ಮಡಿಕೇರಿ, ಅ. ೩: ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ನವರಾತ್ರಿಯ ಪ್ರಯುಕ್ತ ಶಾರದಾಪೂಜೆ ನಡೆಯಿತು. ಅಧ್ಯಕ್ಷೆ ಸವಿತಾ ಭಟ್ ಸದಸ್ಯೆಯರಿಗೆ ಸ್ವಾಗತ ಕೋರಿದರು. ಮಂಡಳಿಯವರು ಪೂಜಾ ಕಾರ್ಯಗಳನ್ನು ನೆರವೇರಿಸಿದರು.
ನಂತರ ಸದಸ್ಯೆಯರಿಂದ ಭಕ್ತಿ ಗೀತಾಗಾಯನ ನಡೆಯಿತು. ಸವಿತಾ ಭಟ್ ನವರಾತ್ರಿಯ ಬಗ್ಗೆ ಹಾಗೂ ಮಹಿಷಾಸುರ ಮರ್ದಿನಿ ದೇವಿಯ ಬಗ್ಗೆ ಮಾತನಾಡಿದರು.
ಉಪಾಧ್ಯಕ್ಷರಾದ ಶ್ಯಾಮಲಾ ದಿನೇಶ್ ವಂದನಾರ್ಪಣೆಯನ್ನು ಮಾಡಿದರು. ಬಳಿಕ ಪ್ರಸಾದ ವಿತರಣೆ ನಡೆಯಿತು. ಶಾಂತಿ ಮಂತ್ರ ಹಾಗೂ ರಾಷ್ಟçಗೀತೆಯೊಡನೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಪೂಜಾ ಕಾರ್ಯಕ್ರಮಗಳಲ್ಲಿ ಆಡಳಿತ ಮಂಡಳಿಯ ಸದಸ್ಯೆಯರಾದ ವಸುಂಧರಾ ಪ್ರಸನ್ನ, ಕಮಲಾ ಸುಬ್ಬಯ್ಯ, ಶೈಲಾ ಮಂಜುನಾಥ್, ಜಯಶೀಲಾ ಪ್ರಕಾಶ್, ಆಯಿಷಾ ಹಮೀದ್, ವಸಂತಿ ಪೂಣಚ್ಚ, ಪ್ರೇಮಾ ರಾಘವಯ್ಯ ಭಾಗವಹಿಸಿದ್ದರು.