ಬೆಂಗಳೂರು, ಸೆ. ೧೮: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಡಿಯಾಕ್ ಯೂನಿಟ್ ಸ್ಥಾಪಿಸಲು ಉಪಕರಣ ಖರೀದಿಗೆ ರೂ. ೧೦.೮೯ ಕೋಟಿ ಹಣ ತಗುಲಿದ್ದು, ಮೆಡಿಕಲ್ ಕಾಲೇಜಿನ ಆಂತರಿಕ ಸಂಪನ್ಮೂಲ ಹಾಗೂ ಪರೀಕ್ಷಾ ಭರಿಸಲು ಪ್ರಾಧಿಕಾರದ ಹಣದಿಂದ ಇದನ್ನು ಭರಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿದೆ.
ಮೆಡಿಕಲ್ ಕಾಲೇಜಿನಲ್ಲಿ ಪಿಪಿಪಿ ಮಾದರಿಯಲ್ಲಿ ಕಾರ್ಡಿಯಾಕ್ ಯೂನಿಟ್‌ಗಳನ್ನು ಸ್ಥಾಪಿಸಿ ಹೃದ್ರೋಗಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಸ್ತಾಪವಾಗಿತ್ತು. ಇದಕ್ಕಾಗಿ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ರೂ. ೧೦.೮೯ ಕೋಟಿ ತಗುಲಿದ್ದು, ಈ ವೆಚ್ಚವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಮಂಜೂರು ಮಾಡಲಾಗಿರುವ ರೂ. ೫ ಕೋಟಿ ಹಾಗೂ ಮೆಡಿಕಲ್ ಕಾಲೇಜಿನ ಆಂತರಿಕ ಸಂಪನ್ಮೂಲದಿAದ ರೂ. ೫.೮೯ ಕೋಟಿ ಅನುದಾನದಿಂದ ಭರಿಸಲು ಸಚಿವ ಸಂಪುಟ ನಿರ್ಣಯಿಸಿದೆ.