ಚೆಯ್ಯಂಡಾಣೆ, ಅ. ೧: ಕೊಕೇರಿ ನಂ. ೧೯೩ನೇ ವಿವಿಧೋದ್ದೇಶ ಸಹಕಾರ ದವಸ ಭಂಡಾರದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.

ಕೊಕೇರಿ ಕಾವೇರಿ ಮಹಿಳಾ ಸಮಾಜ ಕಟ್ಟಡದ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಚೇನಂಡ ಗಿರೀಶ್ ಪೂಣಚ್ಚ ವಹಿಸಿದ್ದರು. ನಂತರ ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು.

ನಂತರ ಮಾತನಾಡಿದ ಗಿರೀಶ್ ಪೂಣಚ್ಚ, ೨೦೨೪-೨೫ನೇ ಸಾಲಿನಲ್ಲಿ ನಡೆದ ಕಾರ್ಯ ಕಲಾಪಗಳ ವಿವರಣೆಗಳನ್ನು ನೀಡಿದರು. ಸಂಘದ ಉನ್ನತಿಗಾಗಿ ಹಲವಾರು ಚರ್ಚೆಗಳು ನಡೆದವು.

ಮರಣ ನಿಧಿ ಹಾಗೂ ನೂತನ ಸದಸ್ಯರನ್ನು ಸೇರಿಸುವ ಬಗ್ಗೆ ಚರ್ಚಿಸಲಾಯಿತು.ಸಂಘದ ಏಳಿಗೆಗಾಗಿ ಹಲವಾರು ಚರ್ಚೆಗಳು ನಡೆದವು. ೧೦೭ ಸದಸ್ಯರಿರುವ ಸಂಘದಲ್ಲಿ ೬೫ ಸದಸ್ಯರು ಪಾಲ್ಗೊಂಡಿದ್ದರು.

ಈ ಸಂದರ್ಭ ಉಪಾಧ್ಯಕ್ಷ ಚೇರುವಾಳಂಡ ಲವೀನ್, ಕಾರ್ಯದರ್ಶಿ ಕುಮ್ಮಂಡ ರಾಜೇಶ್ ಉತ್ತಯ್ಯ, ನಿರ್ದೇಶಕರಾದ ಬಿದ್ದಂಡ ರವಿ ತಿಮ್ಮಯ್ಯ, ಚೇನಂಡ ನಂದ ಜಗದೀಶ್, ಮಚ್ಚಂಡ ಸಾಬು ಮೇದಪ್ಪ, ಪೊನ್ನಚಂಡ ಅರುಣ್ ಮುದ್ದಪ್ಪ, ಪೆಮ್ಮಂಡ ಗೌರಮ್ಮ, ಬಿದ್ದಂಡ ರೋಹಿಣಿ, ಮೂಡೆರ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

ಪೆಮ್ಮಂಡ ಗೌರಮ್ಮ ಪ್ರಾರ್ಥಿಸಿ, ಗಿರೀಶ್ ಪೂಣಚ್ಚ ಸ್ವಾಗತಿಸಿ, ಬಿದ್ದಂಡ ರವಿ ತಿಮ್ಮಯ್ಯ ವಂದಿಸಿದರು.