ನಾಪೋಕ್ಲು, ಅ. ೭: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿಯ ವಿಶೇಷ ಸಾಧನೆ, ಕೆಲಸ ಕಾರ್ಯಗಳ ಮಾಹಿತಿಯನ್ನು ಒಳಗೊಂಡ ಮುನ್ನೋಟ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಕುಶನ್ ರೈ ಬಿ.ಎಸ್. ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮುನ್ನೋಟ ಪುಸ್ತಕ ಅನಾವರಣಗೊಳಿಸಲಾಯಿತು.
ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಮಾತನಾಡಿ, ಕಳೆದ ೨೦೨೦-೨೧ ರಿಂದ ೨೦೨೫-೨೬ನೇ ಸಾಲಿನಲ್ಲಿ ಅತ್ಯುತ್ತಮ ಸಮಾಜಮುಖಿ ಕೆಲಸಗಳನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದರು. ೨೨ ಪುಟಗಳ ಮುನ್ನೋಟ ಪುಸ್ತಕವನ್ನು ಸಾರ್ವಜನಿಕರಿಗೆ ಮುಂದಿನ ಗ್ರಾಮಸಭೆಯಲ್ಲಿ ವಿತರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ರೇಖಾ ಬಾಲು ಬಿ.ಎಸ್., ಸದಸ್ಯರಾದ ಮುಂಡAಡ ವಿಜು ತಿಮ್ಮಯ್ಯ, ಅಪ್ಪಚಂಡ ಮೀನಾಕ್ಷಿ ದೇವಯ್ಯ, ಮೂಡೇರ ಶರ್ಮಿಳಾ ಮನು, ಎಂ.ಎನ್. ಪುಷ್ಪ, ಮುಂಡAಡ ಪವಿ ಸೋಮಣ್ಣ, ನಿಂಗಪ್ಪ ಹೆಚ್.ಎನ್., ಬಿ.ಎಸ್. ಕೃಷ್ಣಪ್ಪ, ಯಶ್ವಿನ್ ಪೊನ್ನಪ್ಪ, ರಾಜೇಶ್ ಹೆಚ್.ಎಸ್., ಪಾರೆಮಜುಲು ರೀತ ಸುದರ್ಶನ್, ಮುಕ್ಕಾಟಿರ ಸೌಮ್ಯ ಸತೀಶ್ ಮತ್ತು ಲತಾ ಎಂ.ವೈ. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.