕೊಪ್ಪ, ಅ. ೭: ಕಾಫಿ, ಕಾಳುಮೆಣಸು ಬೆಳೆಗಳ ಜೊತೆಗೆ ಜೇನು ಸಾಕಣೆಗೆ ಹೆಚ್ಚಿನ ಒತ್ತುಕೊಟ್ಟು ಆದಾಯ ವನ್ನು ದುಪ್ಪಟ್ಟುಗೊಳಿಸುವ ಮಾರ್ಗದ ಕಡೆಗೆ ಬೆಳೆಗಾರರು ಸಾಗಬೇಕು ಎಂದು ಸಂಶೋಧಕಿ ಡಾ. ಚೆಪ್ಪುಡಿರ ನಿಧಿ ಹೇಳಿದರು. ಗೋಣಿಕೊಪ್ಪ ಕೆವಿಕೆ ಸಭಾಂಗಣದಲ್ಲಿ ನಡೆದ ಕೊಡಗು ಬೀ ಫಾರ್ಮ್ಸ್ ಪ್ರೊಡ್ಯೂಸರ್ ಕಂಪೆನಿ ಲಿಮಿಟೆಡ್ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಜೇನು ಸಾಕಾಣೆಯ ಬಗ್ಗೆ ಮಾಹಿತಿ ನೀಡಿದರು. ಕೊಡಗಿನ ಜೇನಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದರೆ ಬೇಡಿಕೆಗೆ ಪೂರಕವಾಗಿ ಜೇನು ದೊರಕುತ್ತಿಲ್ಲ. ಬೆಳೆಗಾರರು, ರೈತರು ಜೇನು ಕೃಷಿಯತ್ತ ಹೆಚ್ಚು ಒಲವು ತೋರಿದಾಗ ಜಗತ್ತಿನ ಗರಿಷ್ಠ ಪೂರೈಕೆಗೆ ಮುಕ್ತ ಮಾರುಕಟ್ಟೆ ತೆರೆದುಕೊಳ್ಳುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಫಿ ಬೋರ್ಡ್ ನಿರ್ದೇಶಕಿ ಡಾ. ಶ್ರೀದೇವಿ ಕಾಫಿ ಬೆಳವಣಿಗೆಗೆ ಪೂರಕವಾದ ವ್ಯವಸ್ಥೆಗಳ ಬಗ್ಗೆ ತಿಳಿಸಿದರು. ದೊಡ್ಡ ಮತ್ತು ಸಣ್ಣ ಬೆಳೆಗಾರರಿಗೆ ಕಾಫಿ ಬೋರ್ಡ್ನಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಕೊಡಗು ಬೀ ಫಾರ್ಮ್ಸ್ ಪ್ರೊಡ್ಯೂಸರ್ ಕಂಪೆನಿ ಲಿಮಿಟೆಡ್ ಅಧ್ಯಕ್ಷ ನಡಿಕೇರಿಯಂಡ ಸುಬ್ಬಯ್ಯ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಸದಸ್ಯರುಗಳಾದ ನಡಿಕೇರಿಯಂಡ ಬೋಸ್ ಮಂದಣ್ಣ, ಚೆಪುö್ಪಡಿರ ಗೀತಾ ಚಂಗಪ್ಪ, ಪಾಂಡAಡ ವಿಜಯ್ ದೇವಯ್ಯ, ಡಾ. ಅನು ಅಪ್ಪಯ್ಯ, ಕಾಂಡೆರ ಅಪ್ಪಣ್ಣ, ಚಿಂಡಮಾಡ ಸಜ್ಜಿ ಪೊನಪ್ಪ, ಕೋಡಿರ ಕುಶಿ ಭೀಮಯ್ಯ, ಐನಂಡ ಟೀನಾ ನಾಚಪ್ಪ, ನಡಿಕೇರಿಯಂಡ ದೀಪಿಕಾ ಮತ್ತು ಕೆವಿಕೆ ವಿಜ್ಞಾನಿಗಳು ಹಾಜರಿದ್ದರು.