ಗೋಣಿಕೊಪ್ಪ ವರದಿ, ಅ. ೧: ಕ್‌ಗ್ಗಟ್ಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಸಂಘಟನೆ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ಇಂದಿನಿAದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಹಾಕಿ ಟೂರ್ನಿಗೆ ಚಾಲನೆ ನೀಡಲಾಗುತ್ತದೆ.

೨೨ ತಂಡಗಳು ಭಾಗವಹಿಸುತ್ತಿದ್ದು, ತಂಡದಲ್ಲಿ ೪ ಅತಿಥಿ ಆಟಗಾರರು ಆಡಲಿದ್ದಾರೆ. ಬೆ. ೧೧.೩೦ ಗಂಟೆಗೆ ಉದ್ಘಾಟನೆ ನೆರವೇರಲಿದೆ. ಹಿರಿಯರಾದ ಕರ್ನಲ್ ದೇಯಂಡ ಎಸ್ ಪೂವಯ್ಯ, ಕರ್ನಲ್ ಕೋಟ್ರಮಡ ನರೇಂದ್ರ, ನಿವೃತ್ತ ಸಿಆರ್‌ಪಿಎಫ್ ಉಪ ನಿರೀಕ್ಷಕಿ ಚೋಯಮಾಡಂಡ ಪವಿತ್ರ ಸನ್ನು ಭಾಗವಹಿಸಲಿದ್ದಾರೆ.

ಕ್‌ಗ್ಗಟ್ಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಸಂಘಟನೆ ಪ್ರಮುಖರಾದ ಮಾಚಿಮಾಡ ಕಾರ್ಯಪ್ಪ, ಮಲ್ಲಮಾಡ ಸನತ್, ಚಿರಿಯಪಂಡ ಪವನ್ ಬಿದ್ದಪ್ಪ, ಪೆಮ್ಮಂಡ ಧರ್ಮಜ, ಪೋರಂಗಡ ಪೃಥ್ವಿ, ಮೇಚಮಾಡ ಅಪ್ಪಚ್ಚು ಸೇರಿದಂತೆ ಉತ್ಸಾಹ ಯುವಕರು ತೊಡಗಿಕೊಂಡಿದ್ದಾರೆ.