ಮಡಿಕೇರಿ, ಸೆ. ೧೯: ದಸರಾ ಆರಂಭದ ಹೊಸ್ತಿಲಿನಲ್ಲಿ ಮಡಿಕೇರಿಯ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಚುರುಕುಗೊಂಡಿದೆ.

ನಗರಸಭೆಯ ರೂ. ೧೦ ಲಕ್ಷ ಅನುದಾನದಲ್ಲಿ ದುಸ್ಥಿತಿಯಲ್ಲಿ ಕೂಡಿರುವ ನಗರದ ವಿವಿಧ ರಸ್ತೆಗಳ ಗುಂಡಿಯನ್ನು ಮುಚ್ಚುವ ಕೆಲಸವನ್ನು ಗುತ್ತಿಗೆದಾರರು ಕೈಗೊಂಡಿದ್ದಾರೆ. ಮಳೆ ಹಿನ್ನೆಲೆ ಕಾಮಗಾರಿ ಆರಂಭ ವಿಳಂಬವಾಗಿತ್ತು. ಇದೀಗ ಮಳೆ ವಿರಾಮ ನೀಡಿದ್ದು, ಕಾಮಗಾರಿಯನ್ನು ಆರಂಭಿಸಲಾಗಿದೆ.

ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಸದಸ್ಯ ಚಂದ್ರಶೇಖರ್, ಅರುಣ್ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು. ..