ಮಡಿಕೇರಿ ಸೆ. ೨೧: ಮಾನಸಿಕ ಅಸ್ವಸ್ಥರ ಆರೈಕೆಗಾಗಿ ‘ಮಾನಸಧಾರ’ ಯೋಜನೆಯಡಿ ಮಡಿಕೇರಿ ನಗರದ ರಾಣಿಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರವೊAದು ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಅನುದಾವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ನಗರಸಭಾ ಸದಸ್ಯ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಉಪಾಧ್ಯಕ್ಷ ಎಂ.ಕೆ.ಮನ್ಸೂರ್ ಆಲಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸ್ನೇಹಾಶ್ರಯ ಯೂಥ್ ಟ್ರಸ್ಟ್ ಮತ್ತು ಐಶ್ವರ್ಯ ಚಾರಿಟೇಬಲ್ ಟ್ರಸ್ಟ್ ಮೂಲಕ ನಗರದ ರಾಣಿಪೇಟೆಯಲ್ಲಿ ‘ಮಾನಸಧಾರ’ ಕೇಂದ್ರವನ್ನು ನಡೆಸುತ್ತಿದೆ. ವಿಶ್ವನಾಥ್ ಎಂಬುವವರ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ‘ಮಾನಸಧಾರ’ ಯೋಜನೆಯ ಪ್ರಕಾರ ಸುಮಾರು ೪೦ ಮನೋರೋಗಿಗಳು ಹಾಗೂ ಅಗತ್ಯ ಸಿಬ್ಬಂದಿ ವರ್ಗ ಸುಸಜ್ಜಿತ ಕಟ್ಟಡದೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ವಿಪರ್ಯಾಸವೆಂದರೆ ಇಲ್ಲಿ ಯಾವುದೇ ವೃತ್ತಿಪರ ಸಿಬ್ಬಂದಿಗಳಿಲ್ಲ, ಒಬ್ಬ ಅಡುಗೆ ಸಹಾಯಕ ಹಾಗೂ ಕೇವಲ ೨ ರಿಂದ ೩ ಮಂದಿ ವಿಶೇಷ ಚೇತನ ವ್ಯಕ್ತಿಗಳ ಹಾಜರಾತಿಯೊಂದಿಗೆ ಕೇಂದ್ರವನ್ನು ನಡೆಸುತ್ತಿದ್ದಾರೆ ಎಂದು ದೂರಿ
ದ್ದಾರೆ.
ಈ ಆರೈಕೆ ಕೇಂದ್ರವನ್ನು ನಿರ್ವಹಿಸಲು ಸರಕಾರದಿಂದ ವಾರ್ಷಿಕವಾಗಿ ಲಕ್ಷಾಂತರ ರೂ.ಹಣ ಬರುತ್ತಿದೆ. ಕೇಂದ್ರದ ಉಸ್ತುವಾರಿ ವಹಿಸಿರುವ ವ್ಯಕ್ತಿ ತಿಂಗಳಿಗೆ ಸುಮಾರು ೨೦ ರಿಂದ ೩೦ ಫಲಾನುಭವಿಗಳ ಹಾಜರಾತಿಯನ್ನು ತೋರಿಸಿ ಹಣ ದುರುಪಯೋಗ ಪಡಿಸುತ್ತಿರುವುದು ಕಂಡು ಬಂದಿದೆ. ಮಾನಸಿಕ ಅಸ್ವಸ್ಥರಿಗೆ ಮಾಸಿಕ ರೂ.೨ ಸಾವಿರ ವೇತನವನ್ನು ನೀಡಲಾಗುತ್ತದೆ. ಮಡಿಕೇರಿ ತಾಲ್ಲೂಕಿಗೆ ಸಂಬAಧಿಸಿದAತೆ ಮಾನಸಿಕ ಅಸ್ವಸ್ಥರ ಪಾಲಕರಿಂದ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಪಡೆದು ಫಲಾನುಭವಿಗಳೆಂದು ತೋರಿಸಿ ಅವರ ಹೆಸರುಗಳನ್ನು ನೋಂದಾಯಿಸಿಕೊಳ್ಳಲಾಗುತ್ತಿದೆ. ಅವರ ಹಾಜರಾತಿಯನ್ನು ನಿತ್ಯ ತೋರಿಸಿ, ಅವರಿಗೆ ಸೇರಬೇಕಾದ ಮಾಸಿಕ ವೇತನವನ್ನು ಈ ವ್ಯಕ್ತಿಯೇ ಪಡೆಯುತ್ತಿರುವ ಕುರಿತು ಮಾಹಿತಿ ತಿಳಿದುಬಂದಿದೆ ಎಂದು ಮನ್ಸೂರ್ ಆಲಿ ಆರೋಪಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ ಒಬ್ಬನೇ ವ್ಯಕ್ತಿಯ ಉಸ್ತುವಾರಿಗೆ ಕೇಂದ್ರವನ್ನು ವಹಿಸಲಾಗುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂದರ್ಭ ನಗರಸಭಾ ಸದಸ್ಯ ಹಾಗೂ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಪಕ್ಷದ ನಗರಾಧ್ಯಕ್ಷ ಮಹಮ್ಮದ್ ಆಲಿ ಮತ್ತು ಕಾರ್ಯದರ್ಶಿ ಉಬೈದುಲ್ಲ ಹಾಜರಿದ್ದರು.