ಗೋಣಿಕೊಪ್ಪ ವರದಿ, ಅ. ೩: ಪದವಿಪೂರ್ವ ಶಿಕ್ಷಣ ಇಲಾಖೆ, ರಾಷ್ಟಿçÃಯ ಸೇವಾ ಯೋಜನೆ, ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಅಮ್ಮತ್ತಿ ಪ್ರೌಢಶಾಲೆಯಲ್ಲಿ ಎನ್.ಎಸ್.ಎಸ್. ವಾರ್ಷಿಕ ಶಿಬಿರಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಅಮ್ಮತ್ತಿ ಪ್ರೌಢ ಶಾಲೆ ಅಧ್ಯಕ್ಷ ಕಾವಾಡಿಚಂಡ ಗಣಪತಿ ಉದ್ಘಾಟಿಸಿ ಮಾತನಾಡಿ, ಎನ್.ಎಸ್.ಎಸ್. ಶಿಬಿರ ಸಾಕಷ್ಟು ಕಲಿಯಲು ಅವಕಾಶ ನೀಡುತ್ತದೆ. ಜನರ ಸೇವೆ ಮುಖ್ಯ. ಕಸ ಮುಕ್ತ ದೇಶದ ನಿರೀಕ್ಷೆಯಲ್ಲಿ ನಾವಿದ್ದೇವೆ.
ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ ಮಾತನಾಡಿ, ಗುರಿ ಇದ್ದರೆ ಮಾತ್ರ ಮುಂದುವರಿಯಲು ಸಾಧ್ಯವಿದೆ. ೯ನೇ ತರಗತಿಯಿಂದ ೧೨ನೇ ತರಗತಿವರೆಗೆ ಶಿಸ್ತು ಅಳವಡಿಸಿಕೊಳ್ಳುವುದರಿಂದ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ ಎಂದರು. ರೈತ ಸಂಘ ಅಧ್ಯಕ್ಷ ಕೇಚಂಡ ಎಂ. ಕುಶಾಲಪ್ಪ ಮಾತನಾಡಿ, ಶಿಸ್ತು ಮುಖ್ಯ. ಹೆತ್ತವರು, ಗುರುಗಳು ನಮ್ಮ ಸಾಧನೆಯ ಭಾಗವಾಗಿರುವುದನ್ನು ಅರಿತುಕೊಂಡು ಮುಂದುವರಿಯಬೇಕು.
ಮುಖ್ಯ ಶಿಕ್ಷಕಿ ಅಂಜಪAಡ ಡಿ. ಅಕ್ಕಮ್ಮ ಮಾತನಾಡಿ, ನಾವೆಲ್ಲ ಒಂದೇ ಎಂಬ ಮನೋಭಾವನೆ ಹುಟ್ಟು ಪಡೆದುಕೊಳ್ಳಲು ಶಿಬಿರ ಸಹಕಾರಿ. ಇಷ್ಟಪಟ್ಟು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎನ್.ಎಂ. ನಾಣಯ್ಯ ಮಾತನಾಡಿ, ಶಿಬಿರದಲ್ಲಿ ಕಲಿಯಲು ಸಾಕಷ್ಟು ಅವಕಾಶಗಳು ದೊರೆಯುತ್ತವೆ. ಸಾಮಾನ್ಯ ವ್ಯಕ್ತಿಯನ್ನು ಮಾದರಿ ವ್ಯಕ್ತಿಯಾಗಿ ರೂಪಿಸಲು ಶಿಬಿರ ಸಹಕಾರಿ ಎಂದರು.
ಪರಿಣಾಮಕಾರಿಯಾಗಿ ಶಿಬಿರವನ್ನು ಬಳಸಿಕೊಂಡಾಗ ಮಾತ್ರ ಬೆಳೆಯಲು ಸಾಧ್ಯ. ಏಳು ದಿವಸದ ಶಿಬಿರದಲ್ಲಿ ಸಾಕಷ್ಟು ಶ್ರಮ ವಹಿಸಬೇಕು. ಇಲ್ಲಿನ ಶಿಕ್ಷಣ ಬದುಕಿಗೆ ಮಾದರಿಯಾಗಬೇಕೆಂದರು.
ಕಾಫಿ ಬೆಳೆಗಾರ ಕುಟ್ಟಂಡ ಪಿ. ಗಣಪತಿ, ಪ್ರೌಢಶಾಲೆ ನಿರ್ದೇಶಕಿ ಕುಟ್ಟಂಡ ತನುಜ ಚಿಣ್ಣಪ್ಪ, ಭದ್ರಕಾಳಿ ದೇವಸ್ಥಾನ ಸಮಿತಿ ಅಧ್ಯಕ್ಷ ಬೊಮ್ಮಂಡ ನಾಚಪ್ಪ ಇದ್ದರು.
ಶಿಬಿರಾಧಿಕಾರಿ ಸಿ.ಪಿ. ಅನುಪಮ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘ ಸಂಚಾಲಕಿ ಕೆ.ಪಿ. ಗಾಯತ್ರಿ ವಂದಿಸಿದರು. ಶಿಬಿರಾರ್ಥಿಗಳಾದ ಡೋನಾ, ವೀಣಾ ನಿರೂಪಿಸಿದರು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾಚಿಮಂಡ ತನುಜ ಮೇದಪ್ಪ, ನೆಲ್ಲಮಕ್ಕಡ ಸಾಗರ್ ನಾಚಯ್ಯ ತಂಡ ಹಾಡುಗಾರಿಕೆಯಿಂದ ರಂಜಿಸಿದರು. ಕೊಡವ, ಕನ್ನಡ ಭಾಷೆ ಸೇರಿದಂತೆ ಚಲನಚಿತ್ರ ಹಾಡು ಹಾಡಿದರು.