ಮಡಿಕೇರಿ, ಅ. ೧: ಅಂತರ ರಾಷ್ಟಿçÃಯ ಕಾಫಿ ದಿನಾಚರಣೆ ಅಂಗವಾಗಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ (ಅWಅಂಃ) ವತಿಯಿಂದ ಉಚಿತ ಕಾಫಿ ವಿತರ ಣೆಯ ಮೂಲಕ ಕಾಫಿ ಸೇವನೆಯ ಮಹತ್ವದ ಪರಿಚಯದೊಂದಿಗೆ ಕಾಫಿಯನ್ನು ಉತ್ತೇಜಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ, ಭಾರತೀಯ ಕಾಫಿ ಮಂಡಳಿ, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ (ಸಿಪಿಎ) ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ (ಕೆಪಿಎ) ಉಪಾಸಿ ಸಹಯೋಗದಲ್ಲಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಕಾಫಿ ವಿತರಣೆಯೊಂದಿಗೆ ಕಾಫಿಯನ್ನು ಉತ್ತೇಜಿಸುವ ಪ್ರಯತ್ನ ಮಾಡಲಾಯಿತು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.
ಈ ಸಂದರ್ಭ ನಡೆದ ಸಮಾರಂಭದಲ್ಲಿ ಮಹಿಳಾ ಜಾಗೃತಿ ಸಂಸ್ಥೆಯ ಕಾರ್ಯದರ್ಶಿ ಅಪ್ಪನೆರವಂಡ ಅನಿತಾ ನಂದಾ, ಖಜಾಂಚಿ ಕುಟ್ಟೇಟಿರ ಕುಮಾರಿ ಕುಟ್ಟಪ್ಪ, ಮಮತಾ ಮಹೇಂದ್ರು, ಕಾಯಪಂಡ ಯಶು ತಮ್ಮಯ್ಯ, ನಿಷಾ ಮೋಹನ್, ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಲೋಕೇಶ್, ಡಾ. ಮೋಹನ್ ಅಪ್ಪಾಜಿ, ಕಾಫಿ ಮಂಡಳಿ ಸದಸ್ಯ ಟಿ.ಎ. ಕಿಶೋರ್ ಕುಮಾರ್, ಸಿ.ಪಿ.ಎ. ಅಧ್ಯಕ್ಷ ಅಪ್ಪನೆರವಂಡ ನಂದಾ ಬೆಳ್ಯಪ್ಪ, ಕೆ.ಪಿ.ಎ.ಯ ಮಾತಂಡ ಸಿ. ಕಾರ್ಯಪ್ಪ, ಸಿಪಿಎ ಮಾಜಿ ಅಧ್ಯಕ್ಷ ನಂದಿನೆರವAಡ ಅಪ್ಪಯ್ಯ, ಕಾಫಿ ಮಂಡಳಿ ಉಪನಿರ್ದೇಶಕ ಚಂದ್ರಶೇಖರ್ ಅವರುಗಳು ಭಾಗಿಗಳಾಗಿದ್ದರು.
ಈ ಸಂದರ್ಭ ಮಾತನಾಡಿದ ಅನಿತಾ ನಂದಾ ಅವರು ಕಾಫಿ ಸೇವನೆಯ ಮಹತ್ವ, ಉತ್ಪಾದನೆಯ ಸವಾಲು ಕಾಫಿ ಕೆಫೆಗಳ ಪ್ರಯೋಜನ, ಯುವ ಜನಾಂಗದಲ್ಲಿ ಕಾಫಿ ಉತ್ತೇಜಿಸುವ ವಿಚಾರದ ಬಗ್ಗೆ ಮಾಹಿತಿ ನೀಡಿದರು. ಡೀನ್ ಲೋಕೇಶ್ ಕುಮಾರ್ ಅವರು ಕಾಫಿ ಸೇವನೆಯ ಪ್ರಯೋಜನದ ಕುರಿತು ವಿವರಿಸಿದರು. ನಂದಾ ಬೆಳ್ಯಪ್ಪ ೪ನಾಲ್ಕನೇ ಪುಟಕ್ಕೆ(ಮೊದಲ ಪುಟದಿಂದ) ಸೇರಿದಂತೆ ಇತರರು ತಮ್ಮ ಅನಿಸಿಕೆ - ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ಅಪರಾಹ್ನದ ತನಕ ಸುಮಾರು ಒಂದು ಸಾವಿರಕ್ಕೂ ಅಧಿಕ ಕಪ್‌ಗಳಷ್ಟು ಕಾಫಿಯನ್ನು ಉಚಿತವಾಗಿ ವಿತರಿಸಲಾಯಿತು.
ಮಾಲ್ದಾರೆಯಲ್ಲಿ...
ಮಾಲ್ದಾರೆ ಪಟ್ಟಣದಲ್ಲೂ ಅಂತರರಾಷ್ಟಿçÃಯ ಕಾಫಿ ದಿನಾಚರಣೆ ಪ್ರಯುಕ್ತ ಉಚಿತ ಕಾಫಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಹಿಳಾ ಕಾಫಿ ಜಾಗೃತಿ ಸಂಸ್ಥೆಯ ಸುಂಟಿಕೊಪ್ಪ ವಲಯ ಪ್ರಮುಖರಾದ ಕಾಯಪಂಡ ಸುಮಾ ತಿಮ್ಮಯ್ಯ, ಬಿದ್ದಂಡ ಸರೋಜಿನಿ, ಕಾಫಿ ಮಂಡಳಿಯ ಲೈಸೆನ್ ಆಫೀಸರ್ ಸುಲೋಚನ, ಸಿ.ಪಿ.ಎ.ಯ ರೋಮಿ ರೊಸಾರಿಯೋ, ಪವನ್ ಮುತ್ತಪ್ಪ, ಮತ್ತಿತರರು ಪಾಲ್ಗೊಂಡಿದ್ದರು. ಸೆ. ೩೦ರಂದು ಪೊನ್ನಂಪೇಟೆ ಸಿಐಟಿ ಕಾಲೇಜಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ಸುಮಾರು ೮೦೦ ಕಪ್‌ಗಳಷ್ಟು ಕಾಫಿ ವಿತರಿಸಲಾಯಿತು