ಮಡಿಕೇರಿ, ಸೆ. ೧೯: ಮರಗೋಡು ವ್ಯಾಪ್ತಿಯ ರೈತರಿಗೆ ಮರಗೋಡು ವ್ಯವಸಾಯ ಸೇವಾ ಸಹಕಾರ ಭವನದಲ್ಲಿ ಪೊನ್ನಂಪೇಟೆ ಕೃಷಿ ಮಹಾವಿದ್ಯಾಲಯದ ಸಹಯೋಗದಲ್ಲಿ ಜೇನು ಕೃಷಿ ಮತ್ತು ಇದರ ಮಹತ್ವದ ಬಗ್ಗೆ ವಿಶೇಷ ತರಬೇತಿ ಕಾರ್ಯಕ್ರಮ ಮತ್ತು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಮರಗೋಡು, ಕಟ್ಟೆಮಾಡು, ಐಕೊಳ, ಹೊಸ್ಕೇರಿ, ಅರೆಕಾಡು, ಹುಲಿತಾಳ ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೇನು ಕೃಷಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ಕಾರ್ಯಕ್ರಮವನ್ನು ನೆಸ್ಲೆ ಸಂಸ್ಥೆಯ ಅಧಿಕಾರಿ ಮೇಘನಾ ಅವರ ನೇತೃತ್ವದಲ್ಲಿ ನಡೆಯಿತು. ಪೊನ್ನಂಪೇಟೆ ಕೃಷಿ ವಿದ್ಯಾಲಯದ ಅಧಿಕಾರಿಗಳು ಪಾಲ್ಗೊಂಡಿದ್ದರು.