ಮಡಿಕೇರಿ ಅ. ೭: ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಸರಕಾರದ ಇತರ ಮೂಲಗಳಿಂದ ರೂ. ೮ ಕೋಟಿ ವೆಚ್ಚದಲ್ಲಿ ನಗರದ ಚೈನ್ ಗೇಟ್ ಬಳಿ ನಿರ್ಮಾಣಗೊಳ್ಳುತ್ತಿರುವ ಕರ್ನಾಟಕ ಸಾಂಸ್ಕೃತಿಕ ಭವನ ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ಎಲ್ಲ ಕಡೆ ಸೋರುವಿಕೆ ಮೂಲಕ ಹಳೆ ಕಟ್ಟಡದಂತೆ ಗೋಚರವಾಗುತ್ತಿದೆ. ಕಳಪೆ ಕಾಮಗಾರಿ ಮೂಲಕ ಹಣ ಅಪವ್ಯಯವಾದಂತೆ ಕಂಡುಬAದಿದೆ. ಜೊತೆಗೆ ತೀರಾ ವಿಳಂಬದಿAದಾಗಿ ಇದ್ದ ಹಣವನ್ನೂ ಕನ್ನಡ ಸಂಸ್ಕೃತಿ ಇಲಾಖೆ ಬೇರೆ ಜಿಲ್ಲೆಗೆ ಉದಾರವಾಗಿ ಕಳುಹಿಸಿ ಕೈಚೆÀಲ್ಲಿಕೊಂಡಿದೆ. ಇಲಾಖೆ ಕೊಡಗಿನಲ್ಲಿ ಕುಂಭಕರ್ಣ ನಿದ್ರಾವಸ್ಥೆಯಲ್ಲಿದೆ. ಇತ್ತ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿರುವ ಲೋಕೋಪಯೋಗಿ ಇಲಾಖೆ ಕಾಮಗಾರಿ ವಿಳಂಬವಾದುದರಿAದ ಬೆಂಗಳೂರಿನ ಗುತ್ತಿಗೆದಾರ ಪುಟ್ಟರಾಜು ಎಂಬವರಿಗೆ ನೋಟೀಸ್ ನೀಡಿದ್ದು ಗುತ್ತಿಗೆ ರದ್ದುಪಡಿಸುವುದಾಗಿ ಖಚಿತಗೊಳಿಸಿದೆ. ಇದರಿಂದ ಎಚ್ಚೆತ್ತ ಗುತ್ತಿಗೆದಾರ ತನ್ನ ಕೆಲಸದ ನೆನಪಾಗಿ ಈಗ ಬೇಕೋ ಬೇಡವೋ ಎಂಬAತೆ ಕೆÀಲಸವನ್ನು ನಿಧಾನವಾಗಿ ಮರು ಆರಂಭಗೊಳಿಸಿರುವುದು ಕಂಡುಬAದಿದೆ.

ಲೋಕೋಪಯೋಗಿ ಇಲಾಖೆ ಪ್ರಮುಖರ ಪ್ರಕಾರ ಬಹಳಷ್ಟು ಕೆಲಸ ಮುಗಿದಿದೆ. ಸದ್ಯಕ್ಕೆ ರೂ. ೫೦ ಲಕ್ಷ ಡಿ.ಸಿ. ನಿಧಿಯಲ್ಲಿದೆ. ಆದರೆ, ಗುತ್ತಿಗೆದಾರ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಕೆಲಸ ನೋಡಿ ಹಣ ಪಾವತಿಸಲಾಗುವುದು ಎಂದಿದ್ದಾರೆ. ಇತ್ತ ಕನ್ನಡ ಸಂಸ್ಕೃತಿ ಇಲಾಖಾ ಮೂಲದ ಪ್ರಕಾರ ಇಲಾಖೆಯಲ್ಲಿ ಬಾಕಿ ಉಳಿದಿದ್ದ ಹಣವನ್ನು ಸದ್ಯಕ್ಕೆ ಬೇರೆ ಜಲ್ಲೆಯ ಕಾಮಗಾರಿಗೆ ಬಳಕೆ ಮಾಡಲು ಕಳುಹಿಸಿಕೊಡಲಾಗಿದೆ. ಅಧಿಕಾರಿಗಳು ಕೆಲಸ ಮಾಡಿಸುವ ಬದಲು ಸರಕಾರದಿಂದ ನಿರ್ದೇಶನ ಬಂದಿತೆAದು ಬೇಜವಾಬ್ದಾರಿಕೆಯಿಂದ ಕೊಡಗಿನಲ್ಲಿ ಬಳಕೆಯಾಗಬೇಕಿದ್ದ ಈ ಹಣವನ್ನು ಬೇರೆ ಜಿಲ್ಲೆಗೆ ಕಳುಹಿಸಿರುವುದು ಅಕ್ಷಮ್ಯ. ಅದು ಯಾವಾಗ ಕೊಡಗಿಗೆ ವಾಪಸಾಗುತ್ತದೆೆ ಎನ್ನುವುದು ಈಗಿನ ಯಕ್ಷ ಪ್ರಶ್ನೆ.

ಈ ಸುವರ್ಣ ಸಮುಚ್ಛಯದ ಹಿನ್ನೆಲೆಯ ಕತೆ ಕೇಳಿದರೆ ಸರಕಾರಗಳ, ಅದಿಕಾರಿಗಳ ಕಾರ್ಯನಿರ್ವಹಣೆಗೆ ಹಿಡಿದ ಕೈಗನ್ನಡಿಯಂತಿದೆ. ೨೦೦೬ ರಲ್ಲಿ ರಾಜ್ಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರಕಾರವಿದ್ದಾಗ ಪ್ರಕಟಿಸಿದ್ದ ಯೋಜನೆ ಇದು. ಆರಂಭದಲ್ಲಿ ರೂ. ೧.೬೦ ಕೋಟಿಯದ್ದಾಗಿತ್ತು. ಆದರೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು ಏಳು ವರ್ಷಗಳ ಬಳಿಕ ಅಂದರೆ ೨೦೧೩ರಲ್ಲಿ. ಆರಂಭದಲ್ಲಿ ಜಾಗದ ಸಮಸ್ಯೆ ಕಾಡಿತ್ತು. ನಂತರ ಚೈನ್‌ಗೇಟ್ ಬಳಿಯ ಹಳೇ ಸೌದೆ ಡಿಪೋದ ೮೦ ಸೆಂಟ್ ಜಾಗ ಅಂತಿಮಪಡಿಸಲಾಗಿತ್ತು. ಪ್ರಥಮ ಹಂತದಲ್ಲಿ ರೂ. ೫೦ ಲಕ್ಷ. ಬಳಿಕ ರೂ. ೫೭ ಲಕ್ಷದಂತೆ ರೂ. ೧.೦೭ ಕೋಟಿಯಲ್ಲಿ ಕಾಮಗಾರಿಗೆ ಚಾಲನೆ ದೊರೆಯಿತು. ೨೦೧೯ರ ವೇಳೆಗೆ ರೂ. ೩.೦೭ಕೋಟಿ ಈ ಕೆಲಸಕ್ಕೆ ಬಂತು. ತೆವಳುತ್ತಾ ಸಾಗಿದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದೀಗ ಇದರ ಉದ್ದೇಶಿತ ವೆಚ್ಚ ಸುಮಾರು ರೂ. ೮ ಕೋಟಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿನ ಕಾಮಗಾರಿ ಇದಾಗಿದೆ. ಈ ಕಟ್ಟಡದಲ್ಲೇ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇದೇ ಇಲಾಖೆಯಡಿಯಲ್ಲೇ ಬರುವ ಕೊಡವ ಅಕಾಡೆಮಿ ಹಾಗೂ ಅರೆಭಾಷೆ ಅಕಾಡೆಮಿಗೂ ಕಚೇರಿ ಒದಗಿಸಲು ತೀರ್ಮಾನ ಮಾಡಲಾಗಿದೆ. ೪ಐದನೇ ಪುಟಕ್ಕೆ v(ಮೊದಲ ಪುಟದಿಂದ)

ಕನ್ನಡ ಸಂಸ್ಕೃತಿ ಇಲಾಖೆ ಕಚೇರಿಯೂ ಇಲ್ಲೇ ಬರಬೇಕಿದೆ. ಆದರೆ...?

ಎರಡು ಅಕಾಡೆಮಿಗಳು ಈಗಲೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಬರುವ ಅನುದಾನದ ಬಹುಪಾಲು ಕಟ್ಟಡ ಬಾಡಿಗೆಗೇ ಪಾವತಿಯಾಗುತ್ತಿದೆ. ಯೋಜನೆ ಪ್ರಕಟ ಬಳಿಕ ರಾಜ್ಯ ವಿಧಾನಸಭೆಗೆ ೨೦೦೮ರಲ್ಲಿ ಒಂದು ಚುನಾವಣೆ - ೨೦೧೩ರಲ್ಲಿ ಒಂದು ಚುನಾವಣೆ - ೨೦೧೮ರಲ್ಲಿ ಮತ್ತೊಂದು ಚುನಾವಣೆ - ೨೦೨೩ರಲ್ಲಿ ಮಗದೊಂದು ಚುನಾವಣೆಯೂ ಮುಗಿದು ಹೋಗಿದೆ. ನೂತನ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷವೂ ಕಳೆÉದು ಹೋಗಿದೆ. ಆದರೆ ಕೊಡಗು ಜಿಲ್ಲಾ ಕೇಂದ್ರಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಕಲಾಭವನವೊಂದು ಮಾತ್ರ ಇನ್ನೂ ಪೂರ್ಣಗೊಂಡಿಲ್ಲ.

ಇದಕ್ಕೆ ಯಾರು ಹೊಣೆ? ಮಡಿಕೇರಿ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಯವರು ಇತ್ತ ಗಮನ ಹರಿಸುವರೇ?

- ವರದಿ : ಟಿ.ಜಿ. ಸತೀಶ್, ಚಿತ್ರ : ಲಕ್ಷಿö್ಮÃಶ್