ಗೋಣಿಕೊಪ್ಪಲು, ಸೆ. ೨೧: ಶ್ರೀ ಕಾವೇರಿ ದಸರಾ ಸಮಿತಿ ಗೋಣಿಕೊಪ್ಪಲು, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ೪೭ನೇ ವರ್ಷದ ದಸರಾ ಜನೋತ್ಸವ-೨೦೨೫ರ ಪ್ರಯುಕ್ತ

ತಾ.೨೨ರಂದು (ಇಂದು) ನಗರದ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಬೆಳಿಗ್ಗೆ ೭ ಗಂಟೆಗೆ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾಪನೆಯೊಂದಿಗೆ ನವರಾತ್ರಿ ಕಾರ್ಯಕ್ರಮ ಆರಂಭಗೊಳ್ಳಲಿದೆ. ೯.೩೦ ಗಂಟೆಗೆ ಗೋಣಿಕೊಪ್ಪಲುವಿನ ಮುಖ್ಯ ರಸ್ತೆಯಲ್ಲಿ ಸಾಂಸ್ಕೃತಿಕ ರೋಡ್‌ಶೋ ನಡೆಯಲಿದೆ.

ಸಂಜೆ ೬ ಗಂಟೆಯಿAದ ೭.೩೦ರವರೆಗೆ ಕಾವೇರಿ ಕಲಾ ವೇದಿಕೆಯಲ್ಲಿ ಉದ್ಘಾಟನಾ ನೃತ್ಯಾಭಿನಯ ನಡೆಯಲಿದ್ದು ಗೋಣಿಕೊಪ್ಪಲುವಿನ ಸುವೃತ ನಾಟ್ಯಾಲಯದಿಂದ ‘ಗಜವದನ ಹೇರಂಬ’ ರಂಗಗೀತೆಗೆ ನೃತ್ಯಾಭಿನಯ ನಡೆಯಲಿದೆ. ೭.೩೦ ಗಂಟೆಗೆ ಸಾಂಸ್ಕೃತಿಕ ವೇದಿಕೆಯ ಉದ್ಘಾಟನಾ ಸಮಾರಂಭ ನಡೆಯಲಿದೆ. ೮.೩೦ ಗಂಟೆಗೆ ಗೋಣಿಕೊಪ್ಪಲುವಿನ ಎ ರಿಪ್ಲೆಕ್ಷನ್ ಸ್ಕೂಲ್ ಆಫ್ ಡ್ಯಾನ್ಸ್ ಮತ್ತು ಫಿಟ್ನೆಸ್ ಇವರಿಂದ ‘ಸಪ್ತಸ್ವರ ತಕಧಿಮಿತ ವಿಭಿನ್ನ ನೃತ್ಯ ಕಾರ್ಯಕ್ರಮಗಳು ಜರುಗಲಿವೆ.