ಮಡಿಕೇರಿ, ಅ. ೩: ಸಿಖ್ ಧರ್ಮ, ಹಿಂದೂ ಹಾಗೂ ಜೈನ ಧರ್ಮದಂತೆ ಸನಾತನ ಕವಚವನ್ನು ಹೊಂದಿದ್ದು, ಸಿಖ್ಖರು ಸಂವಿಧಾನದ ೨೫ ಮತ್ತು ೨೬ನೇ ವಿಧಿ ಅಡಿಯಲ್ಲಿ ಅವರ ಸಾಂಸ್ಕೃತಿಕ ಲಾಂಛನ ಮತ್ತು ಧಾರ್ಮಿಕ ಸಂಸ್ಕಾರ ಕಿರ್ಪಾಣ (ಖಡ್ಗ-ಕಟಾರಿ)ಕ್ಕೆ ಪ್ರತ್ಯೇಕ ಧರ್ಮ ಗುರುತಿಸುವಿಕೆಯೇ ರಾಜ್ಯಾಂಗ ಖಾತ್ರಿ ಮುಂದುವರೆಯಲು ಸಾಧ್ಯವಾಯಿತು. ಅಂತೆಯೇ ಕೊಡವರ ವೈಶಿಷ್ಟö್ಯ, ಅವರಿಗಿರುವ ಆ್ಯನಿಮಿಸ್ಟಿಕ್ ಧಾರ್ಮಿಕ ಹಿನ್ನೆಲೆಯಲ್ಲಿ ಭಾಷೆ, ಜಾತಿ ಕಾಲಂನಲ್ಲಿ “ಕೊಡವ” ಎಂದು ದಾಖಲಿಸಿ, ರಾಜ್ಯಾಂಗ ಖಾತ್ರಿ ಪಡೆದಲ್ಲಿ ಮಾತ್ರ ಕೊಡವರ ಧಾರ್ಮಿಕ ಸಂಸ್ಕಾರ ಸಂವಿಧಾನದ ೨೫ ಮತ್ತು ೨೬ರ ಧಾರ್ಮಿಕ ಸ್ವಾತಂತ್ರ‍್ಯದಡಿ ಶಾಶ್ವತ ಮುಂದುವರೆಯಲು ಸಾಧ್ಯ ಎಂದು ಸಿ.ಎನ್.ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಹೇಳಿದರು.

ಚೇರಂಬಾಣೆಯಲ್ಲಿ ನಡೆದ ಮಾನವ ಸರಪಳಿ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಡವರು ಪ್ರತ್ಯೇಕ ಎಂದು ದಾಖಲಿಸಲ್ಪಟ್ಟರೆ ಮಾತ್ರ ಕೊಡವ ಲ್ಯಾಂಡ್ ಸೆಲ್ಪ್ರೂಲ್, ಎಸ್.ಟಿ. ಪಟ್ಟಿ ಮತ್ತು ಪಾರ್ಲಿಮೆಂಟ್ ಎಸೆಂಬ್ಲಿಯಲ್ಲಿ ಸಿಕ್ಕಿಂನ ಸಂಘ ಮತ ಕ್ಷೇತ್ರದಂತೆ ಪ್ರತ್ಯೇಕ ಕೊಡವ ಮತ ಕ್ಷೇತ್ರವನ್ನು ಪಡೆಯಬಹುದಾಗಿದೆ.

ಜಾತಿ ಗಣತಿಯಲ್ಲಿ ಕೊಡವ ಎಂದು ನಮ್ಮ ಅಭಿಪ್ರಾಯಕ್ಕೆ ವಿರುದ್ಧವಾಗಿ ದಾಖಲಿಸುವಲ್ಲಿ ಗಣತಿದಾರರು ಕೈಚಳಕ ಮಾಡಿದರೆ ಸರ್ಕಾರವೇ ಹೊಣೆ ಆಗುತ್ತದೆ. ಬಾಂಗ್ಲಾದೇಶಿಗರು, ರೋಹಿಂಗ್ಯಗಳು, ಜಾರ್ಖಂಡ್, ಅಸ್ಸಾಂ ಮತ್ತು ಮಧ್ಯಪ್ರದೇಶದ ಅಕ್ರಮ ವಲಸಿಗರು ಕೊಡಗು ಜಿಲ್ಲೆಯಲ್ಲಿ ಕಾರ್ಮಿಕರ ರೂಪದಲ್ಲಿ ಆಶ್ರಯ ಪಡೆದಿದ್ದಾರೆ. ಜಾತಿ ಜನಗಣತಿಯ ಸಂದರ್ಭ ಇವರುಗಳನ್ನು ಸಕ್ರಮಗೊಳಿಸಿದರೆ ಮತ್ತು ಇವರುಗಳಿಂದ ಕಾನೂನು ಉಲ್ಲಂಘನೆಯಾದರೆ ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ. ಜಾತಿ ಜನಗಣತಿಯ ಸಂದರ್ಭ ಕೊಡವರು ಜಾತಿ-ಭಾಷೆ-ಧರ್ಮದ ಕಾಲಂನಲ್ಲಿ “ಕೊಡವ” ಎಂದೇ ಬರೆಯಬೇಕೆನ್ನುವ ಕುರಿತು ಮತ್ತು ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು. ಕೆಲವು ಭ್ರಷ್ಟ ರಾಜಕಾರಣಿಗಳು ಅಕ್ರಮ ವಲಸಿಗರ ಮಾಹಿತಿ ಕಲೆಹಾಕಿ ಅವರನ್ನೆಲ್ಲ ಮತದಾರರ ಪಟ್ಟಿಯಲ್ಲಿ ಸೇರಿಸಿ ನಿವೇಶನ ಮತ್ತು ವಸತಿ ನೀಡುವ ಭರವಸೆ ನೀಡುತ್ತಿದ್ದು, ಇದಕ್ಕೆ ಆಡಳಿತ ಯಂತ್ರ ಬೆಂಬಲ ನೀಡುತ್ತಿದೆ. ಜಾಗ ಮಂಜೂರು ಮಾಡಿ ಹಕ್ಕುಪತ್ರ ಕೊಡಿಸುವ ಮೂಲಕ ಮತದಾರರ ಸಂಖ್ಯಾಬಲವನ್ನು ಹೆಚ್ಚಿಸಿಕೊಂಡು ಆ ಜನಸಂಖ್ಯೆ ತೂಕದ ಆಧಾರದಲ್ಲಿ ಮುಂದಿನ ಕ್ಷೇತ್ರ ಮರು ವಿಂಗಡಣೆ ಸಂದರ್ಭ ಕೊಡಗಿಗೆ ಪ್ರತ್ಯೇಕ ಪಾರ್ಲಿಮೆಂಟ್ ಸೀಟು ಸಿಗದಂತೆ ಮಾಡುವ ಹುನ್ನಾರ ಅಡಗಿದೆ. ಕೊಡವರ ಬಾಹುಳ್ಯದ ಮೂಲ ನೆಲೆಯಾದ ಪಶ್ಚಿಮಘಟ್ಟದ ಪರ್ವತ ಶ್ರೇಣಿಯ ಸಂಕೋಲೆಗಳಾದ ಮರೆನಾಡಿನಿಂದ ಸೂರ್ಲಬ್ಬಿ ನಾಡ್ ವರೆಗೆ ಸೂಕ್ಷ್ಮ ಪರಿಸರ ವಲಯದ ಕುರಿತು ಹೈಕೋರ್ಟ್ ಸ್ಪಷ್ಟ ಆದೇಶವಿದ್ದರೂ ಅದನ್ನು ಗಾಳಿಗೆ ತೂರಿ ಸಾವಿರಾರು ಎಕರೆ ಪ್ರದೇಶದಲ್ಲಿ ಅಕ್ರಮ ಬಾಂಗ್ಲಾದೇಶಿಗರು ಹಾಗೂ ರೋಹಿಂಗ್ಯಗಳಿಗೆ ಆಶ್ರಯ ಕಲ್ಪಿಸಲು ಷಡ್ಯಂತ್ರ ನಡೆದಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಸುಮಾರು ೧ ಲಕ್ಷ ವಿದೇಶಿಯರು ಅಕ್ರಮವಾಗಿ ಕೊಡವ ಭೂಮಿಯಲ್ಲಿ ನೆಲೆಸಿದ್ದಾರೆ ಎನ್ನುವ ಮಾಹಿತಿ ಇದೆ. ದೊಡ್ಡ ದೊಡ್ಡ ಕಂಪೆನಿ ತೋಟಗಳು ಇದರಲ್ಲಿ ಶಾಮೀಲಾಗಿದ್ದು, ಅವರನ್ನು ಸಂಪರ್ಕಿಸಿರುವ ಆಡಳಿತಾಂಗ ಸಮೃದ್ಧ ಗ್ಯಾರಂಟಿ ಮತಬ್ಯಾಂಕ್ ನಿರ್ಮಿಸಲು ಹುನ್ನಾರ ರೂಪಿಸಿದೆ. ಇದು ಕೊಡವ ನೆಲದ ಜನಸಂಖ್ಯೆ ಪಲ್ಲಟ ಮತ್ತು ಜನಸಂಖ್ಯಾ ದುರಾಕ್ರಮಣಕ್ಕೆ ಕಾರಣವಾಗಿ ರಾಷ್ಟ್ರೀಯ ಭದ್ರತೆಗೆ ಸವಾಲಾಗಲಿದೆ ಎಂದರು. ಅ. ೧೧ ರಂದು ಚೆಟ್ಟಳ್ಳಿ ಯಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಈ ಸಂದರ್ಭ ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಂದಪAಡ ರಚನ ಮನೋಜ್, ಕಲ್ಮಾಡಂಡ ದೇಚಮ್ಮ ಮೇದಪ್ಪ, ಮಂದಪAಡ ಹರಿಣಿ ಅಯ್ಯಣ್ಣ, ಕಲ್ಮಾಡಂಡ ದಮಯಂತಿ ಮೊಣ್ಣಪ್ಪ, ಮಂದಪAಡ ನಿಹಾಲಿ ದೇಚಕ್ಕ, ಪಟ್ಟಮಾಡ ಸೀತಮ್ಮ, ಅಳ್ಮಂಡ ಜೈ ಗಣಪತಿ, ಪಟ್ಟಮಾಡ ಕುಶ, ಮಂದಪAಡ ಮನೋಜ್, ಕೊಟ್ಟುಕತ್ತಿರ ಬಾಬಿ ಪಳಂಗಪ್ಪ, ಬೊಳರ್ಪಂಡ ಚೆಂಗಪ್ಪ, ನಾಪಂಡ ಗಣೇಶ್, ಮಂದಪAಡ ಸೂರಜ್, ಮಂದಪAಡ ದೀಪಕ್, ಪೊನ್ನಚೆಟ್ಟೀರ ಸುರೇಶ್, ಕೇಕಡ ಬೋಪಣ್ಣ, ಕೇಕಡ ಜೋಯಪ್ಪ, ಇಂದAಡ ಸೋಮಯ್ಯ, ಪಟ್ಟಮಾಡ ರವಿ, ಪೊಡನೋಳಂಡ ತೇಜ, ತೇಲಪಂಡ ಬೋಪಯ್ಯ, ಪೊನ್ನಚೆಟ್ಟಿರ ರಮೇಶ್ ಗಣಪತಿ, ಪೊಡನೋಳಂಡ ಮಧು, ಪೊನ್ನಚೆಟ್ಟಿರ ಮೋಹನ್, ಕುಂಚೆಟ್ಟಿರ ಗೋಪಾಲ್, ಕೂಪದಿರ ಸಾಬು, ಕಾಡಂಡ ಅಪ್ಪ ಸ್ವಾಮಿ, ಕೇಕಡ ರಮೇಶ್, ಕಲ್ಮಾಡಂಡ ವಾಸು, ಇಂದAಡ ದೇವಯ್ಯ, ಮೊಟ್ಟೆಯಂಡ ವಾಸು ಕಾಳಪ್ಪ, ಕೇಕಡ ಪಳಂಗಪ್ಪ, ಕುಂಜೆಟ್ಟಿರ ಅಜಿತ್, ಕಲ್ಮಾಡಂಡ ಜಗ್ಗು, ಕೇಕಡ ತಿಮ್ಮಯ್ಯ, ಪರ್ವಂಡ ಕಾಳಪ್ಪ, ಪಟ್ಟಮಾಡ ಧನು ಬೆಳ್ಯಪ್ಪ, ಇಂದAಡ ಪೂವಯ್ಯ, ಅಜ್ಜಿನಂಡ ಮಾಚಯ್ಯ, ಬಡ್ಡಿರ ಪಳಂಗಪ್ಪ, ಬೊಡಂಡ ಸೋಮಯ್ಯ, ಇಂದAಡ ಬೋಪಣ್ಣ, ಕುಂಚೆಟ್ಟಿರ ದೇವಯ್ಯ, ಚಿಯಬೇರ ಬಿದ್ದಪ್ಪ, ಬಡ್ಡಿರ ಮುದ್ದಪ್ಪ, ಚಿಯಬೇರ ಮುದ್ದಪ್ಪ, ಪಟ್ಟಮಾಡ ತಿಮ್ಮಯ್ಯ, ಪಟ್ಟಮಾಡ ನಾಚಪ್ಪ, ಪಟ್ಟಮಾಡ ಮಧು, ಕುಂಚೆಟ್ಟಿರ ನಂಜಪ್ಪ, ತೇಲಪಂಡ ನಂದ, ಕಬ್ಬಚ್ಚಿರ ಶರೀನ್, ಇಂದAಡ ವಾಸು, ಕಾಡಂಡ ಶರತ್, ಪೊನ್ನಚೆಟ್ಟಿರ ಮಂದಣ್ಣ, ಮಂದಪAಡ ವಿನು ಅಯ್ಯಣ್ಣ, ಕುಂಚೆಟ್ಟಿರ ರಮೇಶ್, ಮಂದಪAಡ ನಾಣಯ್ಯ, ಚಿಯಬೇರ ರೋಶನ್ ತಮ್ಮಯ್ಯ, ಪಟ್ಟಮಾಡ ಅಶೋಕ್, ಅಳ್ಮಂಡ ನೆಹರು, ಕೊಟ್ಟುಕತ್ತೀರ ಅರುಣ್ ಅಪ್ಪಯ್ಯ, ಮಂದಪAಡ ಅರಸು, ಮಂಗೇರಿ ಸೋಮಯ್ಯ, ಮಂದಪAಡ ವಿಹಾನ್ ದೇವಯ್ಯ, ಕೇಕಡ ಅಪ್ಪಣ್ಣ, ಮೊಟ್ಟೆಯಂಡ ಮೊಣ್ಣಪ್ಪ, ಮೊಟ್ಟೆಯಂಡ ಕುಟ್ಟಪ್ಪ, ಇಂದAಡ ಗಣೇಶ್, ಬಾಚರಣಿಯಂಡ ಕಾರ್ಯಪ್ಪ, ಬಾಚರಣಿಯಂಡ ಹ್ಯಾರಿ, ಮಂದಪAಡ ಜೀವನ್, ಬಾಚರಣಿಯಂಡ ಗಣಪತಿ, ಬೊಳರ್ಪಂಡ ನೆಹರು ಪೂವಯ್ಯ, ಅಜ್ಜಿನಂಡ ಸುರೇಶ್, ಬಡ್ಡಿರ ನಂದ ಕುಮಾರ್, ಅಯ್ಯಂಡ ಹರೀಶ್, ಕೊಟ್ಟುಕತ್ತೀರ ಗೌತಮ್ ಪೊನ್ನಣ್ಣ, ಕೇಕಡ ಸುಬ್ಬಯ್ಯ, ಅಜ್ಜಿನಂಡ ವಿಶಾಕ್, ತೇಲಪಂಡ ಅಯ್ಯಪ್ಪ, ಅಯ್ಯಂಡ ಗಣೇಶ್, ಅಯ್ಯಂಡ ಪೆಮ್ಮಯ್ಯ, ಬಾಚರಣಿಯಂಡ ಲವ, ಪೊಡನೊಳಂಡ ಸುಬ್ಬಯ್ಯ, ತೇಲಪಂಡ ಸುಬ್ಬಯ್ಯ, ಅಯ್ಯಂಡ ರಾಮಕೃಷ್ಣ, ಪಟ್ಟಮಾಡ ಪ್ರಧಾನ್ ತಿಮ್ಮಯ್ಯ, ಪೊಡನೊಳಂಡ ಜೀವನ್, ಬಡ್ಡಿರ ಸುರೇಶ್, ಕೇಕಡ ಯಶಸ್ಸು, ಕೇಕಡ ಬೋಪಣ್ಣ, ಬಡ್ಡಿರ ಗಣಪತಿ, ಅಜ್ಜಿನಂಡ ಜಗದೀಶ್, ಕುಂಚೆಟ್ಟಿರ ಕಾರ್ಯಪ್ಪ, ಬಡ್ಡಿರ ಕಾರ್ತಿಕ್, ಮೇರಿಯಂಡ ಕವಿನ್ ಕಾರ್ಯಪ್ಪ, ಕೇಕಡ ಧರ್ಮಯ್ಯ, ಅಜ್ಜಿನಂಡ ಗಿರಿ, ಪಟ್ಟಮಾಡ ವಿಜು, ಬಡ್ಡಿರ ಸೋಮಣ್ಣ, ಚೌರೀರ ಅಜಿತ್, ಇಂದAಡ ಸುಬ್ಬಯ್ಯ, ಅಯ್ಯಂಡ ಅಯ್ಯಪ್ಪ, ಪರ್ವಂಡ ಪ್ರದೀಪ್, ಮೊಟ್ಟೆಯಂಡ ಕಾರ್ಯಪ್ಪ, ಮೊಟ್ಟೆಯಂಡ ತೀರ್ಥ, ಮೊಟ್ಟೆಯಂಡ ಪಾರ್ಥ ಭಾಗವಹಿಸಿದ್ದರು.