ಮಡಿಕೇರಿ, ಅ. ೧: ತೋಟದ ನಡುವೆ ವ್ಯಕ್ತಿಯ ಮೃತದೇಹ ಕೊಳೆತು ಅದರ ಅಸ್ಥಿಪಂಜರ ಪತ್ತೆಯಾಗಿದೆ. ಬೋಯಿಕೇರಿಯ ನಂದಿನೆರವAಡ ಐನ್‌ಮನೆಗೆ ತೆರಳುವ ಮಾರ್ಗದಲ್ಲಿರುವ ತಿಮ್ಮಯ್ಯ ಹಾಗೂ ಕುಟ್ಟಪ್ಪ ಅವರ ಕಾಫಿ ತೋಟದಲ್ಲಿ ವ್ಯಕ್ತಿಯ ದೇಹದ ಮೂಳೆ ದೊರೆತ್ತಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಸ್ಥಿ ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ದೇಹದ ಮೇಲೆ ಬೂದ್ ಬಣ್ಣದ ಪ್ಯಾಂಟ್ ಇದ್ದು, ಮೃತವ್ಯಕ್ತಿಗೆ ಅಂದಾಜು ೪೦ ರಿಂದ ೫೦ ವರ್ಷವಿರಬಹುದು ಎಂದು ಅಂದಾಜಿಸಲಾಗಿದೆ. ಪ್ರಕರಣಗಳಿದ್ದಲ್ಲಿ ಹಾಗೂ ಈ ಕುರುಹುಗಳಿಗೆ ಸಂಬAಧಿಸಿದ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ೯೪೮೦೮೦೪೯೪೬ ಸಂಖ್ಯೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಮ್ ಸಂಖ್ಯೆ ೦೮೨೭೨೨೨೮೩೩೦ ಸಂಖ್ಯೆಗೆ ಕರೆ ಮಾಡಿ ಮಾಹಿತಿ ತಿಳಿಸಲು ಪೊಲೀಸರು ಮನವಿ ಮಾಡಿದ್ದಾರೆ.