ಮಡಿಕೇರಿ, ಅ. ೧: ಕೊಡಗು ಜಿಲ್ಲೆಯಲ್ಲಿ ಆಯುಧ ಪೂಜೆ-ವಿಜಯದಶಮಿಯ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ವಿಜಯದಶಮಿಗೂ ಮುನ್ನಾದಿನ ನಡೆಯುವ ಆಯುಧ ಪೂಜೋತ್ಸವ ಇಂದು ಜಿಲ್ಲೆಯಾದ್ಯಂತ ವಿಜೃಂಭಣೆಯೊAದಿಗೆ ಜರುಗಿತು. ಪ್ರಸಕ್ತ ವರ್ಷ ಈ ಹಬ್ಬ ಮಳೆಯ ಸನ್ನಿವೇಶದ ನಡುವೆಯೇ ಆಚರಿಸಲ್ಪಟ್ಟಿದೆ.

ಬುಧವಾರದಂದು ತುಂತುರು ಮಳೆ ಸಣ್ಣ ಪ್ರಮಾಣದಲ್ಲಿ ಕಂಡು ಬಂದ ಸೂರ್ಯಕಿರಣಗಳ ನಡುವೆ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಜನರು ತೊಡಗಿಸಿಕೊಂಡಿದ್ದರು. ಬಹುತೇಕ ಅಂಗಡಿ-ಕಟ್ಟಡ-ಮಳಿಗೆಗಳು ಅಲಂಕೃತಗೊAಡಿರುವುದು ಹೆಚ್ಚಿನ ಕಳೆ ತಂದು ಕೊಟ್ಟಿದ್ದರೆ. ವಾಹನಗಳ ಅಲಂಕಾರವೂ ಗಮನ ಸೆಳೆಯುವಂತಿದ್ದವು. ವಿವಿಧ ದೇವಾಲಯಗಳು ಸೇರಿದಂತೆ ಅಲ್ಲಲ್ಲಿ ವಾಹನ ಪೂಜೆ ಅಂಗಡಿ ಮುಂಗಟ್ಟು, ಕಚೇರಿಗಳಲ್ಲಿ ಆಯುಧ ಪೂಜೆ ನೆರವೇರಿದವು. ವಿವಿಧ ವಾಹನ ಮಾಲೀಕರು, ಚಾಲಕರ ಸಂಘದ ಆಶ್ರಯದಲ್ಲಿ ವೈಭವಯುತ ಕಾರ್ಯಕ್ರಮಗಳು ಆಯೋಜಿತಗೊಂಡಿದ್ದವು. ಆಯುಧ ಪೂಜಾ ಸಂಭ್ರಮ ವಿವಿಧಡೆಗಳಲ್ಲಿ ಸಾರ್ವತ್ರಿಕವಾದ ಕಾರ್ಯಕ್ರಮಗಳು,

ಸಭೆ ಸಮಾರಂಭ, ಸನ್ಮಾನ, ಸಾಂಸ್ಕೃತಿಕ ಕಲರವದೊಂದಿಗೆ ಜಿಲ್ಲೆಯಾದ್ಯಂತ ಆಚರಿಸಲ್ಪಟ್ಟಿದೆ.

ವೀರಾಜಪೇಟೆ, ಸುಂಟಿಕೊಪ್ಪ, ಸಿದ್ದಾಪುರ, ಸೋಮವಾರಪೇಟೆ, ಮಾದಾಪುರ, ಮುರ್ನಾಡು ಸೇರಿದಂತೆ ಕೆಲವಾರು ಪ್ರಮುಖ ಪಟ್ಟಣಗಳಲ್ಲಿ ವರ್ಷಂಪ್ರತಿ ಆಯುಧ ಪೂಜಾ ಕಾರ್ಯಕ್ರಮ ವೈಭಯುತವಾಗಿ ಜರುಗುತ್ತಿದ್ದು, ಈ ಬಾರಿಯೂ ಸಂಭ್ರಮ ಸಡಗರ ಭಕ್ತಿ ಭಾವದೊಂದಿಗೆ ನಡೆಯಿತು.

ದಸರಾ ಉತ್ಸವ ಜರುಗಲಿರುವ ಮಡಿಕೇರಿ ಹಾಗೂ ಗೋಣಿಕೊಪ್ಪಲುವಿನಲ್ಲೂ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಅಂಗಡಿ ಮುಂಗಟ್ಟು, ಕಟ್ಟಡಗಳು ವಿದ್ಯುತ್ ಅಲಂಕಾರ ತಳಿರು - ತೋರಣಗಳೊಂದಿಗೆ ಕಂಗೊಳಿಸುತ್ತಿವೆ. ವಾಹನಗಳ ಅಲಂಕಾರವು ಬಗೆಬಗೆಯ ರೀತಿಯಲ್ಲಿ ಜನಮನ ಸೂರೆಗೊಂಡವು.

ಕೆಲವಾರು ಕಡೆಗಳಲ್ಲಿ ಸಾರ್ವಜನಿಕ ಸಭೆ, ಸಮಾರಂಭಗಳು ನಿಗದಿಯಾಗಿದ್ದವು. ಆಯುಧ ಪೂಜೆಯ ಸಂಭ್ರಮ ತಾ.೨ರಂದು (ಇಂದು) ನಡೆಯುವ ವಿಜಯದಶಮಿಗೆ ಹೆಚ್ಚಿನ ಕಳೆ ತಂದುಕೊಟ್ಟಿದೆ. ಮಳೆಯ ಸನ್ನಿವೇಶವಿದ್ದರೂ ಜನತೆ ಈ ಆಚರಣೆಯನ್ನು ಉತ್ಸುಕತೆಯಿಂದಲೇ ಆಚರಿಸಿದ್ದಾರೆ.

ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ತಮ್ಮ ವೀರಾಜಪೇಟೆ ನಿವಾಸದಲ್ಲಿ ಆಯುಧ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಕಚೇರಿಯಲ್ಲಿ ಪೂಜೆಯೊಂದಿಗೆ ವಾಹನ ಪೂಜೆಯನ್ನು ಅಭಿಮಾನಿಗಳೊಂದಿಗೆ ನೆರವೇರಿಸಿ ಪ್ರಸಾದ ವಿತರಣೆಯೊಂದಿಗೆ ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಈ ಸಂದರ್ಭ ಶಾಸಕರ ಆಪ್ತ ಬಳಗದ ಸಿಬ್ಬಂದಿ ವರ್ಗದವರು, ಪಕ್ಷದ ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ವೀರಾಜಪೇಟೆ, ಮಡಿಕೇರಿ, ಸೋಮವಾರಪೇಟೆ, ಗೋಣಿಕೊಪ್ಪ, ಸಿದ್ದಾಪುರ, ಸುಂಟಿಕೊಪ್ಪ, ಮಾದಾಪುರ, ಮೂರ್ನಾಡು ಮತ್ತಿತರ ಕಡೆಗಳಲ್ಲಿ ಬುಧವಾರ ತಡ ರಾತ್ರಿಯ ತನಕವು ವೈವಿದ್ಯಮಯ ಕಾರ್ಯಕ್ರಮಗಳು ಜರುಗಿದವು.ಐಗೂರು : ಹೊಸ ತೋಟದ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿAದ ಆಯುಧ ಪೂಜೆಯನ್ನು ಆಚರಿಸಲಾಯಿತು.ಸಿದ್ದಾಪುರ: ಅಮ್ಮತ್ತಿಯ ಉಪತಹಶೀಲ್ದಾರ್ ಕಚೇರಿಯಲ್ಲಿ ಆಯುಧ ಪೂಜೆಯನ್ನು ಆಚರಿಸಲಾಯಿತು. ಅಮ್ಮತ್ತಿ ಹೋಬಳಿಯ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ನೇತೃತ್ವದಲ್ಲಿ ನಡೆದ ಪೂಜೆಯ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಶಿವಕುಮಾರ್, ಮಂಜುನಾಥ್, ಸಿಫಾನತ್, ಇನ್ನಿತರರು ಹಾಜರಿದ್ದರು.ಸಿದ್ದಾಪುರ: ಅಮ್ಮತ್ತಿಯ ಉಪತಹಶೀಲ್ದಾರ್ ಕಚೇರಿಯಲ್ಲಿ ಆಯುಧ ಪೂಜೆಯನ್ನು ಆಚರಿಸಲಾಯಿತು. ಅಮ್ಮತ್ತಿ ಹೋಬಳಿಯ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ನೇತೃತ್ವದಲ್ಲಿ ನಡೆದ ಪೂಜೆಯ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಶಿವಕುಮಾರ್, ಮಂಜುನಾಥ್, ಸಿಫಾನತ್, ಇನ್ನಿತರರು ಹಾಜರಿದ್ದರು.ಕೂಡಿಗೆ: ಕುಶಾಲನಗರ ತಾಲೂಕು ವ್ಯಾಪ್ತಿಯ ವಿವಿಧೆಡೆ ಶ್ರದ್ಧಾಭಕ್ತಿಯಿಂದ ವಿವಿಧ ಸಂಘ ಸಂಸ್ಥೆಯವರು, ಕೈಗಾರಿಕಾ ಘಟಕದವರು ಆಯುಧ ಪೂಜೋತ್ಸವನ್ನು ನೆರವೇರಿಸಿದರು.

ತಾಲೂಕು ವ್ಯಾಪ್ತಿಯ ಅಂಗಡಿ ಮಾಲೀಕರು ಮತ್ತು ಗ್ರಾಮಾಂತರ ಪೊಲೀಸ್ ಠಾಣೆ, ಸಂಚಾರಿ ಪೊಲೀಸ್ ಠಾಣೆ ಸೇರಿದಂತೆ ಕೈಗಾರಿಕಾ ಘಟಕಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊAಡಿದವು.

ಕೈಗಾರಿಕಾ ಕೇಂದ್ರದ ವಿವಿಧ ಘಟಕಗಳಲ್ಲಿ ಕಾರ್ಮಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ಚೆಯ್ಯಂಡಾಣೆ: ಪಟ್ಟಣದಲ್ಲಿ ಆಯುಧ ಪೂಜೆಯನ್ನು ಆಚರಿಸಲಾಯಿತು. ಚೆಯ್ಯಂಡಾಣೆ ಪಟ್ಟಣದಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ರಾಜೇಶ್ ಅಚ್ಚಯ್ಯ ನೇತೃತ್ವದಲ್ಲಿ ನಡೆದ ಸಾಮೂಹಿಕ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಕೋಕೇರಿ ದೇವಸ್ಥಾನದ ಅರ್ಚಕರಾದ ಪೃಥ್ವಿ ಪೂಜಾ ನೇತೃತ್ವ ವಹಿಸಿದರು.

ಈ ಸಂದರ್ಭ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.