ಮಡಿಕೇರಿ, ಅ. ೩ : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ದಶಮಂಟಪಗಳ ಶೋಭಾಯಾತ್ರೆ ನಿನ್ನೆ ರಾತ್ರಿ ವಿಜೃಂಭಣೆಯಿAದ ನಡೆಯಿತು. ವಿವಿಧ ಕಥಾ ಸಾರಾಂಶಗಳನ್ನು ಅಳವಡಿಸಿಕೊಂಡಿದ್ದ ಮಂಟಪ ಸಮಿತಿಗಳು ಅತ್ಯಾಕರ್ಷಕ ಧ್ವನಿ ಬೆಳಕಿನೊಂದಿಗೆ ಕಥಾ ಸಾರಾಂಶವನ್ನು ಪ್ರಸ್ತುತಪಡಿಸುವ ಮೂಲಕ ಮಂಜಿನ ನಗರಿಯಲ್ಲಿ ದೇವಲೋಕವನ್ನೇ ಸೃಷ್ಟಿಸಿದವು. ಒಂದಕ್ಕಿAತ ಒಂದು ವಿಭಿನ್ನವಾಗಿದ್ದ ಮಂಟಪಗಳಲ್ಲಿ ಪ್ರಥಮ ಬಹುಮಾನವನ್ನು ಶ್ರೀ ಕೋಟೆ ಮಹಾಗಣಪತಿ ಹಾಗೂ ಶ್ರೀ ಕೋಟೆ ಮಾರಿಯಮ್ಮ ಮಂಟಪಗಳು ಜಂಟಿಯಾಗಿ ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಶ್ರೀ ಕಂಚಿ ಕಾಮಾಕ್ಷಿ ಮಂಟಪ ಹಾಗೂ ತೃತೀಯ ಬಹುಮಾನವನ್ನು ಶ್ರೀ ದಂಡಿನ ಮಾರಿಯಮ್ಮ ಮಂಟಪ ಪಡೆದುಕೊಂಡಿತು.

ಕೋಟೆ ಮಹಾಗಣಪತಿ ದೇವಾಲಯ ಮಂಟಪ ಶ್ರೀ ವಿಘ್ನರಾಜನಿಂದ ಮಮತಾಸುರನ ಸಂಹಾರ ಎಂಬ ಕಥಾ ಸಾರಾಂಶವನ್ನು ಪ್ರಸ್ತುತಪಡಿಸಿದರೆ, ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಮಂಟಪ ದೇವದೇವತೆಗಳ ಕಾಳಗ, ಶರಭವತಾರ ಪ್ರತ್ಯುಂಗ ದೇವಿಯಿಂದ ನರಸಿಂಹನ ಉಗ್ರ ಶಮನ ಎಂಬ ಕಥಾ ಸಾರಾಂಶವನ್ನು ಪ್ರದರ್ಶಿಸಿತು. ಪರಶುರಾಮನಿಂದ ಕಾರ್ತಿಕೆವೀರನ ಸಂಹಾರ ಕಥಾ ಸಾರಾಂಶವನ್ನು ಶ್ರೀ ಕಂಚಿ ಕಾಮಾಕ್ಷಿ ದೇವಾಲಯ , ಪರಶಿವನಿಂದ ಅಂಧಕಾಸುರನ ಸಂಹಾರ ಕಥಾ ಸಾರಾಂಶವನ್ನು ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಪ್ರಸ್ತುತಪಡಿಸಿ ಬಹುಮಾನಕ್ಕೆ ಭಾಜನವಾಯಿತು. ಇನ್ನುಳಿದಂತೆ ಶ್ರೀಕೃಷ್ಣನಿಂದ ಗೀತೋಪದೇಶ ಕಥಾ ಸಾರಾಂಶದೊAದಿಗೆ ಪೇಟೆ ಶ್ರೀ ರಾಮಮಂದಿರ, ಮಹಾಸಾದ್ವಿ ಸೀತೆಯ ಚಂಡಿಕಾವತಾರ ಕಥಾ ಸಾರಾಂಶದೊAದಿಗೆ ಶ್ರೀ ಚೌಡೇಶ್ವರಿ, ಶ್ರೀ ರಾಮಾಂಜನೇಯ ವೈಭವ ಕಥಾ ಸಾರಾಂಶದೊAದಿಗೆ ದೇಚೂರು ಶ್ರೀ ರಾಮಮಂದಿರ, ಶ್ರೀ ಕ್ಷೇತ್ರ ಆದಿಚುಂಚನಗಿರಿ ಕಾಲಭೈರವ ಮಹಾತ್ಮೆ ಕಥಾ ಸಾರಾಂಶದೊAದಿಗೆ ಶ್ರೀ ಕೋದಂಡ ರಾಮ, ಸಂಜೀವಿನಿ ಸಸ್ಯಕ್ಕಾಗಿ ದ್ರೋಣಗಿರಿಯನ್ನು ಹೊತ್ತು ತರುವ ಆಂಜನೇಯ ಕಥಾ ಸಾರಾಂಶದೊAದಿಗೆ ಶ್ರೀ ಕರವಲೆ ಭಗವತಿ ಮಹಿಷ ಮರ್ದಿನಿ, ಪರಶಿವನಿಂದ ಜಲಾಂಧರನ ವಧೆ ಕಥಾ ಸಾರಾಂಶದೊAದಿಗೆ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು. ಮೊದಲ ಬಹುಮಾನವಾಗಿ ೨೪ ಗ್ರಾಂ ಚಿನ್ನದ ನಾಣ್ಯ, ದ್ವಿತೀಯ ಬಹುಮಾನವಾಗಿ ೨೦ ಗ್ರಾಂ ಚಿನ್ನದ ನಾಣ್ಯ, ತೃತೀಯ ಬಹುಮಾನವಾಗಿ ೧೬ ಗ್ರಾಂ ಚಿನ್ನದ ನಾಣವನ್ನು ನೀಡಲಾಯಿತು. ಸಮಾಧಾನಕರ ಬಹುಮಾನವಾಗಿ ಬೆಳ್ಳಿಯ ಕಲಶ ಚೆಂಬು, ಕರಗಗಳಿಗೆ ಬೆಳ್ಳಿ ಲೋಟಗಳನ್ನು ವಿತರಿಸಲಾಯಿತು.

ಫಲಿತಾಂಶ ಬಯಲು...!

ದಶಮಂಟಪಗಳ ತೀರ್ಪುಗಾರಿಕೆ ಬಳಿಕ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಮಂಟಪಗಳಿಗೆ (ಏಳನೇ ಪುಟಕ್ಕೆ)

(ಮೊದಲ ಪುಟದಿಂದ) ಬಹುಮಾನ ವಿತರಣೆಗೂ ಮುನ್ನವೇ ಒಂದೆರಡು ಸಮಿತಿಗಳು ಜೈಕಾರ ಹಾಕಲು ಆರಂಭಿಸಿದವು. ಈ ನಡುವೆ ವೇದಿಕೆ ಏರಿದ ಕರವಲೆ ಭಗವತಿ ಮಂಟಪ ಸಮಿತಿಯವರು ವೇದಿಕೆಯಲ್ಲಿದ್ದ ಪರಿಕರಗಳನ್ನು ಎಸೆದು ದಶಮಂಟಪ ಸಮಿತಿ ವಿರುದ್ಧ ಬಹಿರಂಗವಾಗಿ ಅಸಮಾಧಾನವನ್ನು ಹೊರಹಾಕಿದರು. ಈ ಸಂದರ್ಭ ಪೊಲೀಸರು ಮಧ್ಯಪ್ರವೇಶಿಸಿ ಅವರುಗಳನ್ನು ವೇದಿಕೆಯಿಂದ ಕೆಳಗಿಳಿಸಿದರು. ಬಳಿಕ ವೇದಿಕೆ ಮುಂಭಾಗ ಜಮಾಯಿಸಿದ ಕರವಲೆ ಭಗವತಿ ಸಮಿತಿಯವರು ಮೋಸ, ಮೋಸ ಎಂದು ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ನೀವುಗಳೇ ತೀರ್ಪುಗಾರರನ್ನು ಆಯ್ಕೆ ಮಾಡಿದ್ದೀರಾ; ಹೀಗಿರುವಾಗ ತೀರ್ಪುಗಾರರ ತೀರ್ಪನ್ನು ನೀವು ಒಪ್ಪಿಕೊಳ್ಳಬೇಕು. ಸರ್ಕಾರದ ಅನುದಾನದಲ್ಲಿ ಮಂಟಪಗಳಿಗೂ ಹಣ ನೀಡಲಾಗುತ್ತಿದೆ. ಈ ರೀತಿಯ ವರ್ತನೆಗಳಿಂದ ಸರ್ಕಾರದಿಂದ ಅನುದಾನ ಕಡಿತಗೊಂಡರೆ ಇದಕ್ಕೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರಲ್ಲದೆ ಸರ್ಕಾರ ನಮಗೆ ನೀಡುವ ಗೌರವವನ್ನು ನಾವು ಕಳೆದುಕೊಳ್ಳಬಾರದು ಎಂದು ನುಡಿದರು. ಬಳಿಕ ಬಹುಮಾನ ವಿತರಣೆ ನಡೆಯಿತು. ಕಲಾ ಸಂಭ್ರಮ ವೇದಿಕೆ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎಸ್ಪಿ ರಾಮರಾಜನ್, ಎಎಸ್ಪಿ ದಿನೇಶ್ ಕುಮಾರ್ ಅವರುಗಳು ಕೂಡ ವೇದಿಕೆ ಬಳಿ ಕರ್ತವ್ಯದಲ್ಲಿದ್ದರು.

ನಗರಸಭೆ ಅಧ್ಯಕ್ಷೆ, ದಸರಾ ಸಮಿತಿ ಅಧ್ಯಕ್ಷೆ ಪಿ. ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ, ಕಾರ್ಯದರ್ಶಿ ಕಾನೆಹಿತ್ಲು ಮೊಣ್ಣಪ್ಪ, ಸಹಕಾರ್ಯದರ್ಶಿ ಮುದ್ದುರಾಜ್, ಮತ್ತಿತರರು ಬಹುಮಾನ ವಿತರಣಾ ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು .- ಉಜ್ವಲ್ ರಂಜಿತ್, ಚಿತ್ರಗಳು : ಲಕ್ಷಿö್ಮÃಶ್