ಮಡಿಕೇರಿ, ಅ. ೩: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಮಕ್ಕಳ ದಸರಾದಲ್ಲಿನ ಮಂಟಪ ನಿರ್ಮಾಣ ಸ್ಪರ್ಧೆಯಲ್ಲಿ ಕಳೆದ ವರ್ಷದ ವಿಜೇತ ತಂಡ ಟೀಮ್ ಅಗ್ನಿ ಈ ವರ್ಷವೂ ಅತ್ಯುತ್ತಮ ಪ್ರದರ್ಶನದೊಂದಿಗೆ ಪ್ರಥಮ, ಸ್ಥಾನ ಪಡೆದುಕೊಂಡಿತು.

ಪಾರ್ಕ್ ಸೈಡ್ ಕೇಸರಿ ಮಕ್ಕಳ ಸಂಘ ದ್ವಿತೀಯ ಸ್ಥಾನ ಪಡೆದರೆ, ಕ್ರಿಯೇಟಿವ್ ಬಾಯ್ಸ್, ತೃತೀಯ ಬಹುಮಾನ ತನ್ನದಾಗಿಸಿಕೊಂಡಿತು. ಚತುರ್ಥ ಬಹುಮಾನವನ್ನು ಟೀಮ್ ವಾರಿಯರ್ಸ್ ಮತ್ತು ಟೀಮ್ ೧೪ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿತು.

ನಗರದ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಆಯೋಜಿತ ರೋಟರಿ ಮಿಸ್ಟಿ ಹಿಲ್ಸ್ನ ೧೨ನೇ ವರ್ಷದ ಮಕ್ಕಳ ದಸರಾದ ವಿವಿಧ ಸ್ಪರ್ಧಾ ವಿಭಾಗಗಳ ಸ್ಪರ್ಧೆಗಳ ಬಹುಮಾನ ವಿಜೇತರ ಮಾಹಿತಿ ಇಂತಿದೆ.

ಮಕ್ಕಳ ಸಂತೆ

ಪ್ರಥಮ ಬೊಳ್ಳಮ್ಮ ಎ.ಎ., ಬೊಳ್ಳಮ್ಮ ಹೆಚ್.ಎನ್., ಚೋಂದಮ್ಮ ಕೆ.ಕೆ., ಲಿಷಾ ದೇಚಮ್ಮ, ದ್ವಿತೀಯ ಶಿಥಲ್, ಜಸಿಕಾ, ತೃತೀಯ - ಕವಿನ್ ಎನ್.ಟಿ., ಕಾವೇರಿ ಎನ್.ಎಸ್., ಚತುರ್ಥ - ಲಿಪಿಕ, ಜಸ್ವಿನ್, ಮಾನ್ವಿತ್, ವೇದಿಕಾ, ಚಿರಾಗ್, ಸಮಾಧಾನಕರ - ಪುಪ್ಪಿಕಾ ಪಿ.ಡಿ., ಬಿ.ಎನ್., ಜ್ಞಾನಿಕ, ತಶ್ವಿನ್ ಬಿ.ಪಿ., ಲವಿತ್ ಬಿ.ಪಿ., ಲಿಯಾನ್ ಸುಬ್ಬಯ್ಯ

ಮಕ್ಕಳ ಅಂಗಡಿ

ಪ್ರಥಮ - ಶಾರ್ವಿ, ಶ್ಲೋಕ ದ್ವಿತೀಯ - ದಿಯಾನ್, ಧಿಯಾರ, ತೃತೀಯ - ಸಿಂಚನ, ಚೈತ್ರ ಚತುರ್ಥ - ಹಿರಣ್, ಶಮಿತ್ ಸಮಾಧಾನಕರ - ಸ್ವರ, ದೀತ್ಯ.

ಕ್ಲೇ ಮಾಡೆಲಿಂಗ್ ಸ್ಪರ್ಧೆ

(೫ ರಿಂದ ೭ನೇ ತರಗತಿ ವಿಭಾಗ) ಪ್ರಥಮ - ಅರ್ಷದ್ ಅಹಮ್ಮದ್, ದ್ವಿತೀಯ - ಸಖಿತ್, ತೃತೀಯ - ಗ್ರಹಿಥ್, ಚತುರ್ಥ - ಯಕ್ಷಿತ್. ಸಮಾಧಾನಕರ -ಸಾಗರಿ. ೮ ರಿಂದ ೧೦ನೇ ತರಗತಿ ವಿಭಾಗ - ಪ್ರಥಮ - ಹರ್ಷಿಥ್ ಪೊನ್ನಪ್ಪ, ದ್ವಿತೀಯ - ಉದ್ಯಾನ್. ತೃತೀಯ - ಪರ್ವಿನ್. ಚತುರ್ಥ - ಪ್ರಧಾನ್ ಬಸಪ್ಪ ಕೆ.ಪಿ. ಸಮಾಧಾನಕರ -ಚಂದನ್ ಪಿ.ಆರ್.

ಛದ್ಮವೇಷ ಸ್ಪರ್ಧೆ

(ಎಲ್‌ಕಿಜಿ, ಯುಕೆಜಿ ವಿಭಾಗ) ಪ್ರಥಮ - ಶ್ರೇಷ್ಟ ತನಿಷ್ಟ, ದ್ವಿತೀಯ - ಜಾಗೃತಿ ತೃತೀಯ - ವೈಭವ್, ಚತುರ್ಥ - ರೋಹಿತ್ ಬಿ.ವಿ. ಸಮಾಧಾನಕರ - ಸೃತಿ.

೧ ರಿಂದ ೪ನೇ ತರಗತಿ ವಿಭಾಗ - ಪ್ರಥಮ - ಧಿವಿನ್, ದ್ವಿತೀಯ - ಗಾನವಿ, ತೃತೀಯ - ಆರುಷ್. ಚತುರ್ಥ - ಓವಿಯ - ಸಮಾಧಾನಕರ - ಆರಾಧ್ಯ.

೫ ರಿಂದ ೭ನೇ ತರಗತಿ ವಿಭಾಗ - ಪ್ರಥಮ - ವರ್ಷಿತ, ದ್ವಿತೀಯ - ಜನ್ಯಾ ಹರೀಶ್, ತೃತೀಯ - ದೃಷಿಕ ಚತುರ್ಥ - ಯಶ್ವಂತ್, ಸಮಾಧಾನಕರ - ರಕ್ಷಿತ.